• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಣ್ಣ ಬದಲಾವಣೆ, ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ: ಯಶ್

ಪ್ರತಿಧ್ವನಿ by ಪ್ರತಿಧ್ವನಿ
August 11, 2022
in ಕರ್ನಾಟಕ, ಸಿನಿಮಾ
0
ಸಣ್ಣ ಬದಲಾವಣೆ, ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ: ಯಶ್
Share on WhatsAppShare on FacebookShare on Telegram

ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ADVERTISEMENT

ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವದಲ್ಲಿ ಮಾತನಾಡಿದ ಅವರು, ಮೈಸೂರು ನಮ್ಮೂರು. ಇಲ್ಲಿನ ಪಡುವಾರಹಳ್ಳಿ, ಕಾಳಿದಾಸ ರಸ್ತೆ ಹಾಗೂ ಗಂಗೋತ್ರಿಯಲ್ಲಿ ಓಡಾಡಿದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ. ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ನಾನೇನು ಹೆಚ್ಚು ಬದಲಾಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.

ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನು ಜನರ ಮನೆ ಮುಂದೆ ತರಲು ಸರಕಾರಕ್ಕೂ ಕಷ್ಟಸಾಧ್ಯ. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಹುಚ್ಚು ಆತ್ಮ ವಿಶ್ವಾಸ ಇರಬೇಕು. ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಾ ಅಂತ ಯಾರಾದರೂ ಊಹೆ ಮಾಡಿದ್ರಾ? ನೀವು ಒಳ್ಳೆಯದನ್ನ ಮಾತಾಡ್ತಾ, ಯೋಚನೆ ಮಾಡ್ತಾ ಹೋಗಿ. ತಂತಾನೆ ಅದು ಒಳ್ಳೆಯದಾಗುತ್ತದೆ. ನೀವು ಒಳ್ಳೆಯದು ಮಾಡ್ತಾ ಹೋಗಿ.

ನಮ್ಮೊಳಗೆ ಸರ್ಕಾರ ಹುಟ್ಟಬೇಕು. ಪ್ರತಿಯೊಬ್ಬ ತನ್ನ ವೃತ್ತಿಯಲ್ಲಿ ಕಷ್ಟಪಟ್ಟು ಮುಂದೆ ಬರುವ ಮೂಲಕ‌ದೇಶದ ಪ್ರಗತಿ ಸಾಧಿಸಬಹುದು. ಹಳ್ಳಿಯ ಮೂಲೆಯಿಂದ ಬೆಳೆಯಬಹುದು. ನಿಮ್ಮಲ್ಲಿ ಸಾಧಿಸುವ ಚಲ ಇದ್ದರೆ ಗೆಲುವು ಸಾಧ್ಯ ಎಂದಿದ್ದಾರೆ.

ಮಜಾ ಮಾಡಿ, ತುಂಬಾ ಸೀರಿಯಸ್ ಆಗಬೇಡಿ. ಸಣ್ಣ ಸಣ್ಣ ಖುಷಿ ಅನುಭವಿಸಿ. ಫ್ರೆಂಡ್ಸ್ ಜೊತೆ ಸುತ್ತಾಡಿ, ಜೀವನ ಅನುಭವಿಸಿ. ಸಿಎಂ ಹಲವು ಕನಸು ಹೊಂದಿದ್ದಾರೆ. ಅವರ ಕನಸುಗಳೆಲ್ಲ ಈಡೇರಲಿ ಎಂದು ಆಶಿಸಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕುಮಾರಸ್ವಾಮಿ ಡ್ರಾಮಾ ಕಣ್ಣೀರು: ಅಶ್ವಥ್‌ ನಾರಾಯಣ ವ್ಯಂಗ್ಯ

Next Post

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ, 3 ಯೋಧರು ಹುತಾತ್ಮ

Related Posts

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!
Top Story

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

by ಪ್ರತಿಧ್ವನಿ
May 17, 2026
0

ಬೆಳಗಾವಿ :  ಜಿಲ್ಲೆಯ ಅಥಣಿ ಪೊಲೀಸ ಠಾಣೆ ಪೊಲೀಸರಿಂದ ಅಂತರರಾಜ್ಯ ಕಳ್ಳರ ಬಂಧನವಾಗಿದೆ. ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಮಹಿಳೆಯರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. https://youtu.be/BtLGSWTPzoI?si=3rJNabYZihcV_coL...

Read moreDetails
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
Next Post
ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ, 3 ಯೋಧರು ಹುತಾತ್ಮ

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ, 3 ಯೋಧರು ಹುತಾತ್ಮ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada