ನಟಿ ಶುಭಾ ಪೂಂಜಾ ಅವರ ಆರೋಗ್ಯ ಸಮಸ್ಯೆಯಿಂದ ಕೊನೆಯೂಸಿರೆಳೆದಿದ್ದಾರೆ.. ಈ ಬಗ್ಗೆ ನಟಿ ಶುಭಾ ಪುಂಜಾ ಅವರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ತಾಯಿಯ ನಿಧನಕ್ಕೆ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ..

ಅಮ್ಮ ನನ್ನನ್ನ ನೀನು ಯಾಕೆ ಬಿಟ್ಟು ಹೋದೆ, ನೀನು ಇಲ್ಲದೇ ನನಗೆ ಜೀವನವೇ ಇಲ್ಲ. ನಿನ್ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. 24 ಗಂಟೆ ನಿನ್ನ ಜೊತೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ? ಎಲ್ಲಿ ಹೋಗಲಿ? ಯಾರಿಗೋಸ್ಕರ ವಾಪಸ್ಸು ಮನೆಗೆ ಬರಲಿ. ನನ್ನ ಇಡೀ ಜೀವನವೇ ನೀನಾಗಿದ್ದೆ. ನನ್ನ ಯಾಕೆ ಬಿಟ್ಟು ಹೋದೆ’ ಎಂದ ಇನ್ಸ್ಟಾಗ್ರಾಮ್ನಲ್ಲಿ ಶುಭಾ ಪೂಂಜಾ ಬರೆದುಕೊಂಡಿದ್ದಾರೆ.

ಇನ್ನು 70 ವರ್ಷದ ಶುಭಾ ಪೂಂಜಾ ಅವರ ತಾಯಿಗೆ ನ್ಯಮೋನಿಯಾ ಅಟ್ಯಾಕ್ ಆಗಿ ಅಂಗ್ಸ್ನಲ್ಲಿ ನೀರು ತುಂಬಿಕೊಂಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಇಂದು ವಿಧಿವಶರಾಗಿದ್ದಾರೆ.. ಶುಭಾ ಪೂಂಜಾ ಅವರ ತಾಯಿಯ ಆಸೆಯಂತೆ ನಾಳೆ ಅಂತಿಮ ಕಾರ್ಯಗಳು ಮಂಗಳೂರಿನಲ್ಲಿ ಮಾಡಲಾಗಿದೆ.