ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರದ ಮೇಲೆ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿದೆ. ಆಮ್ ಆದ್ಮಿ ಪಾರ್ಟಿಯ ಸಂಸದರಾದ ಸಂಜಯ್ ಸಿಂಗ್ ಅವರು ದಾಖಲೆಗಳ ಸಮೇತ ಹಗರಣವನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಹಗರಣ ನಡೆದಿರುವ ಕುರಿತು ಆರೋಪಗಳು ಕೇಳಿ ಬಂದಿವೆ. ಸಂಜಯ್ ಸಿಂಗ್ ಅವರ ಪ್ರಕಾರ ಯೋಜನೆಯ ಪೈಪ್ ಲೈನ್ ಕಾಮಗಾರಿಯ ಗುತ್ತಿಗೆಯನ್ನು ಬಿಜೆಪಿ ಸಚಿವರಾಗಿರುವ ಡಾ. ಮಹೇಂದ್ರ ಸಿಂಗ್ ಅವರ ಕಂಪನಿಗೆ ನೀಡಲಾಗಿದೆ. ಈ ಕಂಪೆನಿಯನ್ನು ಎಂಟು ರಾಜ್ಯಗಳು ಕಳಪೆ ಕಾಮಗಾರಿಗಾಗಿ ತಿರಸ್ಕರಿಸಿವೆ. ಈ ಕಂಪನಿಯ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿವೆ. ಇಂತಹ ಕಂಪನಿಗೆ, ಮೂಲ ಅಂದಾಜು ಬೆಲೆಗಿಂತ 40% ಹೆಚ್ಚಿನ ದರಕ್ಕೆ ಟೆಂಡರ್ ನೀಡಲಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ದಿ ಕಾಮಗಾರಿಗಳ ವೇಗ ಹೆಚ್ಚಿಸುವ ಸಲುವಾಗಿ ಇತ್ತೀಚಿಗೆ ಕೇಂದ್ರ ಸರ್ಕಾರ ಜಲ ಶಕ್ತಿ ಇಲಾಖೆಯು ರೂ. 2,400 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡಿತ್ತು. 2019-20ರಲ್ಲಿ ಕೇಂದ್ರ ಸರ್ಕಾರವು ರೂ. 1,206 ಕೋಟಿ ಮೊತ್ತವನ್ನು ಇದೇ ಯೋಜನೆಯ ಅಡಿಯಲ್ಲಿ ಉತ್ತರ ಪ್ರದೇಶಕ್ಕೆ ಮೀಸಲಿಟ್ಟಿತ್ತು. ಇದನ್ನು ನಂತರ ರೂ. 2,571 ಕೋಟಿಗೆ ಏರಿಸಲಾಗಿತ್ತು.
ಉತ್ತರ ಪ್ರದೇಶದ ಪ್ರತೀ ಮನೆಗಳಿಗೆ ನಲ್ಲಿ ನೀರು ನೀಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿತ್ತು. ಇಂತಹ ಬೃಹತ್ ಯೋಜನೆಯಲ್ಲಿ ಈಗ ಭೃಷ್ಟಾಚಾರ ಹೊಗೆಯಾಡುತ್ತಿದೆ. ಟೆಂಡರ್ ಪಡೆಯಲು ಅರ್ಹತೆಯೇ ಇಲ್ಲದಿರುವಂತಹ ಕಂಪೆನಿಯೊಂದಕ್ಕೆ ನೂರಾರು ಕೋಟಿ ಮೊತ್ತದ ಗುತ್ತಿಗೆ ನೀಡಿರುವುದು ಈಗ ಆಪ್ ಬಹಿರಂಗಪಡಿಸಿದೆ.
https://www.facebook.com/206782119437351/posts/4244510745664448/?sfnsn=wiwspmo

“ಜಲ ಜೀವನ್ ಮಿಷನ್ ಒಂದು ಪವಿತ್ರವಾದ ಯೊಜನೆ. ಆದರೆ, ಯೋಗಿ ಸರ್ಕಾರ ಇದರಲ್ಲಿಯೂ ಹಗರಣ ನಡೆಸಿದೆ. ನೀರಿನ ಹೆಸರಿನಲ್ಲಿ ಭೃಷ್ಟಾಚಾರ ನಡೆಸಲು ಸರ್ಕಾರದ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳಿಗೆ ಸ್ವೇಚ್ಚತೆ ನೀಡಲಾಗಿದೆ,” ಎಂದು ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಈ ಹಗರಣದ ಕುರಿತಾಗಿ ಹೈಕೋರ್ಟ್ ನೇತೃತ್ವದ ವಿಶೇಷ ತನಿಖಾ ತಂಡದಿಂದ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು. ಇಲ್ಲದಿದ್ದರೆ, ಉಗ್ರವಾದ ಹೋರಾಟ ನಡೆಸುವುದಾಗಿ ಆಪ್ ಎಚ್ಚರಿಕೆ ನಿಡಿದೆ.
ಇನ್ನು ಯೋಗಿ ಆದಿತ್ಯನಾಥ್ ವಿರುದ್ದ ಮತ್ತಷ್ಟು ಆರೋಪ ಮಾಡಿರುವ ಸಂಜಯ್ ಸಿಂಗ್, ಈ ಹಿಂದೆಯೂ ಆಮ್ ಆದ್ಮಿ ಪಾರ್ಟಿ ಹಲವು ಹಗರಣಗಳ ಕುರಿತು ಬೆಳಕು ಚೆಲ್ಲಿತ್ತು. ವೆಂಟಿಲೇಟರ್ ಹಗರಣ, ಆಕ್ಸಿಮೀಟರ್ ಹಗರಣ, ರಾಮ ಮಂದಿರ ದೇಣಿಗೆ ಸಂಗ್ರಹ ಹಗರಣ ಹೀಗೆ ದೊಡ್ಡ ಪಟ್ಟಿಯೇ ಇದೆ. ಆ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕನಿಷ್ಟ ಪಕ್ಷ ಜಲ ಜೀವನ್ ಮಿಚನ್ ಯೋಜನೆಯಲ್ಲಿ ನಡೆದಿರುವ ಹಗರಣ ಕುರಿತಾದರೂ ಯೋಗಿ ಆದಿತ್ಯನಾಥ್ ಕ್ರಮ ಕೈಗೊಳ್ಳಬೇಕು.










