ನಟಿ ಓವಿಯಾ ಹೆಲೆನ್ (Actress oiya helen), ಕಿರಾತಕ ಸಿನಿಮಾದಲ್ಲಿ (Kirataka) ಯಶ್ (yash) ಜೊತೆಗೆ ನಟಿಸಿದ್ದ ದಕ್ಷಿಣ ಭಾರತದ ಈ ನಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಓವಿಯಾದು ಎನ್ನಲಾದ 16 ಸೆಕೆಂಡ್ಗಳ ಖಾಸಗಿ ವಿಡಿಯೋ ಹಲ್ ಚಲ್ ಎಬ್ಬಿಸಿದೆ.
ಈ ವಿಡಿಯೋ ಸಂಬಂಧ ನಟಿ ಕೇರಳಾದ (Kerala) ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಇದೀಗ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ನಟಿ ಓವಿಯಾ ಮಾಜಿ ಗೆಳೆಯ ತಾರಿಖ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಆತನ ಕೆಟ್ಟ ನಡುವಳಿಕೆಗಳಿಂದ ನಾನು ಇತ್ತೀಚೆಗೆ ಆತನಿಂದ ದೂರವಾಗಿದ್ದೆ. ಹೀಗಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾನೆ. ಮಾರ್ಫ್ ಮಾಡಿರೋ ವಿಡಿಯೋ (Morph video) ಹರಿಬಿಟ್ಟು ಕೋಪ ತೀರಿಸಿಕೊಳ್ತಿರೋದಾಗಿ ದೂರಲ್ಲಿ ಉಲ್ಲೇಖಿಸಲಾಗಿದೆ.