• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪಂಜಾಬ್ ನಲ್ಲಿ ಎಎಪಿ ಗೆದ್ದಿದೆ, ಅರವಿಂದ ಕೇಜ್ರೀವಾಲ್ ‍‍& ಭಗವಂತ್ ಮಾನ್ ಗೆದ್ದಿದ್ದಾರೆ!

Any Mind by Any Mind
March 10, 2022
in ಕರ್ನಾಟಕ, ದೇಶ
0
ಬಿಜೆಪಿಗೆ ರಾಷ್ಟ್ರವ್ಯಾಪಿ ರಾಜಕೀಯ ಪರ್ಯಾಯ : ಪಂಜಾಬ್ ಫಲಿತಾಂಶ ಹೇಳುವುದೇನು?
Share on WhatsAppShare on FacebookShare on Telegram

ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಹತ್ತೇ ವರ್ಷಗಳಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವೇ? ಅದನ್ನು ಸಾಧ್ಯವಾಗಿಸಿದ್ದಾರೆ ಭಗವಂತ್ ಮಾನ್. ಅವರೀಗ ಪಂಜಾಬ್ ಮುಖ್ಯಮಂತ್ರಿ ಹುದ್ದೆಯನ್ನು ಏರಲಿದ್ದಾರೆ. ರಾಜಕೀಯ ಪಕ್ಷ ಕಟ್ಟಿ ಒಂದೇ ವರ್ಷದಲ್ಲಿ ದೆಹಲಿಯ ಮುಖ್ಯಮಂತ್ರಿಯಾದವರು ಅರವಿಂದ ಕೇಜ್ರೀವಾಲ್! ಕೇಜ್ರೀವಾಲ್ ಇದ್ದರೆ ಎಲ್ಲವೂ ಸಾಧ್ಯ. ದೆಹಲಿಯಲ್ಲಿ ಮಾಡಿದ ಚಮತ್ಕಾರವನ್ನೇ ಅವರು ಪಂಜಾಬಿನಲ್ಲೂ ಮಾಡಿದ್ದಾರೆ. ಪಂಜಾಬಿನ ಎಲ್ಲ ರಾಜಕೀಯ ಸಮೀಕರಣಗಳನ್ನು ತಲೆಗೆಳಕು ಮಾಡಿ ಆಮ್ ಆದ್ಮಿ ಪಾರ್ಟಿಯನ್ನು ಗೆಲ್ಲಿಸಿದ್ದಾರೆ. ಪಂಜಾಬಿನ ಪ್ರೀತಿಯ ‘ಪುತ್ತರ್’ ಭಗವಂತ್ ಮಾನ್ ಮುಖ್ಯಮಂತ್ರಿಯಾಗುತ್ತಿದ್ದಾರೆ ಎಂದು ಕರ್ನಾಟಕ ಎಎಪಿ ಸಂಭ್ರಮ ವ್ಯಕ್ತಪಡಿಸಿದೆ.

ADVERTISEMENT

ಮುಂದುವರೆದು, ಹಾಗೆ ನೋಡಿದರೆ ಪಂಜಾಬ್ ರಾಜಕಾರಣದಲ್ಲಿ ಬಲಾಢ್ಯರ ಪೈಪೋಟಿಯ ನಡುವೆ ಎಎಪಿ ಅಧಿಕಾರಕ್ಕೆ ಬಂದಿರುವುದು ಒಂದು ಪವಾಡ. ಅಲ್ಲಿ ಎಪ್ಪತ್ತೈದು ವರ್ಷಗಳಿಂದ ಹಿಡಿತ ಸಾಧಿಸಿರುವ ಕಾಂಗ್ರೆಸ್ ಇದೆ. ಸಿಖ್ ಅಸ್ಮಿತೆಯನ್ನು ಪ್ರತಿಪಾದಿಸುವ ಶಿರೋಮಣಿ‌ ಅಖಾಲಿದಳವಿದೆ. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದ ಬಿಜೆಪಿ ಇದೆ. ಈ ಮೂರು ಪ್ರಬಲ ರಾಜಕೀಯ ಪಕ್ಷಗಳಲ್ಲಿ ಸಣ್ಣಪುಟ್ಟ ರಾಜಕೀಯ ಗುಂಪುಗಳೂ ಸಹ ತಮ್ಮ ಅಸ್ತಿತ್ವ ಸ್ಥಾಪಿಸಲು ಯತ್ನಿಸುತ್ತಿವೆ.

ಎಲ್ಲ ರಾಜಕೀಯ ಪಕ್ಷಗಳೂ ಧರ್ಮದ ರಾಜಕಾರಣ, ಜಾತಿಯ ರಾಜಕಾರಣ, ಮಾಫಿಯಾಗಳ ಬೆಂಬಲದ ಹಣಬಲದ ರಾಜಕಾರಣ‌ ನೆಚ್ಚಿಕೊಂಡಿರುವಾಗ ಇದ್ಯಾವುದೂ ಇಲ್ಲದ, ಜನಪರ ರಾಜಕಾರದ ಮಾದರಿಯಾಗಿ ಹುಟ್ಟಿಕೊಂಡ ಆಮ್ ಆದ್ಮಿ ಪಾರ್ಟಿ ಗೆಲ್ಲುವುದು ಅಷ್ಟು ಸುಲಭವಿರಲಿಲ್ಲ. ಆದರೆ ಪಂಜಾಬ್ ಜನರು ತಮಗೆ ಏನನ್ನು ಬೇಕೋ ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪಂಜಾಬ್ ಕೃಷಿಯನ್ನು ನೆಚ್ಚಿಕೊಂಡ ಶ್ರೀಮಂತ ರಾಜ್ಯ. ದೇಶದ ಆರ್ಥಿಕತೆಗೆ ಪಂಜಾಬ್ ಕೊಡುಗೆ ಅಪಾರ. ಆದರೆ ಇಲ್ಲಿ ಡ್ರಗ್ ಮಾಫಿಯಾ, ಮೈನಿಂಗ್ ಮಾಫಿಯಾ, ಟ್ರಾನ್ಸ್ ಪೋರ್ಟ್ ಮಾಫಿಯಾ, ಲಿಕ್ಕರ್ ಮಾಫಿಯಾ, ಲ್ಯಾಂಡ್ ಮಾಫಿಯಾ ಇತ್ಯಾದಿಗಳು ಇತ್ತೀಚಿನ ವರ್ಷಗಳಲ್ಲಿ ಬೆಳೆದುನಿಂತವು. ನಿಸ್ಸಂಶಯವಾಗಿ ಇವನ್ನೆಲ್ಲ ಬೆಳೆಸಿದ್ದು ಕಾಂಗ್ರೆಸ್, ಬಿಜೆಪಿ, ಅಕಾಲಿದಳ ಪಕ್ಷಗಳೇ. ಕೆಲವು ರಾಜಕಾರಣಿಗಳಂತೂ ನೇರವಾಗಿ ಈ ಮಾಫಿಯಾಗಳ ಭಾಗವೇ ಆಗಿದ್ದರು. ಜನರು ರೋಸಿಹೋಗಿದ್ದರು. ಅವರಿಗೆ ಪ್ರಾಮಾಣಿಕ ರಾಜಕಾರಣ ನಡೆಸುವ ತರುಣರ, ವಿದ್ಯಾವಂತರ ಪಕ್ಷ ಬೇಕಾಗಿತ್ತು. ಆಮ್ ಆದ್ಮಿ ಪಾರ್ಟಿ ಆ ಸ್ಥಾನ ತುಂಬಿತು.

ಭಗವಂತ್ ಮಾನ್ ಯಾವುದೇ ರಾಜಕೀಯ ಪರಿವಾರದಿಂದ ಬಂದವರಲ್ಲ. ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಸತೌಜ್ ಎಂಬ ಹಳ್ಳಿಯಲ್ಲಿ ಹುಟ್ಟಿ‌ ಬೆಳೆದು, ಕಲಾವಿದನಾಗುವ ಆಸೆಯಿಂದ ದೆಹಲಿವರೆಗೆ ತಲುಪಿದರು. ಉತ್ತಮ ಹಾಸ್ಯ ಕಲಾವಿದರಾದರು. ಬಹುಮಾನಗಳನ್ನು ಗೆದ್ದರು. ಆದರೆ ಜನರಿಗಾಗಿ ಏನಾದರೂ ಮಾಡಬೇಕೆಂಬ ಅವರ ತುಡಿತ ಪಂಜಾಬ್ ಮುಖ್ಯಮಂತ್ರಿ ಹುದ್ದೆಯವರೆಗೆ ಕರೆದು ತಂದಿತು. ಭಾರತದ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟುತ್ತಿದ್ದ ಯುವಕನಿಗೆ ಆಶಾಕಿರಣವಾಗಿ ಒದಗಿಬಂದಿದ್ದು ಆಮ್ ಆದ್ಮಿ ಪಾರ್ಟಿ ಮತ್ತು ಅರವಿಂದ ಕೇಜ್ರೀವಾಲ್. ಪಕ್ಷ ಹುಟ್ಟಿದ ಎರಡೇ ವರ್ಷಗಳಲ್ಲಿ ಅಂದರೆ 2014ರಲ್ಲಿ ಭಗವಂತ್ ಮಾನ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಜನರ ಪ್ರೀತಿ ಅವರಿಗೆ ಬಲುಬೇಗನೇ ಸಿಕ್ಕಿತು. ಅದೇ ಪ್ರೀತಿಯಿಂದಲೇ ಪಂಜಾಬ್ ಮುಖ್ಯಮಂತ್ರಿಯಾಗುವ ಅವಕಾಶವೂ ಅವರಿಗೆ ಲಭಿಸಿದೆ.

ಆಮ್ ಆದ್ಮಿ ಪಾರ್ಟಿ ಈ ಬಾರಿ ಚುನಾವಣೆಗೆ ಇಳಿದಾಗಲೇ ವಿರೋಧಿಗಳಿಗೆ ನಡುಕ ಹುಟ್ಟಿಕೊಂಡಿತು. ಅರವಿಂದ ಕೇಜ್ರೀವಾಲ್, ಭಗವಂತ್ ಮಾನ್ ಅವರುಗಳ ಮೇಲೆ ವೈಯಕ್ತಿಕ ಟೀಕಾಪ್ರಹಾರ, ತೇಜೋವಧೆ ನಡೆಯಿತು. ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಶಾರಿಂದ ಹಿಡಿದು ಕಾಂಗ್ರೆಸ್ ನ ರಾಹುಲ್ ಗಾಂಧಿ,‌ ಪ್ರಿಯಾಂಕಾ ಗಾಂಧಿವರೆಗೆ ಎಲ್ಲರೂ ಇದನ್ನೇ ಮಾಡಿದರು. ಒಂದು ಹಂತದಲ್ಲಂತೂ ಅರವಿಂದ ಕೇಜ್ರೀವಾಲ್ ರಿಗೆ ‘ಭಯೋತ್ಪಾದಕ ಸಂಘಟನೆ’ಗಳ ಸಂಬಂಧವಿಲ್ಲ ಎಂದು ಕ್ರೂರವಾಗಿ ಟೀಕಿಸಲಾಯಿತು, ಪಾಕಿಸ್ತಾನದ ನಂಟು ಕಲ್ಪಿಸಲಾಯಿತು. ಜನರು ಇಂಥ ಕೆಟ್ಟ ಪ್ರಚಾರಗಳಿಗೆ ಕಿವಿಗೊಡಲಿಲ್ಲ.

ಆಮ್ ಆದ್ಮಿ ಪಾರ್ಟಿ ಚುನಾವಣೆಯ ವಿಷಯದಲ್ಲಿ ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿತು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ದೆಹಲಿ ಹೈಕಮಾಂಡ್ ಹೇರುವ ಕಾರ್ಯ ಮಾಡಲಿಲ್ಲ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಪಂಜಾಬ್ ಜನತೆಯ ನಿರ್ಣಯಕ್ಕೆ ಬಿಟ್ಟು ಜನಮತಗಣನೆ ನಡೆಸಲಾಯಿತು. ಶೇ.93ರಷ್ಟು ಮಂದಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಎಂದು ಹೇಳಿದರು. ಅದೇ ಪ್ರಕಾರ ಭಗವಂತ್ ಮಾನ್ ಮುಖ್ಯಮಂತ್ರಿ ಅಭ್ಯರ್ಥಿಯಾದರು.

