ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಅನಿರುದ್ಧ್ ಅವರನ್ನು ಕಿರುತೆರೆಯಿಂದ ೨ ವರ್ಷ ನಿಷೇಧಿಸಲಾಗಿದೆ.
ಜೊತೆ ಜೊತೆಯಲಿ ಚಿತ್ರ ತಂಡದ ಜೊತೆಗಿನ ಮನಸ್ತಾಪ ವಿಕೋಪಕ್ಕೆ ಹೋಗಿದ್ದು, ನಿರ್ಮಾಪಕ ಆರೂರು ಜಗದೀಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ೨ ವರ್ಷ ನಿಷೇಧಿಸಿ ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ.
ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು, ಅನಿರುದ್ಧ್ ಅವರನ್ನ ಬ್ಯಾನ್ ಮಾಡಿಲ್ಲ.. ಆದರೆ ಅವರನ್ನು ಎರಡು ವರ್ಷ ಅವರನ್ನು ಕಿರುತೆರೆಯಿಂದ ದೂರ ಇಡುತ್ತಿದ್ದೇವೆ. ಏಕೆಂದರೆ ಅನಿರುದ್ಧ್ ಅವರು ಜೊತೆ ಜೊತೆಯಲಿ ಸೀರಿಯಲ್ನ ನಿರ್ದೇಶಕ ಮಧು ಉತ್ತಮ್ ಅವರಿಗೆ ಮೂರ್ಖ ಅಂತ ಕರೆದಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ನಿರ್ದೇಶಕರಿಗೆ ನಿಂಧಿಸಿ ಶೂಟಿಂಗ್ ಸೆಟ್ ನಿಂದ ಹೊರ ಹೋಗಿದ್ದಾರೆ.

ಅನಿರುದ್ಧ್ ಅವರ ವರ್ತನೆಯಿಂದ ಜೊತೆ ಜೊತೆಯಲಿ ನಿರ್ಮಾಪಕ ಆರೋರು ಜಗದೀಶ್ ಇದರಿಂದ ಬೇಸತ್ತು ಹೋಗಿದ್ದಾರೆ. ನಿರ್ಮಾಪಕರು ಇದರಿಂದ ಖಿನ್ನತೆಗೆ ಒಳಗಾಗಿ ಕಣ್ಣಲ್ಲಿ ನೀರು ಹಾಕಿದ್ರು. ಈ ಬಗ್ಗೆ ಆರೋರು ಜಗದೀಶ್ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ದೂರಿನ ಮೇರೆಗೆ ಕಿರುತೆರೆ ನಿರ್ಮಾಪಕ ಸಂಘ ಸಭೆ ಸೇರಿ ಇನ್ಮುಂದೆ ಅನಿರುದ್ಧ್ ಅವರಿಗೆ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ಅಂತ ನಿರ್ಧರಿಸಿದ್ದೇವೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹೇಳಿದ್ದಾರೆ.