ಭಾರಿ ಮಳೆಯಿಂದ ನಲುಗಿದ ತೆಲುಗು ರಾಜ್ಯಗಳ ವಿವಿಧ ಪ್ರದೇದ ಜನರ ನೆರವಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂದಿದ್ದು, ಎರಡೂ ರಾಜ್ಯಗಳ ನೆರೆ ಪೀಡಿತರಿಗಾಗಿ 1 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಜನ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಅಲ್ಲು ಅರ್ಜುನ್ (Allu Arjun) ಜನರ ಸಹಾಯಕ್ಕೆ ನಿಂತಿದ್ದರು. ಈಗ ಅದು ಮತ್ತೆ ಮುಂದುವರೆದಿದೆ. ತಾನು ಜನರನ್ನು ರಂಜಿಸುವುದು ಮಾತ್ರವಲ್ಲ ಜನರ ಸಂಕಷ್ಟಕ್ಕೂ ಮಿಡಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಈ ಮೂಲಕ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
ʼಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ (Andra Pradesh and Telangana State) ಕೆಲ ಪ್ರದೇಶದ ಜನ ಜನ ಮಳೆಯಿಂದಾಗಿ ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ನನ್ನ ಮನಸ್ಸಿಗೆ ತೀರ್ವ ನೋವುಂಟು ಮಾಡಿದೆ. ಅವರ ಕಷ್ಟಕ್ಕೆ ನನ್ನ ಕಡೆಯಿಂದ ತಲಾ 1 ಕೋಟಿ ರೂಪಾಯಿಗಳನ್ನು (1Crore Rupees for CM Fund) ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೆ. ಆದಷ್ಟು ಬೇಗ ಎಲ್ಲರೂ ಸಂಕಷ್ಟದಿಂದ ಪಾರಾಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆʼಎಂದು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.