
ಬೆಂಗಳೂರು :ಸರ್ಕಾರಿ ಆಸ್ತಿ ಮುಟ್ಟುಗೋಲಿಗೆ ಪೊಲೀಸ್ ಅಧಿಕಾರಿಯೇ ಅಡ್ಡಗಾಲು.ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿರುವ ಘಟನೆ.

ಸರ್ಕಾರಿ ಆಸ್ತಿ ಕಬಳಿಸಿರೊ ಕಳ್ಳರ ಪರ ನಿಂತ್ರಾ ಎಸಿಪಿ ಉಮಾಶಂಕರ್ ..? ಅಂತಹದೊಂದು ಅನುಮಾನಕ್ಕೆ ಉಮಾಶಂಕರ್ ನಡೆ ಎಡೆ ಮಾಡಿದೆಬೆಂಗಳೂರು ಅಭಿವೃದ್ಧಿ ಸಚಿವರೇ ಹಾಗೂ ಬಿಡಿಎ ಅಧ್ಯಕ್ಷರೇ ನಿಮಗಿದು ಗೊತ್ತಾ..? ಗೊತ್ತಿಲ್ಲ ಅಂದ್ರೆ ಈ ಸ್ಟೋರಿಯನ್ನ ನೀವು ನೋಡಲೇ ಬೇಕು.ಬಿಡಿಎ ಆಸ್ತಿ ಒತ್ತುವರಿ, ಅತಿಕ್ರಮ ಪ್ರವೇಶ ಮಾಡಿದ್ರೆ ಬಿಡಲ್ಲ ಅನ್ನೋ ಹೇಳಿಕೆಗೆ ತದ್ವಿರುದ್ಧವಾಗಿದೆ ಈ ಅಧಿಕಾರಿ ನಡೆ.ಬಿಡಿಎ. ಅಧಿಕಾರಿಗಳ ಅನಧಿಕೃತ ಕಟ್ಟಡ ಡೆಮಾಲಿಷನ್ ಗೆ ಎಸಿಪಿಯಿಂದ ಅಡ್ಡಿ..? ಇಂತಹೊಂದು ಆರೋಪ ಬಾಣಸವಾಡಿ ಎಸಿಪಿ ಉಮಾಶಂಕರ್ ಮೇಲೆ ಕೇಳಿ ಬಂದಿದೆ.
ಎಚ್ ಬಿ ಆರ್ ಲೇಔಟ್ ನಲ್ಲಿ ಪ್ರಭಾಕರ್ ರೆಡ್ಡಿ ಅನ್ನೋರು ಬಿಡಿಎ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸ್ತಿದ್ರು.ಹೀಗಾಗಿ ಡೆಮಾಲಿಷನ್ ಆರ್ಡರ್ ಪಡೆದು ಬಿಡಿಎ ಅಧಿಕಾರಿಗಳು ತೆರವಿಗೆ ಮುಂದಾಗಿದ್ರುಎಇಇ ವಾಸುದೇವಮೂರ್ತಿ ನೇತೃತ್ವದಲ್ಲಿ ಡೆಮಾಲಿಷನ್ ಗೆ ಮುಂದಾಗಿದ್ರು.
ಈ ವೇಳೆ ಸ್ಪಾಟ್ ಗೆ ಬಂದು ಎಸಿಪಿ ಉಮಾಶಂಕರ್ ಅಡ್ಡಿ ಪಡಿಸಿದ ಆರೋಪದೂರು ಬಂದಿದೆ ನಿಮ್ಮ ಡಾಕ್ಯುಮೆಂಟ್ಸ್ ತಗೊಂಡು ಸ್ಟೇಷನ್ ಗೆ ಬನ್ನಿ ಅಂತಾ ಬಿಡಿಎ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾರೆ ಎಸಿಪಿ ಉಮಾಶಂಕರ್.
ಇಷ್ಟಕ್ಕೆ ಸುಮ್ಮನಾಗದ ಎಸಿಪಿ ಸಾಹೇಬ್ರು ಪಾಪ ಕೂಲಿ ಕಾಸಿಗೆ ಬಂದಿದ್ದ ಜೆಸಿಬಿ ಡ್ರೈವರ್ ಮೇಲೆ ಹಲ್ಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಅವನ್ಯಾರ್ರಿ ಜೆಸಿಬಿ ಡ್ರೈವರ್ , ಕೀ ಕೊಡು ಅಂದ್ರೆ ಕೊಡಲ್ವಾ ಅಂತಾ ಕಪಾಳ ಮೋಕ್ಷ ಮಾಡಿದ್ದು.ಅಲ್ಲದೆ ಜೆಸಿಬಿ ಹಾಗು ಡ್ರೈವರ್ ಗಳನ್ನ ಸ್ಟೇಷನ್ ಗೆ ಕರೆದೊಯ್ದು ಮಾನಸಿಕ ಹಿಂಸೆ ಮಾಡಿದ್ದಾರೆ.
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಕ್ಕೆ ಎಸಿಪಿ ಮೇಲೆ ಎಫ್ ಐ ಆರ್ ದಾಖಲಾಗುತ್ತಾ? ಜೊತೆಗೆ ಏನೂ ತಪ್ಪು ಮಾಡದ ಜೆಸಿಬಿ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಕ್ಕೆ ಕೇಸ್ ಬೀಳುತ್ತಾ..? ಇದು ನಮ್ಮ ಪ್ರಶ್ನೆ ಅಲ್ಲಾ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.