• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಿವಿ ಲೈವ್‌ನಲ್ಲೇ ನಟ ರಾಜ್‌ ತರುಣ್‌ ಸ್ನೇಹಿತನಿಗೆ ಚಪ್ಪಲಿಯಲ್ಲಿ ಹೊಡೆದ ನಟಿ ಲಾವಣ್ಯ!

ಪ್ರತಿಧ್ವನಿ by ಪ್ರತಿಧ್ವನಿ
August 3, 2024
in Top Story, ಇತರೆ / Others
0
Share on WhatsAppShare on FacebookShare on Telegram

ಹೈದರಾಬಾದ್‌: ಟಾಲಿವುಡ್‌ ನಟ ರಾಜ್‌ ತರುಣ್‌ ಹಾಗೂ ನಟಿ ಲಾವಣ್ಯ ನಡುವಿನ ಭಿನ್ನಾಭಿಪ್ರಾಯವೀಗ ವಿಕೋಪಕ್ಕೆ ತಿರುಗಿದೆ. ಹೆಚ್ಚೂ ಕಡಿಮೆ ಇದು ಗುರುವಾರ ಬೀದಿರಂಪವಾಗಿದೆ. ರಾಜ್‌ ತರುಣ್‌ ಅವರ ಮಾಜಿ ಗೆಳತಿ ಆಗಿರುವ ಲಾವಣ್ಯ ಇತ್ತೀಚೆಗೆ ನಟ ನನಗೆ ಮೋಸ ಮಾಡಿದ್ದಾನೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಗುರುವಾರ ಖಾಸಗಿ ಟಿವಿಯ ಸಂದರ್ಶನದಲ್ಲಿ ಆಕೆ ಭಾಗಿಯಾಗಿದ್ದರು. ಇಲ್ಲಿ ರಾಜ್‌ ತರುಣ್‌ ಪರವಾಗಿ ಮಾತನಾಡಲು ಅವರ ಸ್ನೇಹಿತ ಶೇಖರ್‌ ಬಾಷಾ ಬಂದಿದ್ದರು. ಲೈವ್‌ ಡಿಬೇಟ್‌ನಲ್ಲಿ ವಾದ ವಿವಾದ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಒಂದು ಹಂತದಲ್ಲಿ ಶೇಖರ್‌ ಬಾಷಾ ಮಾತಿಗೆ ಸಿಟ್ಟಾದ ಲಾವಣ್ಯಾ ಆನ್‌ ಕ್ಯಾಮೆರಾದಲ್ಲಿಯೇ ಶೇಖ್‌ ಪಾಶಾಗೆ ಕಾಲಲ್ಲಿದ್ದ ಚಪ್ಪಲಿ ತೆಗೆದು ಹೊಡೆದಿದ್ದರು.

ADVERTISEMENT

ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಝೀ ತೆಲುಗು ನ್ಯೂಸ್‌ನಲ್ಲಿ ನಡೆದ ಆಕ್ರೋಶದ ಡಿಬೇಟ್‌ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಕಳೆದೆರಡು ವಾರಗಳಿಂದ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ತರುಣ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಾಷಾ ಅವರನ್ನು ಲಾವಣ್ಯ ಅವರ ಪ್ರತಿ ಮಾತಿಗೂ ಉತ್ತರ ನೀಡುತ್ತಿದ್ದರು.

ವಿಡಿಯೋದಲ್ಲಿ ಬಾಷಾ ಟಿವಿ ನಿರೂಪಕನ ಜತೆ ಮಾತನಾಡುತ್ತಿರುವಾಗಲೇ ಲಾವಣ್ಯ ತನ್ನ ಕಾಲಿನಲ್ಲಿರುವ ಚಪ್ಪಲಿಯನ್ನು ತೆಗೆಯುತ್ತಿರುವುದು ಗೊತ್ತಾಗಿದೆ. ನೋಡ ನೋಡುತ್ತಿದ್ದಂತೆ, ಲಾವಣ್ಯ ಚಪ್ಪಲಿಯನ್ನು ಆತನ ಮೇಲೆ ಎಸೆದಿದ್ದಾರೆ. ಈ ವೇಳೆ ಚರ್ಚೆಗೆ ಬಂದಿದ್ದ ಮೂರನೇ ವ್ಯಕ್ತಿ ಶಾಕ್‌ ಆಗಿದ್ದಾರೆ. ಚಪ್ಪಲಿ ಎಸೆದ ಬೆನ್ನಲ್ಲಿಯೇ ತನ್ನ ಕುರ್ಚಿಯಿಂದ ಮೇಲೆದ್ದ ಬಾಷಾ, ಮತ್ತೊಮ್ಮೆ ಚಪ್ಪಲಿಯಲ್ಲಿ ಹೊಡೆಯುವಂತೆ ಲಾವಣ್ಯಗೆ ಸವಾಲ್‌ ಎಸೆದಿದ್ದಾರೆ. ಲೈವ್ ಟೆಲಿವಿಷನ್‌ನಲ್ಲಿ ನಡೆದ ವಾಗ್ವಾದವು ನಂತರ ವೈರಲ್ ಆಗಿದೆ.

