ಕಳೆದ ಎರಡು ದಿನಗಳಿಂದ ಭ್ರಷ್ಟಾರ ನಿಗ್ರಹ ದಳ (ACB) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರ ಸಂಬಂಧ ದಾಖಲೆ ಪರಿಶೀಲನೆ ನಡೆಸುತ್ತಿದೆ. ಸುದೀರ್ಘವಾದ ಪರಿಶೀಲನೆ ಬಳಿಕ ACB ಮಾಧ್ಯಮಕ್ಕೆ ಸುದೀರ್ಘವಾದ ವಿವರಣೆ ಪತ್ರವನ್ನು ಬಿಡುಗಡೆ ಮಾಡಿದೆ.
BDA ಮೇಲೆ ACB ದಾಳಿ ವೇಳೆ ಏನೆಲ್ಲಾ ವಶಪಡಿಸಿಕೊಳ್ಳಲಾಗಿದೆ.!?
· ಬಿ.ಡಿ.ಎ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಸುಮಾರು ರೂ.75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನು ಸುಳ್ಳು ಮಾಹಿತಿ ನೀಡಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮಿಲಾಗಿ ಬೆಲೆ ಬಾಳುವ ನಿವೇಶನಗಳನ್ನು ಅನರ್ಹ ವ್ಯಕ್ತಿಯೊಬ್ಬರಿಗೆ ಸಿಗುವಂತೆ ಮಾಡಲಾಗಿರುತ್ತದೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
· ಕೆಂಗೇರಿ ಹೋಬಳಿ ಉಳ್ಳಾಲ ಗ್ರಾಮದಲ್ಲಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಸದರಿ ವ್ಯಕ್ತಿಯಿಂದ ಯಾವುದೇ ಜಮೀನನ್ನ ಸ್ವಾದೀನ ಪಡಿಸಿಕೊಳ್ಳದೆ ಇದ್ದರು ಸಹ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಬದಲಿ ನಿವೇಶನವಾಗಿ 1800 ಚ.ಅ ಅಳತೆಯ ಸುಮಾರು ರೂ.1.5 ಕೋಟಿ ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
· ಕೆಂಗೇರಿ ಸ್ಯಾಟಿಲೈಟ್ ಟೌನ್ ಬಳಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲಾತಿಗಳನ್ನು ಹಾಜರುಪಡಿಸಿ 1000 ಚ.ಅ ಅಳತೆಯ ಸುಮಾರು ರೂ.80 ಲಕ್ಷ ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
· ಬೆಂಗಳೂರು ನಗರ ಚಂದ್ರಲೇಔಟ್ ಪ್ರದೇಶದಲ್ಲಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲಾತಿಗಳನ್ನು ಹಾಜರುಪಡಿಸಿ ರೂ.5 ಕೋಟಿ ಮೌಲ್ಯದ 2400 ಚ.ಅ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

· ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ನಿವೇಶನ ಫಲಾನುಭವಿಯವರ ಮೂಲ ದಾಖಲಾತಿಗಳನ್ನು ತಿದ್ದುಪಡಿಗೊಳಿಸಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲಾತಿಗಳನ್ನು ಹಾಜರುಪಡಿಸಿ ರೂ.30 ಲಕ್ಷ ಬೆಲೆ ಬಾಳುವ ನಿವೇಶನವನ್ನು ಅಕ್ರಮವಾಗಿ ಅನರ್ಹ ವ್ಯಕ್ತಿಗೆ ಮಂಜೂರು ಮಾಡಿರುತ್ತಾರೆ. ಬೆಂಗಳೂರು ನಗರ ಚಂದ್ರಲೇಔಟ್ ಪ್ರದೇಶದಲ್ಲಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲಾತಿಗಳನ್ನು ಹಾಜರುಪಡಿಸಿ ರೂ.5 ಕೋಟಿ ಮೌಲ್ಯದ 2400 ಚ.ಅ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
· ಕೆಲವೊಂದು ಪ್ರಕರಣಗಳಲ್ಲಿ ಒಂದೇ ನಿವೇಶನವನ್ನು ಒಂದಕಿಂತ ಹೆಚ್ಚಿನ ವ್ಯಕ್ತಿಗಳಿಗೆ ನೋಂದಣಿ ಮಾಡಿಕೊಟ್ಟು ಫಲಾನುಭವಿಗಳು ಅನವಶ್ಯಕವಾಗಿ ನ್ಯಾಯಾಲಯದ ಮಟ್ಟಿಲು ಏರುವಂತೆ ಮಾಡಿರುತ್ತಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿರುತ್ತದೆ.
· ಬಿ.ಡಿ.ಎ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲ ಫಲಾನುಭವಿಗೆ ಮಂಜೂರಾದ ರೂ.52 ಲಕ್ಷ ಮೌಲ್ಯದ ನಿವೇಶನವನ್ನು ಅನರ್ಹ ವ್ಯಕ್ತಿಗೆ ನೀಡಲಾಗಿದೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
· ಅರ್ಕಾವತಿ ಬಡಾವಣೆಯಲ್ಲಿ ಫಲಾನುಭವಿಯೊಬ್ಬರಿಗೆ ನಿವೇಶನ ಮಂಜೂರಾಗಿದ್ದರು, ಸಹ ಯಾವುದೇ ಕಾರಣ ಇಲ್ಲದೆ ದುರುದ್ದೇಶದಿಂದ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನವನ್ನು ಮಂಜೂರು ಮಾಡಲಾಗಿರುತ್ತದೆ. ಈ ಬಗ್ಗೆ ಮೂಲ ದಾಖಲಾಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
· ಬಿ.ಡಿ.ಎ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಬೀಮನಕುಪ್ಪೆ ಗ್ರಾಮ, ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಡಾ.ಕೆ.ಶಿವರಾಮಕಾರಂತ್ ಬಡಾವಣೆ ಮೊದಲಾದ ಕಡೆಗಳಲ್ಲಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಮಧ್ಯವರ್ತಿಗಳೊಂದಿಗೆ ಶ್ಯಾಮಿಲಾಗಿ ಹಲವಾರು ಅಕ್ರಮಗಳನ್ನು ನಡೆಸಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಬಗ್ಗೆ ದೊಡ್ಡ ಸಂಖ್ಯೆಯಲ್ಲಿ ದಾಖಲಾತಿಗಳನ್ನು ಮತ್ತು ನೋಂದಣಿ ವಹಿಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು.
· ಬಿ.ಡಿ.ಎ ಭೂ ಸ್ವಾದೀನಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಮಾಲಿಕತ್ವ ಹೊಂದಿರುವಂತೆ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಕೊಟ್ಯಂತರ ರೂ ಮೌಲ್ಯದ ಪರಿಹಾರ ಧನವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ.
· ಬಿ.ಡಿ.ಎ ಅಂಜನಾಪುರ ಬಡಾವಣೆಯಲ್ಲಿ ಫಲಾನುಭವಿಯವರಿಗೆ ಸೇರಿದ ನಿವೇಶನ ಒಂದು ಒತ್ತುವರಿಯಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವ ಬದಲಾಗಿ ಸದರಿಯವರಿಗೆ ಬೇರೆ ಬಡಾವಣೆಯಲ್ಲಿ ನಿವೇಶನವನ್ನು ನೀಡಿ ಸದರಿ ನಿವೇಶನವನ್ನು ಸಹ ಇತರೆ ಮೂರನೇ ವ್ಯಕ್ತಿಗೆ ಮಂಜೂರು ಮಾಡಿ ಅಕ್ರಮ ಮಾಡಲಾಗಿದೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

· ಅರ್ಕಾವತಿ ಬಡಾವಣೆ ಮತ್ತು ಇನ್ನು ಕೆಲವು ಬಡಾವಣೆಗಳಲ್ಲಿ, ಕೆಲವು ಅರ್ಜಿದಾರರು ನಿವೇಶನ ಮಂಜೂರಾತಿ ಪಡೆದು ನಿಗಧಿತ ಸಮಯದಲ್ಲಿ ಹಣ ಸಂದಾಯ ಮಾಡಿದ್ದರು ಸಹ ಅವರಿಗೆ ಲೀಸ್ ಕಂ ಸೇಲ್ ಡೀಡ್ (LCSD) ಗಳನ್ನು ಮಾಡಿ ನಿಗಧಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಂಡಿದ್ದರು ಸಹ ಸದರಿಯವರಿಗೆ ಅಬ್ಸ್ ಲ್ಯೂಟ್ ಸೇಲ್ ಡೀಡ್ (ASD)ಗಳನ್ನು ಮಾಡಿ ಕೊಡದೆ ದುರುದ್ದೇಶದಿಂದ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸಿ ತೊಂದರೆ ಕೊಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
· ಇದೇ ರೀತಿ ನಿಗಧಿತ ಅವಧಿಯೊಳಗೆ ಬಿ.ಡಿ.ಎ ನಿಗಧಿ ಪಡಿಸಿರುವ ಹಣವನ್ನು ಸಂದಾಯ ಮಾಡಿದ ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ಅನವ್ಯಶಕ ವಿಳಂಭ ನೀತಿ ಅನುಸರಿಸಲಾಗಿದ್ದು ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಈರೀತಿಯಲ್ಲಿ 2 ದಿನಗಳ ಬಿ.ಡಿ.ಎ ಕಛೇರಿಗಳ ದಾಳಿ ಅವಧಿಯಲ್ಲಿ ಹಲವಾರು ಅಕ್ರಮಗಳು ಕಂಡು ಬಂದಿದ್ದು ಈ ಬಗ್ಗೆ ಅಕ್ರಮವೆಸಗಿರುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮಧ್ಯವರ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸಿಬಿ ತಿಳಿಸಿದೆ. ಇನ್ನು ನಾಳೆ ಭಾನುವಾರವಾಗಿರುವ ಹಿನ್ನೆಲೆ ಸರ್ಕಾರಿ ಕಚೇರಿಗಳೆಲ್ಲಾ ರಜೆ ಇರುವುದರಿಂದಾಗಿ ಸೋಮವಾರ ಈ ಬಗ್ಗೆಯ ವಿಸ್ತ್ರವಾದ ತನಿಖೆಯನ್ನು ಎಸಿಬಿ ಕೈಗೊಳ್ಳಲಿದೆ.