ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಾಗೌಡಗೆ (Amrutha Gowda) ಆ್ಯಸಿಡ್ ಹಾಕುವುದಾಗಿ ಪತ್ರಯೊಂದು ಬಂದಿದ್ದು, ಬೆದರಿಕೆ ಪತ್ರದ ಸಮೇತ ಪೊಲೀಸರಿಗೆ ಮನವಿ ಮಾಡಿದ್ದಾರೆ. ಜೀವ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಅಮೃತಾಗೌಡ ಆ್ಯಸಿಡ್ ದಾಳಿ ಬೆದರಿಕೆ ಪತ್ರ ಬಂದಿದ್ದು ರಕ್ಷಣೆ ನೀಡುವಂತೆ ಶಿಡ್ಲಘಟ್ಟ ಟೌನ್ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅಮೃತಾಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿದ್ದರು. ಈ ಬಗ್ಗೆ ಅಮೃತಾಗೌಡ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದಂತೆ ತಲೆ ಮರೆಸಿಕೊಂಡಿರುವ ರಾಜೀವ್ ಗೌಡ, ಇನ್ನು ಪತ್ತೆ ಆಗಿಲ್ಲ. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಇತ್ತ ಪೌರಾಯುಕ್ತೆಗೆ ಬೆದರಿಕೆ ಪತ್ರಯೊಂದು ಬಂದಿದ್ದು, ಆ್ಯಸಿಡ್ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ರಾಜೀವ್ ಗೌಡನ ಭವಿಷ್ಯ ನಾಳೆ ನಿರ್ಧಾರ
ರಾಜೀವ್ ಗೌಡ ಪೌರಾಯುಕ್ತೆ ಅಮೃತಾಗೌಡಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದ. ತನ್ನ ಮೇಲಿನ ಎಫ್‌ಐಆರ್ ರದ್ದು ಮಾಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ತನಿಖೆ ಮುಂದುವರಿಯಲಿ ಎಂದು ಆದೇಶ ನೀಡುವ ಮೂಲಕ ರಾಜೀವ್ ಗೌಡಗೆ ಮೊದಲ ಶಾಕ್ ನೀಡಿದೆ. ಸದ್ಯ ನ್ಯಾಯಾಲಯ, ವಾದ-ಪ್ರತಿವಾದ ಆಲಿಸಿದ್ದು ಇಂದು ಅಂದರೆ ಜನವರಿ 24ರಂದು ಆದೇಶ ಕಾಯ್ದಿರಿಸಿದೆ. ರಾಜೀವ್ ಗೌಡಗೆ ನಿರೀಕ್ಷಣಾ ಜಾಮೀನು ಸಿಗುತ್ತಾ, ಇಲ್ಲವ ಎಂದು ಜೈಲು ನಾಳೆ ಗೊತ್ತಾಗಲಿದೆ.