Shoes thrown in live debate, Not hindi but south debate did is first😭 pic.twitter.com/lO3oI63jBm

— Lala (@FabulasGuy) August 1, 2024

ನಟಿ ಮಾಳವಿ ಮಲ್ಹೋತ್ರಾಗಾಗಿ ರಾಜ್‌ ತರುಣ್‌ ತನ್ನನ್ನು ತೊರೆದಿದ್ದಾನೆ ಎಂದು ನಟಿ ಲಾವಣ್ಯ ದೂರಿದ್ದಾರೆ. ಆದರೆ ರಾಜ್‌ ತರುಣ್‌ ಕಡೆಯ ವಾದವೇನೆಂದರೆ, ಲಾವಣ್ಯ ಅತಿಯಾಗಿ ಮಾದಕ ದ್ರವ್ಯ ಸೇವನೆ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಕಾನೂನಿನ ಸಮಸ್ಯೆಗೂ ಒಳಗಾಗಿದ್ದಾರೆ. ಆ ಕಾರಣದಿಂದ ಆಕೆಯಿಂದ ದೂರವಾಗಿದ್ದಾಗಿ ತಿಳಿಸಿದ್ದಾರೆ.

ರಾಜ್‌ ತರುಣ್‌ ಸ್ನೇಹಿತನ ಈ ಮಾತಿನಿಂದ ಸಿಟ್ಟಾದಂತೆ ಲಾವಣ್ಯ ಕಂಡಿದ್ದರು. ಲಾವಣ್ಯ ಯುವಕರಲ್ಲಿ ಮಾದಕ ವಸ್ತು ಸೇವನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಬಾಷಾ ಆರೋಪ ಮಾಡಿದಾಗ, ಲಾವಣ್ಯ ಸಿಟ್ಟು ನೆತ್ತಿಗೇರಿದೆ. ತಕ್ಷಣವೇ ಕಾಲಲ್ಲಿದ್ದ ಚಪ್ಪಲಿಗೆ ಕೈಗೆ ಬಂದಿದ್ದು ಮಾತ್ರವಲ್ಲ, ಸೀದಾ ಶೇಖರ್‌ ಬಾಷಾನತ್ತ ಎಸೆದಿದ್ದಾರೆ. ನೇರಪ್ರಸಾರದಲ್ಲಿಯೇ ನಡೆದ ಈ ಘಟನೆಯ ಬಳಿಕ ಸನ್ನಿವೇಶ ಮತ್ತಷ್ಟು ಹೀಟ್‌ಅಪ್‌ ಆಗಿತ್ತು. ತರುಣ್ ಅವರನ್ನು ಸಮರ್ಥಿಸಿಕೊಳ್ಳಲು ಚರ್ಚೆಗಳು ಮತ್ತು ಸಂದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಬಾಷಾ, ಲಾವಣ್ಯ ಅವರ ಹೇಳಿಕೆಗಳನ್ನು ಎದುರಿಸಲು ಈ ಹಿಂದೆ ಕರೆ ದಾಖಲೆಗಳು ಮತ್ತು ಸಂದೇಶಗಳನ್ನು ಪ್ರದರ್ಶಿಸಿದ್ದರು.

ಇನ್ನೊಂದಡೆ ಈ ವಿಚಾರದಲ್ಲಿ ಮಾಧ್ಯಮಗಳ ಎದುರು ಮಾತನಾಡಲು ನಿರಾಕರಿಸಿರುವ ರಾಜ್‌ ತರುಣ್‌, ಆಕೆ ಮಾದಕವಸ್ತು ಸೇವನೆ ಮಾಡುತ್ತಾಳೆ. ಅದಲ್ಲದೆ, ಮಸ್ತಾನ್‌ ಸಾಯಿ ಎನ್ನುವ ವ್ಯಕ್ತಿಯೊಂದಿಗೆ ಆಕೆಗೆ ಕಾನೂನು ತೊಡಕುಗಳಿವೆ ಎನ್ನುವ ಮಾಹಿತಿ ನೀಡಿ ಸುಮ್ಮನಾಗಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳ ಎದುರು ಮಾತನಾಡಲು ನಿರಾಕರಿಸಿರುವ ರಾಜ್‌ ತರುಣ್‌, ಕಾನೂನಿನ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'#[pratidhvanidigital#ambarish #rebalstar #kannadafilmindustry #bangalore #kanteeravastudio #cm #basavarajabommai #evening #pratidhvani #pratidhvanidigital #pratidhvaninews
Previous Post

ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಸಿಎಂ…

Next Post

ಡೋಲು ಬಾರಿಸಿದ BSY, HDK ಕಹಳೆ ಓದಿದ BJP ನಾಯಕರು.!

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

April 30, 2026
Next Post

ಡೋಲು ಬಾರಿಸಿದ BSY, HDK ಕಹಳೆ ಓದಿದ BJP ನಾಯಕರು.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada