ಋತು ಬದಲಾದಂತೆ ಹವಮಾನವೂ ಕೂಡ ಬದಲಾಗುತ್ತಾ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿಯನ್ನ ವಹಿಸಬೇಕು. ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿ ಇಡಲು ನಾವು ಮಡಿಕೆಯಲ್ಲಿಟ್ಟ ನೀರನ್ನ ಕುಡಿತೀವಿ ರಾಗಿ ಗಂಜಿಯನ್ನ ಸೇವಿಸ್ತೀವಿ ಹಾಗೂ ಕಲ್ಲಂಗಡಿ ಸೌತೆಕಾಯಿ ಹೀಗೆ ದೇಹವನ್ನ ತಂಪಾಗಿರಿಸುವ ಆಹಾರವನ್ನು ಸೇವನೆ ಮಾಡುತ್ತೇವೆ.. ಆದ್ರೆ ಮಳೆಗಾಲದಲ್ಲಿ ಮಳೆಗಾಲಕ್ಕೆ ಹೊಂದುವಂತೆ ನಾವು ನಮ್ಮ ಆಹಾರ ಸೇವನೆ ಹಾಗೂ ನಮ್ಮ ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.. ಈ ಸಮಯದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮುನ್ನಚ್ಚರಿಕೆಯ ಕ್ರಮಗಳನ್ನು ಪಾಲಿಸುವುದು ಉತ್ತಮ.

- ಮಳೆಗಾಲದಲ್ಲಿ ಮುಖ್ಯವಾಗಿ ನಮ್ಮ ಆಹಾರ ಶೈಲಿಯಲ್ಲಿ ಶೈಲಿಯ ಬಗ್ಗೆ ಗಮನ ಕೊಡುವಂತದ್ದು ಉತ್ತಮ.. ಮನೆಯಲ್ಲಿ ತಯಾರಿಸಿದ ಸ್ವಚ್ಛ ಹಾಗೂ ಬಿಸಿ ಇರುವ ಆಹಾರವನ್ನು ಸೇವಿಸುವುದು ಉತ್ತಮ..
- ಮುಖ್ಯವಾಗಿ ಜಂಕ್ ಫುಡ್ ಅಥವಾ ದಾರಿ ಬದಿ ಅಂಗಡಿಗಳಲ್ಲಿ ತಿನ್ನುವಂತದನ್ನ ಕಡಿಮೆ ಮಾಡಿ. ಹಾಗೂ ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನ ಸೇವಿಸುವುದನ್ನು ತಕ್ಕಮಟ್ಟಿಗೆ ನಿಲ್ಲಿಸಿ.
- ಮಳೆಗಾಲದಲ್ಲಿ ನೀರು ತುಂಬಾನೇ ಕಲುಷಿತವಾಗಿರುತ್ತದೆ ಅದರಿಂದಲೇ ಬ್ಯಾಕ್ಟೀರಿಯಗಳು ಹೆಚ್ಚಾಗುತ್ತವೆ. ಇನ್ನು ನೀವು ಕುಡಿಯುವ ನೀರಿನಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಎದುರಾಗುತ್ತದೆ.
- ಜ್ವರ,ಶೀತ, ಕೆಮ್ಮು,ನೆಗಡಿ ಈ ಎಲ್ಲ ಆರೋಗ್ಯ ಸಮಸ್ಯೆಗಳು ಶುರುವಾಗುವುದು ನೀರಿನಿಂದಲೇ.. ಹಾಗಾಗಿ ಮಳೆಗಾಲದಲ್ಲಿ ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ ಇದರಿಂದ ಭಾಗ್ಯಗಳು ಕಡಿಮೆಯಾಗುತ್ತದೆ.
- ಹಾಗಾಗಿ ಮಳೆಗಾಲದಲ್ಲಿ ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ ಇದರಿಂದ ಭಾಗ್ಯಗಳು ಕಡಿಮೆಯಾಗುತ್ತದೆ.
- ಮನೆಯ ಸುತ್ತ ಸ್ವಚ್ಛವಾಗಿರಿಸಿ, ಹಾಗೂ ಕೆಲವು ಮನೆಯ ಸುತ್ತಲೂ ಅಥವಾ ಅಕ್ಕಪಕ್ಕ ನೀರು ನಿಲ್ಲುತ್ತದೆ, ಅದನ್ನು ಮೊದಲು ತಪ್ಪಿಸಿ.ಇಲ್ಲವಾದರೆ ಸೊಳ್ಳೆಗಳು ಹೆಚ್ಚಾಗುತ್ತದೆ. ಈ ಸೊಳ್ಳೆಗಳಿಂದಲೇ ಹೆಚ್ಚು ಡೆಂಗ್ಯೂ ಹಾಗೂ ಮಲೇರಿಯದಂತಹ ಕಾಯಿಲೆಗಳು ಹರಡುತ್ತಿವೆ ಹಾಗಾಗಿ ಕಾಳಜಿ ವಹಿಸಿ.
- ಹೊರಗಡೆಯಿಂದ ತರುವ ಯಾವುದೇ ತರಕಾರಿ ಅಥವಾ ಹಣ್ಣುಗಳನ್ನು ತೊಳೆದು ನಂತರ ಉಪಯೋಗಿಸಿ,ಇಲ್ಲವಾದಲ್ಲಿ ಬ್ಯಾಕ್ಟೀರಿಯಗಳು ಇರುವುದರಿಂದ ನಮ್ಮ ದೇಹಕ್ಕೆ ಅದರಿಂದ ಸಾಕಷ್ಟು ಅನಾನುಕೂಲಗಳು ಎದುರಾಗುತ್ತದೆ.
- ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬಳಸುವ ಮುನ್ನ ಬಿಸಿನೀರು ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ತೊಳೆದು ನಂತರ ಉಪಯೋಗಿಸಿ.
- ಹೊರಗಡೆಯಿಂದ ಬಂದ ತಕ್ಷಣ ಕೈಕಾಲುಗಳನ್ನು ಸ್ವಚ್ಛಗೊಳಿಸಿ. ಹೊರಗಡೆಯಿಂದ ಬಂದ ತಕ್ಷಣ ಕೈಕಾಲುಗಳನ್ನು ಸ್ವಚ್ಛಗೊಳಿಸಿ.
- ಹಾಗೂ ಮಳೆಗಾಲದಲ್ಲಿ ಸ್ವಚ್ಛವಿರುವ ಹಾಗೂ ಒಣಗಿದ ಬಟ್ಟೆಯನ್ನು ಧರಿಸುವುದು ಉತ್ತಮ