ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಹಾಗೂ ನಟಿ ಶ್ರುತಿ ಹಾಸನ್, ಸದ್ಯ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಫೋಟೋವೊಂದನ್ನ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಟೋ ಸಖತ್ ವೈರಲ್ ಆಗ್ತಿದೆ. ಶ್ರುತಿ ಹಾಸನ್ ಆಗಾಗ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಫೋಟೋಗಳನ್ನ ಹಂಚಿಕೊಳ್ಳುತ್ತಿರ್ತಾರೆ. ಆದ್ರೆ ಈ ಸಲ ಬೆಡ್ ರೂಮ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಶ್ರುತಿ ಹಾಸನ್ ಸುದ್ದಿಯಾಗಿದ್ದಾರೆ.
ಶ್ರುತಿ ಹಾಸನ್ ಮತ್ತು ಶಾಂತನು ಅನೇಕ ವರ್ಷಗಳಿಂದ ರಿಲೇಷನ್ ಶಿಪ್‌ನಲ್ಲಿದ್ದಾರೆ. ಅಷ್ಟೇ ಅಲ್ಲ.. ಪೋಷಕರು ಸಹ ಇವರಿಬ್ಬರ ಪ್ರೇಮಕ್ಕೆ ಅಸ್ತು ಎಂದಿದ್ದು, ಸದ್ಯ ಇವರಿಬ್ಬರು ಮುಂಬೈನಲ್ಲಿ ಒಂದೇ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಆಗಾಗ ತಮ್ಮ ಬಾಯ್‌ಫ್ರೆಂಡ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡ್ತಿದ್ದ ಶ್ರುತಿ ಹಾಸನ್ ಈಗ ಬೆಡ್ ರೂಮ್‌ನಲ್ಲಿರುವ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದಾರೆ.
ಇಬ್ಬರೂ ಅರೆನಗ್ನರಂತೆ ಕಾಣುವ ಫೋಟೋವೊಂದನ್ನು ಶೇರ್ ಮಾಡಿರುವ ಶ್ರುತಿ ಹಾಸನ್, ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರ್ತೀನಿ ಅಂತ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