ಧಾರವಾಡ: ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ನನ್ನು ಸಿಐಡಿ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಆರು ದಿನಗಳ ಕಾಲ ಫಯಾಜ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಧಾರವಾಡ ಜೈಲಿನಿಂದ ವಶಕ್ಕೆ ಪಡೆದ ನಂತರ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎರಡು ಕ್ರೂಸರ್ ವಾಹನದಲ್ಲಿ ಪ್ರತ್ಯೇಕವಾಗಿ ಆತನನ್ನು ಕರೆದುಕೊಂಡು ಹೋಗಲಾಗಿದೆ.
ಆರೋಪಿ ಫಯಾಜ್ನನ್ನು ವಶಕ್ಕೆ ಪಡೆದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ತಪಾಸಣೆಯ ನಂತರ ಸಿಐಡಿ ಅಧಿಕಾರಿಗಳು ಫಯಾಜ್ನನ್ನು ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್ ಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ಎಡಿಜಿಪಿ ಬಿ.ಕೆ ಸಿಂಗ್ ಈ ಸಂದರ್ಭದಲ್ಲಿದ್ದರು.
ಸ್ಥಳ ಮಹಜರು ಜೊತೆಗೆ ಮಹತ್ವದ ವಿಚಾರಣೆ ನಡೆಸಿದರು. ನಂತರ ಧಾರವಾಡ ನಗರಕ್ಕೆ ಬಾರದ ಅಧಿಕಾರಿಗಳು ಫಯಾಜ್ ನನ್ನು ನೇರವಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಅಜ್ಞಾತ ಸ್ಥಳದಲ್ಲೇ ಫಯಾಜ್ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.