ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಬುಧವಾರ ಬೆಳಿಗ್ಗೆಯೇ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶೋಧ ನಡೆಸುತ್ತಿದೆ.
ಇಂದು ಕರ್ನಾಟಕ ರಾಜ್ಯದಾದ್ಯಂತ ೬೮ ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ
ದಿನಾಂಕ: ೨೪.೧೧.೨೦೨೧ ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ ೧೫ ಸರ್ಕಾರಿ
ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ ೬೮ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ವಿವರ ಈ ಕೆಳಕಂಡಂತಿರುತ್ತದೆ.
೧. ಭ್ರಷ್ಟಾಚಾರ ನಿಗ್ರಹ ದಳ, ಕಲಬುರಗಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ ಶ್ರೀ. ಎಸ್. ಎಂ. ಬಿರಾದರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ, ಕಲಬುರಗಿ ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಉತ್ತರ ವಲಯ, ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು ೪೪ ಅಧಿಕಾರಿ ಹಾಗೂ ಸಿಬ್ವಂದಿಗಳ ೩ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೩ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೨. ಭ್ರಷ್ಟಾಚಾರ ನಿಗ್ರಹ ದಳ, ಶಿವಮೊಗ್ಗ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ
ಶ್ರೀ. ಟಿ. ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಪೂರ್ವ ವಲಯ, ದಾವಣಗೆರೆ ರವರ ನೇತೃತ್ವದಲ್ಲಿ ಒಟ್ಟು ೪೪ ಅಧಿಕಾರಿ ಹಾಗೂ ಸಿಬ್ಬಂದಿಗಳ ೫ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೫ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೩. ಭ್ರಷ್ಟಾಚಾರ ನಿಗ್ರಹ ದಳ, ಮಂಡ್ಯ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ
ಶ್ರೀ. ಶ್ರೀನಿವಾಸ್ ಕೆ, ಕಾರ್ಯಪಾಲಕ ಅಭಿಯಂತರರು, ಹೆಚ್‌ಎಲ್‌ಬಿಸಿ-೩, ಕೆ.ಆರ್. ಪೇಟೆ ಸಬ್ ಡಿವಿಜನ್, ಮಂಡ್ಯ ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ದಕ್ಷಿಣ ವಲಯ, ಮೈಸೂರು ರವರ ನೇತೃತ್ವದಲ್ಲಿ ಒಟ್ಟು ೩೮ ಅಧಿಕಾರಿ ಹಾಗೂ ಸಿಬ್ಬಂದಿಗಳ ೬ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೬ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ
ಕಾರ್ಯ ಮುಂದುವರೆದಿದೆ.
೪. ಭ್ರಷ್ಟಾಚಾರ ನಿಗ್ರಹ ದಳ, ಚಾಮರಾಜನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ
ನೌಕರರಾದ ಶ್ರೀ. ಕೆ. ಎಸ್. ಲಿಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ,
ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ದಕ್ಷಿಣ ವಲಯ, ಮೈಸೂರು ರವರ ನೇತೃತ್ವದಲ್ಲಿ ಒಟ್ಟು ೩೬ ಅಧಿಕಾರಿ ಹಾಗೂ ಸಿಬ್ಬಂದಿಗಳ ೪ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೪ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೫. ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ
ನೌಕರರಾದ ಎಲ್. ಸಿ. ನಾಗರಾಜ್, ಆಡಳಿತಾದಿಕಾರಿ, ಸಕಾಲ ಮಷೀನ್, ೬ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ನಗರ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ
ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ,
ಬೆಂಗಳೂರು ನಗರ ವಿಭಾಗ, ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೪೬ ಅಧಿಕಾರಿ ಹಾಗೂ
ಸಿಬ್ಬಂದಿಗಳ ೮ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೮ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ
ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೬. ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ
ನೌಕರರಾದ ಜಿ. ವಿ. ಗಿರಿ, ಗ್ರೂಪ್-ಡಿ ನೌಕರ, ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್,
ಮಾರಪ್ಪನಪಾಳ್ಯ, ಯಶವಂತಪುರ, ಬೆಂಗಳೂರು ನಗರ ರವರು ತನ್ನ ಬಲ್ಲ ಮೂಲಗಳಿಗಿಂತ
ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್
ಅಧೀಕ್ಷಕರು, ಎಸಿಬಿ, ಬೆಂಗಳೂರು ನಗರ ವಿಭಾಗ, ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೨೧
ಅಧಿಕಾರಿ ಹಾಗೂ ಸಿಬ್ಬಂದಿಗಳ ೩ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೩ ಸ್ಥಳಗಳಲ್ಲಿ
ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೭. ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ
ನೌಕರರಾದ ಶ್ರೀ. ಎಸ್. ಎಸ್. ರಾಜಶೇಖರ್, ಪಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ,
ಬೆಂಗಳೂರು ನಗರ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಬೆಂಗಳೂರು ನಗರ ವಿಭಾಗ,
ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೧೪ ಅಧಿಕಾರಿ ಹಾಗೂ ಸಿಬ್ಬಂದಿಗಳ ೨ ತಂಡಗಳೊAದಿಗೆ
ಸರ್ಕಾರಿ ನೌಕರನಿಗೆ ಸೇರಿದ ೨ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ
ಕಾರ್ಯ ಮುಂದುವರೆದಿದೆ.
೮. ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ
ನೌಕರರಾದ ಶ್ರೀ. ಮಾಯಣ್ಣ, ಪ್ರಥಮ ದರ್ಜೆ ಸಹಾಯಕರು, ಬಿಬಿಎಂಪಿ ಕೇಂದ್ರ ಕಛೇರಿ, ಎನ್. ಆರ್.ವೃತ್ತ, ಬೆಂಗಳೂರು ನಗರ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಬೆಂಗಳೂರು ನಗರ ವಿಭಾಗ,
ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೪೮ ಅಧಿಕಾರಿ ಹಾಗೂ ಸಿಬ್ಬಂದಿಗಳ ೮ ತಂಡಗಳೊಂದಿಗೆ
ಸರ್ಕಾರಿ ನೌಕರನಿಗೆ ಸೇರಿದ ೮ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ
ಕಾರ್ಯ ಮುಂದುವರೆದಿದೆ.
೯. ಭ್ರಷ್ಟಾಚಾರ ನಿಗ್ರಹ ದಳ, ಬಳ್ಳಾರಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ
ಶ್ರೀ. ಕೆ. ಎಸ್. ಶಿವಾನಂದ್, ಸಬ್-ರಿಜಿಸ್ಟರ್ (ನಿವೃತ್ತ), ಬಳ್ಳಾರಿ ಜಿಲ್ಲೆ ತನ್ನ ಬಲ್ಲ ಮೂಲಗಳಿಗಿಂತ
ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್
ಅಧೀಕ್ಷಕರು, ಎಸಿಬಿ, ಬಳ್ಳಾರಿ ವಲಯ, ಬಳ್ಳಾರಿ ರವರ ನೇತೃತ್ವದಲ್ಲಿ ಒಟ್ಟು ೨೬ ಅಧಿಕಾರಿ ಹಾಗೂ
ಸಿಬ್ಬಂದಿಗಳ ೨ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೨ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ
ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೧೦. ಭ್ರಷ್ಟಾಚಾರ ನಿಗ್ರಹ ದಳ, ಬೆಳಗಾವಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ
ಶ್ರೀ. ಸದಾಶಿವ ರಾಯಪ್ಪ ಮರಲಿಂಗಣ್ಣನವರ್, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ್, ಬೆಳಗಾವಿ
ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು
ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಉತ್ತರ ವಲಯ, ಬೆಳಗಾವಿ
ರವರ ನೇತೃತ್ವದಲ್ಲಿ ಒಟ್ಟು ೩೬ ಅಧಿಕಾರಿ ಹಾಗೂ ಸಿಬ್ಬಂದಿಗಳ ೬ ತಂಡಗಳೊಂದಿಗೆ ಸರ್ಕಾರಿ
ನೌಕರನಿಗೆ ಸೇರಿದ ೬ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ
ಮುಂದುವರೆದಿದೆ.
೧೧. ಭ್ರಷ್ಟಾಚಾರ ನಿಗ್ರಹ ದಳ, ಬೆಳಗಾವಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ
ಶ್ರೀ. ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ, ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಉತ್ತರ ವಲಯ, ಬೆಳಗಾವಿ
ರವರ ನೇತೃತ್ವದಲ್ಲಿ ಒಟ್ಟು ೨೪ ಅಧಿಕಾರಿ ಹಾಗೂ ಸಿಬ್ಬಂದಿಗಳ ೩ ತಂಡಗಳೊಂದಿಗೆ ಸರ್ಕಾರಿ
ನೌಕರನಿಗೆ ಸೇರಿದ ೩ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ
ಮುಂದುವರೆದಿದೆ.
೧೨. ಭ್ರಷ್ಟಾಚಾರ ನಿಗ್ರಹ ದಳ, ಬೆಳಗಾವಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ
ಶ್ರೀ. ನಾಥಾಜಿ ಪೀರಾಜಿ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್-೨, ಹೆಸ್ಕಾಂ, ಬೆಳಗಾವಿ ಜಿಲ್ಲೆ ರವರು
ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ
ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಉತ್ತರ ವಲಯ, ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು
೩೦ ಅಧಿಕಾರಿ ಹಾಗೂ ಸಿಬ್ಬಂದಿಗಳ ೩ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೩ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೧೩. ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ ಶ್ರೀ. ಲಕ್ಷ್ಮೀನರಸಿಂಹಯ್ಯ, ರಾಜಸ್ವ ನಿರೀಕ್ಷಕರು, ಕಸಬಾ-೨ ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಕೇಂದ್ರ ವಲಯ, ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೨೯ ಅಧಿಕಾರಿ ಹಾಗೂ ಸಿಬ್ಬಂದಿಗಳ ೪ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೪ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೧೪. ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ ಶ್ರೀ. ವಾಸುದೇವ್. ಆರ್. ಎನ್, ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು), ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ತನ್ನ ಬಲ್ಲ
ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ,
ಪೊಲೀಸ್ ಅಧೀಕ್ಷಕರು, ಎಸಿಬಿ, ಕೇಂದ್ರ ವಲಯ, ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೩೦
ಅಧಿಕಾರಿ ಹಾಗೂ ಸಿಬ್ಬಂದಿಗಳ ೬ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ೬ ಸ್ಥಳಗಳಲ್ಲಿ
ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
೧೫. ಭ್ರಷ್ಟಾಚಾರ ನಿಗ್ರಹ ದಳ, ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ
ನೌಕರರಾದ. ಬಿ. ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನಗಳು, ಬೆಂಗಳೂರು
ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ
ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಕೇಂದ್ರ ವಲಯ, ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು ೩೭ ಅಧಿಕಾರಿ ಹಾಗೂ ಸಿಬ್ಬಂದಿಗಳ ೫ ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ
ಸೇರಿದ ೫ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ
ಆರೋಪಿತ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಪ್ರಕರಣಗಳಿಗೆ ಸಂಬಂಧಪಟ್ಟ
ಆರೋಪಿತ ಸರ್ಕಾರಿ ನೌಕರರು ಹೊಂದಿರುವ ಆಸ್ತಿಗಳ ಮೌಲ್ಯ, ಅವರು ಹೊಂದಿರುವ ಚಿನ್ನಾಭರಣಗಳು,
ಇತರೆ ಬ್ಯಾಂಕ್ ಠೇವಣಿಗಳ ಕುರಿತಂತೆ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯ ಮತ್ತು
ಸಂಬಂಧಪಟ್ಟ ಇನ್ನೂ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ.