ಜಮ್ಮು ಮತ್ತು ಕಾಶ್ಮೀರದ ಬಕ್ಷಿ ಕ್ರೀಡಾಂಗಣ ಈ ಮತ್ತೆ ಸ್ವಾತಂತ್ರ್ಯ ದಿನಾಚಣೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ತವಕದಲ್ಲಿದೆ. 5 ವರ್ಷಗಳ ನಂತರ ಇಲ್ಲಿ ಸ್ವಾತಂತ್ರ್ಯ ಕಾರ್ಯಕ್ರಮವನ್ನು ಸಂಭ್ರಮಿಸುತ್ತಿರುವುದು ವಿಶೇಷ
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಣೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಆಡಳಿತ ಮಾಹಿತಿ ನೀಡಿದೆ. ಶ್ರೀನಗರದ ನವೀಕೃತ ಬಕ್ಷಿ ಕ್ರೀಡಾಂಗಣವು ಐದು ವರ್ಷಗಳ ನಂತರ ಕಣಿವೆ ರಾಜ್ಯದಲ್ಲಿ ಮುಖ್ಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ಆಡಳಿತ ಮನವಿ ಮಾಡಿದೆ.
ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸೇನೆ ಮತ್ತು ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದು, ಎಲ್ಲರಿಗೂ ಕಾರ್ಯಕ್ರಮಕ್ಕೆ ಆಗಮಿಸಲು ಅನುಮತಿ ನೀಡಲಾಗಿದೆ. ಯಾವುದೇ ನಿರ್ಬಂಧ ವಿಧಿಸಿಲ್ಲ. ಬಕ್ಷಿ ಕ್ರೀಡಾಂಗಣ ಪ್ರವೇಶಿಸಲು ಪಾಸ್ ಅಗತ್ಯವಿಲ್ಲ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿ.ಕೆ. ಭಿದುರಿ ಅವರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪೂರ್ವಾಭ್ಯಾಸದ ಬಳಿಕ ಹೇಳಿದರು.
ಬಕ್ಷಿ ಕ್ರೀಡಾಂಗಣವು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಆಯೋಜಿಸಿದೆ. ಆದರೆ ನವೀಕರಣ ಕಾಮಗಾರಿಯಿಂದಾಗಿ 2018ರಲ್ಲಿ ಕ್ರೀಡಾಂಗಣವನ್ನು ಮುಚ್ಚಲಾಗಿತ್ತು. ಬಳಿಕ ಸೋನಾವರ್ನ ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಳೆದ ಐದು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್ಗಳು ನಡೆದಿದ್ದವು.
ಈ ಸುದ್ದಿ ಓದಿದ್ದೀರಾ? ಕೇರಳ | 2ನೇ ದಿನ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಭಾಗಿ
ಮುಖ್ಯಮಂತ್ರಿಗಳು ಸಾಮಾನ್ಯವಾಗಿ ಸಮಾರಂಭದ ಅಧ್ಯಕ್ಷತೆ ವಹಿಸುತ್ತಿದ್ದರು. ಆದರೆ ಚುನಾಯಿತ ಸರ್ಕಾರದ ಅನುಪಸ್ಥಿತಿಯಲ್ಲಿ, ಹಿಂದಿನ ರಾಜ್ಯದ ರಾಜ್ಯಪಾಲರು ಕಾರ್ಯಕ್ರಮಗಳ ಮೇಲುಸ್ತುವಾರಿ ವಹಿಸಿದ್ದಾರೆ.
370ನೇ ವಿಧಿ ರದ್ದತಿ ಮತ್ತು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮರುಸಂಘಟನೆಯ ನಂತರ ಕೇಂದ್ರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ಬಕ್ಷಿ ಕ್ರೀಡಾಂಗಣ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಆಡಳಿತದ ಪ್ರಕಟಣೆ ತಿಳಿಸಿದೆ.