ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸುವಂತೆ ಹೇಳುವ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ನ್ಯಾಯಾಧೀಶರಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ನ್ಯಾಯಾಲಯಗಳು ಹೇಗೆ ತೀರ್ಪುಗಳನ್ನು ಬರೆಯಬೇಕು ಎಂಬುದರ ಬಗ್ಗೆ ವಿವರಿಸಿದೆ.
ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಬಯಕೆಯನ್ನು ‘ಎರಡು ನಿಮಿಷಗಳ ಸಂತೋಷಕ್ಕೆ ಬಿಟ್ಟುಕೊಡುವ’ ಬದಲಿಗೆ ‘ನಿಯಂತ್ರಿಸಬೇಕು’ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡು ಈ ತೀರ್ಪು ನೀಡಿದೆ.
ಕೋಲ್ಕತ್ತಾ ಹೈಕೋರ್ಟ್‌ನ ಈ ಆದೇಶವು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಹದಿಹರೆಯದ ಹೆಣ್ಣು ಮತ್ತು ಗಂಡಿನ ನಡುವೆ ಲಿಂಗ ತಾರತಮ್ಯವನ್ನು ಈ ಆದೇಶದ ಮೂಲಕ ಹೈಕೋರ್ಟ್ ಮಾಡಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
Supreme Court sets aside Calcutta High Court order asking girls to control sexual urges
— Bar and Bench (@barandbench) August 20, 2024
Read full story: https://t.co/9bUM57BV8N pic.twitter.com/0ijX1GWKFd
ಈ ತೀರ್ಪಿನ ವಿಚಾರಣೆಯನ್ನು 2023ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಕೋಲ್ಕತ್ತಾ ಹೈಕೋರ್ಟ್‌ನ ಈ ಆದೇಶವು ಆಕ್ಷೇಪಾರ್ಹ, ಅಪ್ರಸ್ತುತ, ಉಪದೇಶ ಮತ್ತು ಅನಗತ್ಯ ಎಂದು ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ತೀರ್ಪು ತಪ್ಪು ಸಂಕೇತಗಳನ್ನು ರವಾನಿಸಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.