ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿರುವ ಕುರಿತು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಗುತ್ತಿರುವ ಜನಬೆಂಬಲ ಕಂಡು ಬಿಜೆಪಿಗೆ ಹೆದರಿಕೆ ಆಗಿದೆ.
ಹುಬ್ಬಳ್ಳಿ: ಬಿಜೆಪಿ ನಾಯಕರು ಡಿಸಿಸಿ ಬ್ಯಾಂಕ್‌ಗಳಲ್ಲಿ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ನಡೆಸುತ್ತಿದ್ದು, ಈ ಬಾಂಕ್‌ಗಳಿಂದ ರೈತರಿಗೆ ಅನುಕೂಲವಾಗುವ ಬದಲು ಬಿಜೆಪಿ ನಾಯಕರ ಆಸ್ತಿ ಖರೀದಿಗೆ ಬಳಕೆಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ಗಳ ಮೂಲಕ ಬಿಜೆಪಿ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುತ್ತಿದೆ. ಸಚಿವರ ಹಾಗೂ ಶಾಸಕರ ಕುಮ್ಮಕ್ಕಿನಿಂದ ಲೂಟಿ ಹೊಡೆಯುವ ತಂತ್ರ ನಡೆಯುತ್ತಿದೆ. ಹೀಗಾಗಿ ಸೌಹಾರ್ದ ಬಾಂಕ್ಯ್‌ಗಳಿಂದ ರೈತರಿಗೆ ಅನುಕೂಲ ಆಗುವ ಬದಲು ಬಿಜೆಪಿ ನಾಯಕರ ಆಸ್ತಿ ಖರೀದಿಗೆ ಬಳಕೆಯಾಗುತ್ತಿದೆ.
ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸೌಹಾರ್ದ ಬ್ಯಾಂಕುಗಳ ರಕ್ಷಣೆಗೆ ನಿಂತಿದ್ದಾರೆ. ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರದ ಸಹಕಾರಿ ಮತ್ತು ಅಪೆಕ್ಸ್ ಬ್ಯಾಂಕುಗಳಲ್ಲಿ ಕಾನೂನು ಬಿಟ್ಟು ಸಾಲ ಕೊಡುತ್ತಿದ್ದಾರೆ. ಇದರ ಹಿಂದೆ ಪರ್ಸಂಟೇಜ್ ವ್ಯವಹಾರ ಅಡಗಿದ್ದು, ನನ್ನ ಈ ಹೇಳಿಕೆ ಸುಳ್ಳಾದ್ರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ಇದೇ ವೇಳೆ ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿರುವ ಕುರಿತು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಗುತ್ತಿರುವ ಜನಬೆಂಬಲ ಕಂಡು ಬಿಜೆಪಿಗೆ ಹೆದರಿಕೆ ಆಗಿದೆ. ಈ ಹಿಂದೆ ಮೇಕೆದಾಟು ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಸಹ ಕೋವಿಡ್ ನೆಪವೊಡ್ಡಿದರು. ಅಲ್ಲದೇ ನನ್ನ ಹಾಗೂ ಸಿದ್ದರಾಮಯ್ಯ ಅವರ ಮೇಲೆ 4-5 ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದ ಡಿ.ಕೆ. ಶಿವಕುಮಾರ್, ಪಂಚಮಸಾಲಿ, ಒಕ್ಕಲಿಗರು ಮತ್ತು ಎಸ್.ಟಿ ಗಳೂ ಮೀಸಲಾತಿ ಗಡುವು ನೀಡಿದ್ದು, ಅವರ ಹಕ್ಕುಗಳಿಗೆ ನಮ್ಮ ತಕರಾರಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.