Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Hevy Rain in Bengalore : ಬೆಂಗಳೂರಿನಲ್ಲಿ ಮೊದಲ ಮಳೆಗೆ ಮುಳುಗಿ ಸತ್ತ ಯುವತಿ..! ಸಿಎಂ ಕೆಂಡಾಮಂಡಲ..!

ಪ್ರತಿಧ್ವನಿ

ಪ್ರತಿಧ್ವನಿ

May 21, 2023
Share on FacebookShare on Twitter

ಬೆಂಗಳೂರಿ ಸುರಿದ ಧಾರಕಾರ ಬೇಸಿಗೆ ಮಳೆಗೆ ಯುವತಿಯೊಬ್ಬರು ಬಲಿಯಾಗಿದ್ದಾರೆ. ಭಾರೀ ಮಳೆಯಿಂದ ಕೆ.ಆರ್ ಸರ್ಕಲ್ ಅಂಡರ್ ಪಾಸ್​ಗೆ ನೀರು ಬಂದಿತ್ತು. ಕ್ರಮೇಣವಾಗಿ ಅಂಡರ್ ಪಾಸ್ ಕೆಳಗೆ ನೀರಿನ ಮಟ್ಟ ಹೆಚ್ಚಾಗಿದೆ. ಈ ವೇಳೆ ನೀರಿನಲ್ಲಿ ಸಿಲುಕಿದ್ದ ಆರಕ್ಕೂ ಹೆಚ್ಚು ಮಂದಿ ನೀರು ಹೆಚ್ಚಾಗುತ್ತಿದ್ದಂತೆ ಜೋರಾಗಿ ಕಿರುಚಾಡೋಕೆ ಶುರು ಮಾಡಿದ್ದಾರೆ. ಈ ವೇಳೆ ಅಂಡರ್ ಪಾಸ್ ಮೇಲಿದ್ದ ಬೇರೆ ವಾಹನ ಸವಾರರು ಕೂಡಲೇ ಸಹಾಯಕ್ಕೆ ಹೋಗಿದ್ದಾರೆ. ಮೊದಲಿಗೆ ಸೀರೆ ಕೊಟ್ಟು ಕೆಳಗಡೆ ಇದ್ದವರನ್ನು ಮೇಲೆತ್ತಲು ಪ್ರಯತ್ನ ಮಾಡಿ ವಿಫಲವಾದ ಬಳಿಕ, ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿ ಆಸ್ಪತ್ರೆಗೆ ಕಳಹಿಸಿ ಕೊಟ್ಟಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ ಆರೋಪ ಕೇಳಿ ಬಂದಿದ್ದು 22 ವರ್ಷದ ಇನ್ಫೋಸಿಸ್​ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಮೂರ್ನಾಲ್ಕು ಬಾರಿ ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ : ಸದಾನಂದ ಗೌಡ

ಇಂಧನ ಸಚಿವ ಜಾರ್ಜ್​ ಹಾದಿ ತಪ್ಪಿಸಿದ್ದು ಯಾರು..? ಮತ್ತು ಯಾಕೆ..?

Delhi Police visited WFI President’s residence : ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ : WFI ಅಧ್ಯಕ್ಷರ ನಿವಾಸಕ್ಕೆ ದೆಹಲಿ ಪೊಲೀಸರ ಭೇಟಿ, 12 ಮಂದಿ ಹೇಳಿಕೆ ದಾಖಲು..!

