ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದು 8 ಮಂದಿ ಸಾವನಪ್ಪಿರುವ ಗಟನೆ ಬೆಳಗಾವಿ ತಾಲೂಕಿನ ಕಲ್ಯಾಳ ಪುಲ್ ಬಳಿಉ ಭಾನುಉವಾರ ಬೆಳ್ಳಗ್ಗೆ ನಡೆದಿದೆ.
ಗೋಕಾಕ್ನಿಂದ ಬೆಳಗಾವಿ ಕಡೆಗೆ ಕ್ರೂಸರ್ ವಾಹನ ಬರುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆಗೆ ಬಿದ್ದು ಅವಘಡ ಸಂಭವಿಸಿದೆ. ಕೂಲಿ ಕೆಲಸಕ್ಕೆಂದು ಗೋಕಾಕ್ನಿಂದ ಬೆಳಗಾವಿ ಕಡೆ ಬರುತ್ತಿದ್ದಾಗ ಘಟನೆ ಸಂಭವಿಸಿದ್ದು ಮೂರು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮೃತ ದುರ್ದೈವಿಗಳನ್ನು ಬಸವ ಹನುಮನ್ನವರ, ಫಕೀರಪ್ಪ, ಅಡಿವೆಪ್ಪ, ಕರೆಪ್ಪ, ಬಸವರಾಜು, ಚಂದ್ರಪ್ಪ, ಕೃಷ್ಣಾ ಎಂದು ಗುರುತಿಸಲಾಗಿದೆ. ಇನ್ನಷ್ಟು ಜನರ ಮಾಹಿತಿ ಹೊರಬರಬೇಕಿದೆ.
ಸ್ಥಳಕ್ಕೇ ಭೇಟಿ ನೀಡಿದ ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಹಾಗು ಮಾರಿಹಾಳ ಪೊಲೀಸ್ ಠಾಣಾಧಿಕಾರಿಗಳು ಮೃತರ ಮಾಹಿತಿ ಹಾಗು ಘಟನೆಗೆ ನಿಖರ ಕಾರಣವನ್ನ ಕಲೆಹಾಕುತ್ತಿದ್ದಾರೆ.