ನಮ್ಮದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ರಾಜಕೀಯ ಪಕ್ಷ. ಇತರ ರಾಜಕೀಯ ಪಕ್ಷಗಳ ಹಾಗೆ ನಾವು ದೆಹಲಿಯಲ್ಲಿ ಕುಳಿತು ಪಂಜಾಬಿನ ಮೇಲೆ ಹೇರುವುದಿಲ್ಲ ಎಂದಿದ್ದರು ಕೇಜ್ರೀವಾಲ್. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲೇ ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ.

ಭಗವಂತ್ ಮಾನ್ ಎದುರು ಸಾಲು ಸಾಲು ಸವಾಲುಗಳಿವೆ. ಪಂಜಾಬ್ ರಾಜ್ಯವನ್ನು ಕಾಡುತ್ತಿರುವ ಮಾಫಿಯಾಗಳನ್ನು ಇಲ್ಲವಾಗಿಸುವುದು ಬಹುದೊಡ್ಡ ಸವಾಲು. ಅದಲ್ಲದೆ ದೆಹಲಿಯ ಕೇಜ್ರೀವಾಲ್ ಸರ್ಕಾರದ ಅದ್ಭುತ ಸಾಧನೆಗಳನ್ನು ಗಮನಿಸಿರುವ ಪಂಜಾಬ್ ಜನತೆ ಸಹಜವಾಗಿಯೇ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸವಾಲು ಭಗವಂತ್ ಮಾನ್ ಎದುರಿಗಿದೆ. ಪಂಜಾಬ್ ಜನರ ಆಶೋತ್ತರಗಳನ್ನು ಅವರು ಮತ್ತು ಅವರ ಸಹೋದ್ಯೋಗಿಗಳು ಈಡೇರಿಸಲಿ ಎಂಬುದು ನನ್ನ ಆಶಯ.

Tags: BJPCongress PartyCovid 19ಅರವಿಂದ ಕೇಜ್ರೀವಾಲ್ಎಎಪಿಕರೋನಾಕರ್ನಾಟಕ ಎಎಪಿಕೋವಿಡ್-19ನರೇಂದ್ರ ಮೋದಿಪಂಜಾಬ್‌ಪಂಜಾಬ್ಪಂಜಾಬ್ ಚುನಾವಣೆಪಂಜಾಬ್ ರಾಜ್ಯಪಂಜಾಬ್‌ ಸರ್ಕಾರಬಿಜೆಪಿಭಗವಂತ್ ಮಾನ್
Previous Post

Election 2022 | ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸಿ : ರಾಹುಲ್ ಗಾಂಧಿ

Next Post

ಕುಮಾರಣ್ಣ ರಾಮನಗರದ ಆ ಪ್ರಭಾವಿನಾಯಕ ಯಾರು? : Basangouda Patil Yatnal | HD Kumaraswamy

Related Posts

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”
ಇದೀಗ

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

by ಪ್ರತಿಧ್ವನಿ
January 18, 2026
0

ಬೆಂಗಳೂರು :  ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಪೂರ್ಣ - ಇದೇ ಕಾಂಗ್ರೆಸ್ ಸಾಧನೆ! ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ದಿನದಿಂದ ದಿನಕ್ಕೆ ತನ್ನದೇ ದಾಖಲೆ...

Read moreDetails
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Next Post
ಕುಮಾರಣ್ಣ ರಾಮನಗರದ ಆ ಪ್ರಭಾವಿನಾಯಕ ಯಾರು? : Basangouda Patil Yatnal  | HD Kumaraswamy

ಕುಮಾರಣ್ಣ ರಾಮನಗರದ ಆ ಪ್ರಭಾವಿನಾಯಕ ಯಾರು? : Basangouda Patil Yatnal | HD Kumaraswamy

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!