ಸಿಎಂ ಆದ ಮರು ದಿನವೇ ದುರಂತ, ಸಿದ್ದರಾಮಯ್ಯ ಗರಂ..
​

ಮಳೆ ಸುರಿದಿದ್ದು ಕೇವಲ ಅರ್ಧ ಗಂಟೆ ಮಾತ್ರ. ಆದರೂ ಅವಾಂತರದ ಸುದ್ದಿ ಟಿವಿಗಳಲ್ಲಿ ಬರುತ್ತಿದ್ದ ಹಾಗೆ ಅಲರ್ಟ್​ ಆದ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ವರದಿ ಪಡೆದುಕೊಂಡಿದ್ದಾರೆ. ಮಳೆ ಹಾನಿ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಯಾವ್ಯಾವ ಭಾಗದಲ್ಲಿ ಹಾನಿಯಾಗಿದೆ ಎನ್ನುವ ಮಾಹಿತಿ ಕಲೆ ಹಾಕಿದ ಬಳಿಕ ಬಿಬಿಎಂಪಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಜನತ ತತ್ತರದ ಬಗ್ಗೆ ಕೇಳಿದ ಸಿಎಂ ಪ್ರಶ್ನೆಗೆ ಸಮರ್ಪಕ‌ ಮಾಹಿತಿ ನೀಡದ ಬಿಬಿಎಂಪಿ ಅಧಿಕಾರಿಗಳು. ಜೂನ್‌ನಲ್ಲಿ ಆರಂಭವಾಗುವ ಮಳೆಗಾಲಕ್ಕೆ ನಿಮ್ಮ ತಯಾರಿ ಏನು..? ಎಂದು ಪ್ರಶ್ನಿಸಿದ ಸಿಎಂ ಸಿದ್ಧರಾಮಯ್ಯ. ಸಿದ್ಧರಾಮಯ್ಯರ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಅಧಿಕಾರಿಗಳು. ಅರ್ಧ ಗಂಟೆ ಮಳೆಗೆ ಹೀಗೆ ಆದರೆ, ನೀವು ಬೇಸಿಗೆ ಕಾಲದಲ್ಲಿ ಕುಳಿತು ಮಾಡಿದ್ದೇನು..? ಈಗ ನಾನೇ ಅಲ್ಲಿಗೆ ಬರಬೇಕಾ..? ಎಂದು ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದಾರೆ. ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಅಂದರೆ ಮನೆಗೆ ಹೋಗಿ ಎಂದಿರುವ ಸಿಎಂ ಸಿದ್ಧರಾಮಯ್ಯ ಮಾತಿಗೆ ಮುಂಗಾರು ಮಳೆ ಆರಂಭಕ್ಕೂ ಮುನ್ನಾ ಬೆಂಗಳೂರಿನಲ್ಲಿ ಇದು ಅಕಾಲಿಕ ಮಳೆ ಎಂದು ಸಮಜಾಯಿಸಿ ನೀಡಲು ಬಿಬಿಎಂಪಿ ಅಧಿಕಾರಿಗೆ ಗದರಿದ ಸಿಎಂ, ಅಕಾಲಿಕ ಮಳೆ ಹೌದು, ಮಳೆ ಹೇಳಿ ಕೇಳಿ ಬರಬೇಕಾ..? ಅದರಲ್ಲೂ ನಿಮ್ಮನ್ನ ಕೇಳಿ ಬರಬೇಕಾ..? ಎಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ಫೋಸಿಸ್​ ಉದ್ಯೋಗಿ,​ ಆಂಧ್ರ ಮೂಲದ ಭಾನುರೇಖಾ ಸಾವು..!

ಕೆ.ಆರ್ ಸರ್ಕಲ್ ಬಳಿಯ ದುರಂತದ ಬಗ್ಗೆ ಟಿವಿಗಳಲ್ಲಿ ಸುದ್ದಿ ಬರುತ್ತಿರುವುದನ್ನು ಗಮನಿಸಿದ ಸಿಎಂ, ಕೂಡಲೇ ಅಧಿಕಾರಿಯನ್ನು ಆಸ್ಪತ್ರೆಗೆ ಕಳುಹಿಸಿ ಎಂದು ಸೂಚನೆ ಕೊಟ್ಟರಲ್ಲದೆ, ತಾನೇ ಎದ್ದು ಆಸ್ಪತ್ರೆಗೆ ಭೇಟಿ ನೀಡಿದರು. ಸಿಎಂ ಸಿದ್ದರಾಮಯ್ಯ ನೀಡಿರುವ ಮಾಹಿತಿಯಂತೆ ಮೃತ ಯುವತಿ ಭಾನುರೇಖಾ, ಆಂಧ್ರ ಪ್ರದೇಶದ ವಿಜಯವಾಡ ಮೂಲದವರು. ಬೆಂಗಳೂರಿನ ಇನ್ಫೋಸಿಸ್​ನಲ್ಲಿ ಉದ್ಯೋಗಿ ಆಗಿದ್ದರು. ಪ್ರಗತಿ ನಗರದಲ್ಲಿ ವಾಸವಾಗಿದ್ದ ಭಾನುರೇಖಾರನ್ನು ನೋಡಲು ಊರಿನಿಂದ ಅಜ್ಜಿ, ತಂಗಿ ಸೇರಿದಂತೆ ಕುಟುಂಬಸ್ಥರು ಬಂದಿದ್ದರು. ಇಂದು ಭಾನುವಾರ ಆಗಿದ್ದರಿಂದ ಕಬ್ಬನ್​ ಪಾರ್ಕ್​ ತೋರಿಸಲು ಕರೆ ತಂದಿದ್ದ ಭಾನುರೇಖಾ, ಬಾಡಿಗೆ ಕಾರು ಮಾಡಿಕೊಂಡು ಸುತ್ತಾಡಿಸುತ್ತಿದ್ದರು. ಕಾರು ಚಾಲಕ ಅಂಡರ್​ಪಾಸ್​ನಲ್ಲಿ ಭರ್ತಿಯಾಗಿದ್ದ ನೀರನ್ನು ನೋಡದೆ ಸಾಗಿದ್ದಾನೆ. ಕಾರಿನೊಳಕ್ಕೆ ನೀರು ತುಂಬಿಕೊಂಡು ಯುವತಿ ನೀರು ಕುಡಿದಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಪೋಷಕರು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ಮಾಡಲು ಅಧಿಕಾರಿಗಳಿಗೆ ಹೇಳಿದ್ದೇನೆ. ಆಸ್ಪತ್ರೆಯವರು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದರೆ ಅಗತ್ಯ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.

