
ದೆಹಲಿ ಚುನಾವಣೆಗೂ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ರಾಜಕಾರಣ ಶುರುವಾಗಿದೆ. ಚುನಾವಣಾ ಮತ ಎಣಿಕೆಗೆ ತಯಾರಿ ನಡೆದಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಎಎಪಿ ಅಭ್ಯರ್ಥಿಗಳ ಖರೀದಿ ಆರೋಪದ ತನಿಖೆಗೆ ಎಸಿಬಿ ಮುಂದಾಗಿದೆ.. dಎಹಲಿಯ ಲೆಫ್ಟಿನೆಂಟ್ ಗವರ್ನರ್ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿ, ಶಾಕ್ ಕೊಟ್ಟಿದೆ..

ದೆಹಲಿ ಮತದಾನಕ್ಕೂ ಮುನ್ನವೇ ಬಿಜೆಪಿ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕರು ಆಪ್ ಅಭ್ಯರ್ಥಿಗಳ ಖರೀದಿ ಆರೋಪ ಮಾಡಿದ್ದರು. ಎಎಪಿ ಅಭ್ಯರ್ಥಿಗಳು ಬಿಜೆಪಿ ಸೇರಿದರೆ ಸಚಿವ ಸ್ಥಾನ ಮತ್ತು ತಲಾ 15 ಕೋಟಿ ರೂಪಾಯಿ ನೀಡುವ ಆಫರ್ ನೀಡಲಾಗಿದೆ ಎಂದು ಆರೋಪಿಸಿದ್ರು. ಈ ಬಗ್ಗೆ ಬಿಜೆಪಿ ನೀಡಿದ ದೂರಿನ ಮೇರೆಗೆ ಎಸಿಬಿ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ ಆದೇಶ ಮಾಡಿದ್ರು.
ಲೆಫ್ಟಿನೆಂಟ್ ಗವರ್ನರ್ ಎಸಿಬಿ ತನಿಖೆಗೆ ಆದೇಶ ಮಾಡಿದ ಕೆಲವೇ ಗಂಟೆಗಳಲ್ಲಿ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡ್ತು.. ಅರವಿಂದ ಕೇಜ್ರಿವಾಲ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ರು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳ ಖರೀದಿ ಆರೋಪಕ್ಕೆ ಪುರಾವೆಗಳನ್ನ ಒದಗಿಸಿ ಅಂತ ಕೇಜ್ರಿವಾಲ್‌ಗೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ರು.

ACB ದಾಳಿಯನ್ನು ಪ್ರಶ್ನಿಸಿರುವ AAP ಕಾನೂನು ಘಟಕದ ಅಧ್ಯಕ್ಷ ಸಂಜೀವ್ ನಾಸಿಯರ್, ಇದು ತುಂಬಾ ಆಶ್ಚರ್ಯಕರ ಸಂಗತಿ ಎಂದಿದ್ದಾರೆ. ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ಬಂದ್ರು, ಯಾವುದೇ ಸೂಚನೆ ಇಲ್ಲದೆ ACB ಅಧಿಕಾರಿಗಳು ಬಂದಿದ್ದರು. ಅವರ ಬಳಿ ನೋಟಿಸ್ ಅಥವಾ ಸ್ಟಾಂಪ್ ಇರಲಿಲ್ಲ. ನಮ್ಮನ್ನು ಕಾನೂನಾತ್ಮಕವಾಗಿ ವಿಚಾರಣೆ ನಡೆಸಲಿ, ನಾವು ಸಹಕರಿಸಲು ಸಿದ್ಧ ಅಂತ ಅವರಿಗೆ ಹೇಳಿದೆವು. ಆದ್ರೂ ನೋಟಿಸ್ ಕೊಡೋಕೆ ಒಂದೂವರೆ ಗಂಟೆ ತೆಗೆದುಕೊಂಡ್ರು. ನೋಟಿಸ್‌ನಲ್ಲಿ ದೂರುದಾರರ ಬಗ್ಗೆ ಮಾಹಿತಿ ಇಲ್ಲ, ಅರವಿಂದ ಕೇಜ್ರಿವಾಲ್ ಮಾಡಿದ ಎಕ್ಸ್ ಪೋಸ್ಟ್ ಅಷ್ಟೇ ಉಲ್ಲೇಖಿಸಿದ್ದಾರೆ ಎಂದಿದ್ದಾರೆ.








