ಚಂದನವನದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಸೋಮವಾರ (ಆಗಸ್ಟ್ 7) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಸ್ಪಂದನ ಅವರು ಭಾನುವಾರ ಬ್ಯಾಂಕಾಕ್‌ಗೆ ತೆರಳಿದ್ದಾಗ ಅಲ್ಲಿ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಸನಿಹದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ವಿಜಯ್ ಅವರ ಪತ್ನಿ ಸ್ಪಂದನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮಂಗಳವಾರ ಬೆಂಗಳೂರಿಗೆ ವಿಜಯ್ ಅವರ ಪತ್ನಿ ಸ್ಪಂದನ ಅವರ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಈ ತಿಂಗಳು ವಿಜಯ್ ರಾಘವೇಂದ್ರ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ತಯಾರಿಯಲ್ಲಿದ್ದರು ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿರೋಧ ಪಕ್ಷದ ನಾಯಕನ ಸ್ಥಾನ ಇನ್ನಾದ್ರೂ ಭರ್ತಿ ಆಗುತ್ತಾ..?
ಸದ್ಯ ಕುಟುಂಬದ ಸದಸ್ಯರು ಬ್ಯಾಂಕಾಕ್ಗೆ ತೆರಳಿದ್ದಾರೆ ಎನ್ನಲಾಗಿದೆ, ನಟ ವಿಜಯ್ ರಾಘವೇಂದ್ರ ಅವರು 2007ರ ಆಗಸ್ಟ್ 26 ರಂದು ಸ್ಪಂದನ ಅವರನ್ನು ವಿವಾಹವಾಗಿದ್ದರು. ಸ್ಪಂದನ ಅವರು ಸಹಾಯಕ ಪೊಲೀಸ್ ಆಯುಕ್ತ ಬಿ.ಕೆ ಶಿವರಾಂ ಅವರ ಪುತ್ರಿ. ಇವರಿಗೆ ಶೌರ್ಯ ಎಂಬ ಪುತ್ರ ಇದ್ದಾನೆ.