5 ಲಕ್ಷ ಪರಿಹಾರ ಘೋಷಣೆ, ಸತ್ತವರಿಗೆಲ್ಲಾ ಹಣ ಬೇಕಿರಲ್ಲ..!

ಮಳೆಯ ನೀರಿನಲ್ಲಿ ಪ್ರಾಣ ಕಳೆದುಕೊಂಡ ಇನ್ಫೋಸಿಸ್​ ಉದ್ಯೋಗಿ ಭಾನುರೇಖಾಗೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಬಡ ಕುಟುಂಬಗಳ ನೆರವಿಗೆ ಹಣ ಪರಿಹಾರ ಆಗಬಹುದು. ಆದರೆ ಇನ್ಫೋಸಿಸ್​ನಲ್ಲಿ ಕೆಲಸ ಮಾಡುವ ಯುವತಿಗೆ 5 ಲಕ್ಷ ದೊಡ್ಡ ಮೊತ್ತವಲ್ಲ. ಆದರೆ ಬಿಬಿಎಂಪಿ ಜನರ ಪ್ರಾಣದ ಜೊತೆ ಚಲ್ಲಾಟ ಆಡುವುದನ್ನು ಮೊದಲು ನಿಲ್ಲಿಸಬೇಕು. ಬೆಂಗಳೂರಿನ ಬಹುತೇಕ ಎಲ್ಲಾ ಅಂಡರ್​ಪಾಸ್​ಗಳಲ್ಲೂ ಮಳೆ ಬರುತ್ತಿದ್ದ ಹಾಗೆ ನೀರು ತುಂಬಿಕೊಳ್ಳುತ್ತದೆ. ಕೆ. ಆರ್ ಸರ್ಕಲ್ ಮಾತ್ರವಲ್ಲ, ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌‌, ಓಕಳಿಪುರಂ, ಕಂಟೋನ್ಮೆಂಟ್, ಸೆವೆಂತ್​ ಮಿನಿಸ್ಟರ್ ಕ್ವಾರ್ಟಸ್, ಕಾವೇರಿ ಥಿಯೇಟರ್, ಶಿವಾನಂದ ಸರ್ಕಲ್, ಸೇರಿದಂತೆ ಹತ್ತಾರು ಅಂಡರ್​ಪಾಸ್​ನಲ್ಲೂ ಇದೇ ಕಥೆ. ತುಂಬಾ ನೀರು ಸಂಗ್ರಹವಾಗುವ ಅಂಡರ್​ಪಾಸ್​ನಲ್ಲಿ ಮಳೆ ಬೀಳುತ್ತಿದ್ದ ಹಾಗೆ ಅಧಿಕಾರಿಗಳು ಅಲರ್ಟ್​ ಆಗಿ ಸಂಚಾರ ಬದಲಾವಣೆ ಮಾಡಬೇಕು ಅಥವಾ ನೀರನ್ನು ಶೀಘ್ರವಾಗಿ ಹೊರ ಹಾಕುವ ವ್ಯವಸ್ಥೆ ಮಾಡಬೇಕು. 5 ಲಕ್ಷ ಪರಿಹಾರ ಕೊಟ್ಟು ಮತ್ತೊಂದು ಸಾವಿಗೆ ಕಾಯುವುದು ಸಮಂಜಸ ಅಲ್ಲ ಅಲ್ಲವೇ..?

