ಹೈದರಾಬಾದ್:ಹಣಕ್ಕಾಗಿ ಕಳ್ಳತನವನ್ನೇ (Theft)ವೃತ್ತಿಯಾಗಿ ಮಾಡಿಕೊಳ್ಳುವ ಖದೀಮರು, ತಾವು ಹಾಕಿಕೊಂಡ ಖತರ್ನಾಕ್ ಪ್ಲ್ಯಾನ್ ಪ್ರಕಾರವೇ ಕೆಲಸವನ್ನು ಬಹಳ ಸುಲಭವಾಗಿ ಮುಗಿಸಿಕೊಳ್ಳುತ್ತಾರೆ.ಎಷ್ಟೇ ದೊಡ್ಡ ಕ್ರಿಮಿನಲ್ ಆಗಿದ್ದರೂ ಪೊಲೀಸರ ( police)ಕಣ್ಣಿನಿಂದ, ಜನರ ಕೈಯಿಂದ ತಪ್ಪಿಸಿಕೊಳ್ಳುವುದು escaping)ಅಷ್ಟು ಸುಲಭವಲ್ಲ.
ಸದ್ಯ ಇದಕ್ಕೊಂದು ನಿದರ್ಶನ ಎನ್ನುವಂತೆ ಸರಣಿ ಮನೆಗಳ್ಳತನದಲ್ಲಿ ನಿಸ್ಸೀಮನಾಗಿದ್ದ ಕಳ್ಳನೊಬ್ಬ ಇದೀಗ ನಿವಾಸಿಗಳ ಕೈಗೆ ಸಿಲುಕಿ ಹಣ್ಣುಗಾಯಿ-ನೀರುಗಾಯಿ ಆಗಿದ್ದಾನೆ.
ಮನೆ ಕಳ್ಳತನಕ್ಕೆಂದು ಬಂದ ಖದೀಮ ಅಲ್ಲಿನ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾನೆ.ತಕ್ಷಣವೇ ಯುವಕರು ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಲ್ಗೊಂಡ ಜಿಲ್ಲೆಯ ನಾರ್ಕೆಟ್‌ಪಲ್ಲಿ ಮಂಡಲದ ಯಲ್ಲರೆಡ್ಡಿಗುಡ ಗ್ರಾಮದಲ್ಲಿ ವರದಿಯಾಗಿದೆ.ಸರಣಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೋಗಲ ಗಣೇಶ್ ಎಂದು ಗುರುತಿಸಲಾಗಿದ್ದು, ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಸ್ಥಳೀಯರ ಹೊಡೆತದಿಂದ ಸುಸ್ತಾದ ಕಳ್ಳ, ಹಸಿವು ಎಂದು ಹೇಳಿದ್ದಾನೆ.
Youth Serve Pulihora to Thief Before Handing Him Over to Police
— Saye Sekhar Angara (@sayesekhar) September 17, 2024
In Ellareddigudem village, Narketpally Mandal, Nalgonda district, a group of youth caught a notorious thief named Pogal Ganesh, who was involved in a series of burglaries. They have beaten him tying him to a pillar.… pic.twitter.com/8M2WKBEilj
ಕಳ್ಳ ಹಸಿವು ಎಂದಾಕ್ಷಣ ಅಲ್ಲೇ ಇದ್ದ ಯುವಕನೊಬ್ಬ ಆತನಿಗೆ ಪುಳಿಯೋಗರೆ ತಂದುಕೊಟ್ಟಿದ್ದಲ್ಲದೇ, ತಾನೇ ತನ್ನ ಕೈಯಿಂದ ತಿನಿಸಿದ್ದಾನೆ.ಈ ಮನಮಿಡಿಯುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.