ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅದರ ತೀವ್ರತೆ ಕಡಿಮೆ ಇದೆ. ಆದರೂ ಹಲವು ಜನರಿಗೆ ಬದುಕು ಕಷ್ಟವಾಗಿದೆ. ಇದು ಸರ್ಕಾರದ ಗಮನದಲ್ಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.
ಕೊರೋನಾ ಕ್ರಮಗಳ ಕುರಿತು ನಾಳೆ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ಇದೆ. ನಮಗೆ ಬದುಕಲು ಅವಕಾಶ ಕೊಡಿ ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಇದನ್ನು ನೋಡಿ ಎಲ್ಲರ ಸಲಹೆ ಪಡೆದು ನಾಳೆ ಸಭೆಯಲ್ಲಿ ನಿರ್ಣಯ ಮಾಡಲಾಗುವುದ ಎಂದು ತಿಳಿಸಿದರು.
ಕೋವಿಡ್ ತೀವ್ರತೆ ಇಲ್ಲದ ಕಾರಣ ಒಂದಿಷ್ಟು ಆಶಾಭಾವನೆ ಇದೆ. ನಾಳೆ ನಡೆಯುವ ಸಭೆಯಲ್ಲಿ ಒತ್ತಾಯ, ಸಮಸ್ಯೆ, ಅನಾನುಕೂಲತೆ, ಸೋಂಕು ಹೆಚ್ಚಳ ಎಲ್ಲವನ್ನೂ ಚರ್ಚೆ ಮಾಡಿ ಸೂಕ್ತ ನಿರ್ಧಾರ ತಗೆದುಕೊಳ್ಳಲಾಗುವುದು. ಎಂದರು.
ಮುಂಬೈ ಮಾದರಿ ಬಗ್ಗೆ ಜನತೆ ಉದಾಹರಣೆ ಕೊಟ್ಟಿದ್ದಾರೆ. ಈ ಕುರಿತು ಚರ್ಚಿಸಲಾಗುವುದು. ಬಿಜೆಪಿ ನಾಯಕರ ಹೇಳಿಕೆಗಳು ಸರ್ಕಾರದ ಮೇಲೆ ಒತ್ತಡ ಅಲ್ಲ, ಅವರು ತಮ್ಮ ಸಲಹೆ ಕೊಡುತ್ತಿದ್ದಾರೆ. ಶೈಕ್ಷಣಿಕ ವರ್ಷಗಳು ನಡೆಯಬೇಕು, ಕಾಲೇಜಿನ ಮೇಲೆ ಇರುವ ನಿರ್ಬಂಧಗಳು ಬೇಗ ತೆರವಾಗಬೇಕು ಎಂಬ ಒತ್ತಾಯ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೂಡಾ ಇದೆ ಎಂದರು.
ವನಿ ಮುಂಬೈ ಮಾದರಿ ಬಗ್ಗೆ ಜನತೆ ಉದಾಹರಣೆ ಕೊಟ್ಟಿದ್ದಾರೆ. ಈ ಕುರಿತು ಚರ್ಚಿಸಲಾಗುವುದು. ಬಿಜೆಪಿ ನಾಯಕರ ಹೇಳಿಕೆಗಳು ಸರ್ಕಾರದ ಮೇಲೆ ಒತ್ತಡ ಅಲ್ಲ, ಅವರು ತಮ್ಮ ಸಲಹೆ ಕೊಡುತ್ತಿದ್ದಾರೆ. ಶೈಕ್ಷಣಿಕ ವರ್ಷಗಳು ನಡೆಯಬೇಕು, ಕಾಲೇಜಿನ ಮೇಲೆ ಇರುವ ನಿರ್ಬಂಧಗಳು ಬೇಗ ತೆರವಾಗಬೇಕು ಎಂಬ ಒತ್ತಾಯ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೂಡಾ ಇದೆ ಎಂದರು.