ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy murder case) ದರ್ಶನ್ ಹಾಗೂ ಉಕಿದ ಆರೋಪಿಗಳ ರೆಗ್ಯುಲರ್ ಬೇಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಈಗಾಗಲೇ ನಟ ದರ್ಶನ್ (Actor Darshan) ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಚಿಕಿತ್ಸೆ ಪಡೆಯುತ್ತಿದ್ದು, ರೆಗ್ಯೂಲರ್ ಜಾಮೀನು ಭವಿಷ್ಯ ಏನಾಗಬಹುದು ಎಂದು ಇಂದು ನಿರ್ಧಾರವಾಗಲಿದೆ. ಇಂದು ಮಧ್ಯಾಹ್ನ 2.30ಕ್ಕೆ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ.
ಈಗಾಗಲೇ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದ ಕಾರಣ ಮಧ್ಯಂತರ ಜಾಮೀನು ನೀಡಲಾಗಿದ್ದು ಕಳೆದ ಐದು ವಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಪರ ವಕೀಲರು ರೆಗ್ಯುಲರ್ ಜಾಮೀನು (Regular bail) ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.
ನಟ ದರ್ಶನ್ ಪರವಾಗಿ ವಕೀಲರಾದ ಸಿವಿ ನಾಗೇಶ್ (CV nagesh) ಈಗಾಗಲೇ ವಾದ ಮಂಡಿಸಿದ್ದು, ಮತ್ತೊಂದೆಡೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ಪ್ರತಿವಾದ ಮಂಡಿಸಿದ್ದಾರೆ. ಆದ್ರೆ ರೆಗ್ಯುಲರ್ ಬೇಲ್ ಬಗ್ಗೆ ಇಂದು ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.