ಮುಂಬೈ:ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆ ಸೇರಿದ್ದ ಬಾಲಿವುಡ್ ನಟ ಗೋವಿಂದ ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ.ಅಕ್ಟೋಬರ್ 1ರಂದು ಮನೆಯಲ್ಲಿ ತಮ್ಮದೇ ಲೈಸೆನ್ಸ್ಡ್ ರಿವಾಲ್ವರ್ ಕ್ಲೀನ್ ಮಾಡ್ತಿದ್ದ ವೇಳೆ ಕಾಲಿಗೆ ಮಿಸ್ ಫೈರ್ ಆಗಿತ್ತು. ಈ ವೇಳೆ ರಿವಾಲ್ವರ್ ಕ್ಲೀನ್ ಮಾಡುವ ವೇಳೆ ಗೋವಿಂದ ಎಡಕಾಲಿಗೆ ಗುಂಡು ತಗುಲಿತ್ತು.
ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಇದೀಗ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
https://www.instagram.com/reel/DAscvwTMitS/?igsh=YXI3aGp4Zmd4dnRu
ವೀಲ್‌ಚೇರ್‌ನಲ್ಲಿಯೇ ಮನೆಗೆ ತೆರಳಿದ ಗೋವಿಂದ ಮೂರ್ನಾಲ್ಕು ವಾರಗಳಲ್ಲಿ ಸಂಪೂರ್ಣ ಗುಣಮುಖವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
https://www.instagram.com/reel/DAscDTbC3-q/?igsh=aXA3bW9hYmpwZHkx