ಕೃಷ್ಣಮಣಿ

RS 500
RS 1500

SCAN HERE

Pratidhvani Youtube

«
Prev
1
/
4568
Next
»
loading
play
H.Vishwanath; ಗ್ಯಾರಂಟಿ ಯೋಜನೆಗಳನ್ನ ಸಿಕ್ಕ ಸಿಕ್ಕವರಿಗೆ ನೀಡಲಾಗುವುದಿಲ್ಲ | Congress guarantee | CM
play
H.Vishwanath; ಡಿ.ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ MLC H. ವಿಶ್ವನಾಥ್ ಭಾಗಿ|Devarajaarasu
«
Prev
1
/
4568
Next
»
loading

don't miss it !

ಕಾಂಗ್ರೆಸ್​ ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ಹೆಲ್ಪ್​ಲೈನ್​ : ಸಂಸದ ತೇಜಸ್ವಿ ಸೂರ್ಯ
ರಾಜಕೀಯ

ಕಾಂಗ್ರೆಸ್​ ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ಹೆಲ್ಪ್​ಲೈನ್​ : ಸಂಸದ ತೇಜಸ್ವಿ ಸೂರ್ಯ

by Prathidhvani
June 3, 2023
Universities should develop scientific spirit : ವಿಶ್ವ ವಿದ್ಯಾಲಯಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು : ಸಿಎಂ ಸಿದ್ದರಾಮಯ್ಯ
Top Story

Universities should develop scientific spirit : ವಿಶ್ವ ವಿದ್ಯಾಲಯಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
June 1, 2023
Siddaganga Mutt | ಸಿದ್ದಗಂಗಾ ಮಠದ ವಸತಿ ನಿಲಯ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಸಿಎಂ ಸೂಚನೆ
Top Story

Siddaganga Mutt | ಸಿದ್ದಗಂಗಾ ಮಠದ ವಸತಿ ನಿಲಯ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಸಿಎಂ ಸೂಚನೆ

by ಪ್ರತಿಧ್ವನಿ
May 31, 2023
Odisha Tragedy : ಒಡಿಶಾ ರೈಲು ದುರಂತ ಉನ್ನತ ಮಟ್ಟದ ತನಿಖೆ, ರೈಲ್ವೆ ಸುರಕ್ಷತಾ ಆಯುಕ್ತರಿಂದಲೂ ವಿಚಾರಣೆ
Top Story

Odisha Tragedy : ಒಡಿಶಾ ರೈಲು ದುರಂತ ಉನ್ನತ ಮಟ್ಟದ ತನಿಖೆ, ರೈಲ್ವೆ ಸುರಕ್ಷತಾ ಆಯುಕ್ತರಿಂದಲೂ ವಿಚಾರಣೆ

by ಪ್ರತಿಧ್ವನಿ
June 3, 2023
Speed of Coromandel Express was about 110-115 kmph : ಕೋರೋಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ವೇಗ ಗಂಟೆಗೆ 110 ರಿಂದ 115 ಕಿ. ಮೀ. ಇತ್ತು..!
Uncategorized

Speed of Coromandel Express was about 110-115 kmph : ಕೋರೋಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ವೇಗ ಗಂಟೆಗೆ 110 ರಿಂದ 115 ಕಿ. ಮೀ. ಇತ್ತು..!

by ಪ್ರತಿಧ್ವನಿ
June 3, 2023
Next Post
Indian Constitution ; ಸಂವಿಧಾನವೇ ಭಾರತೀಯರೆಲ್ಲರ ಧರ್ಮಗ್ರಂಥವಾಗಲಿ..!

Indian Constitution ; ಸಂವಿಧಾನವೇ ಭಾರತೀಯರೆಲ್ಲರ ಧರ್ಮಗ್ರಂಥವಾಗಲಿ..!

Siddaramaiah ‘Guaranteed Money | ಮೋದಿ ಅಕೌಂಟ್​ಗೆ ಬರುತ್ತಾ ಸಿದ್ದರಾಮಯ್ಯ ‘ಗ್ಯಾರಂಟಿ ಹಣ’..!? ಡೌಟ್​ ಡೌಟ್​..!

Siddaramaiah 'Guaranteed Money | ಮೋದಿ ಅಕೌಂಟ್​ಗೆ ಬರುತ್ತಾ ಸಿದ್ದರಾಮಯ್ಯ ‘ಗ್ಯಾರಂಟಿ ಹಣ’..!? ಡೌಟ್​ ಡೌಟ್​..!

Karnataka Election | 2024ರ ದಿಕ್ಸೂಚಿಯಾಗಿ ಕನಾಟಕದ ಚುನಾವಣೆಗಳು

Karnataka Election | 2024ರ ದಿಕ್ಸೂಚಿಯಾಗಿ ಕನಾಟಕದ ಚುನಾವಣೆಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist