ಗಾಂಧಿನಗರ: ಎಷ್ಟೇ ತಿಳುವಳಿಕೆ ಮೂಡಿಸಿದರೂ ಹಲವರು ಮತದಾನಕ್ಕೆ ಮನಸ್ಸು ಮಾಡದಿರುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಲೇ ಇದೆ. ಈ ಮಧ್ಯೆ ಎರಡೂ ಕೈಯಿಲ್ಲದ ಯುವಕನೊಬ್ಬ ಕಾಲಿನಿಂದ ಮತದಾನ ಮಾಡಿ ಅಂಥವರಿಗೆ ಮಾದರಿಯಾಗಿದ್ದಾನೆ.

ಯುವಕ ಮತದಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಕಿತ್ ಸೋನಿಯವರು (Ankit Soni) ಎಂಬುವವರೇ ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಕಾಲುಗಳ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತದಾನ ಮಾಡಿದ ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ದೇಶದ ಅಭಿವೃದ್ಧಿ, ಭದ್ರತೆಗಾಗಿ ಮತದಾನ ಮಾಡಬೇಕು. 20 ವರ್ಷಗಳ ಹಿಂದೆ ಎಲೆಕ್ಟ್ರಿಕ್ ಶಾಕ್ ನಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ. ನನ್ನ ಗುರುಗಳು ಮತ್ತು ಶಿಕ್ಷಕರ ಆಶೀರ್ವಾದದಿಂದ ನಾನು ಚಿತ್ರ ಬಿಡಿಸಲು ಆರಂಭಿಸಿದೆ. ನಂತರ ಶಾಲೆಗೆ ಹೋಗಲು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಿ MBA ಮಾಡಿದೆ. ಕಳೆದ ಹಲವು ವರ್ಷಗಳಿಂದ ನಾನು ಹೀಗೆಯೇ ಮತ ಚಲಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.