
ಪ್ರತಿಧ್ವನಿ ಈಗಾಗಲೇ ಜಯಪ್ರಕಾಶ ನಾರಾಯಣ ಯುವ ತರಬೇತಿ ಕೇಂದ್ರದಲ್ಲಿ (Jayaprakash Narayan National Youth Center Vidyanagar, Bangalore) ನಡೆದಿದೆ ಎನ್ನಬಹುದಾಗ ಸುದ್ದಿಯನ್ನು ದಾಖಲೆ ಸಮೇತ ನಿಮ್ಮ ಮುಂದಿಡುವ ಕೆಲಸ ಮಾಡಿತ್ತು. 2019 ರಿಂದ ಶುರುವಾಗಿರುವ ಈ ದಂಧೆಯಲ್ಲಿ ಕ್ರೀಡಾ ಇಲಾಖೆ ಹಾಗು ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಸೇರಿಕೊಂಡು ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನುವುದು ಪ್ರತಿಧ್ವನಿ ಟೀಂ ತನಿಖಾ ತಂಡಕ್ಕೆ ಸಿಕ್ಕಿರುವ ಸ್ಪಷ್ಟ ಮಾಹಿತಿ.

ರಾಜಕಾರಣ ಅಂದರೆ ಜನಸೇವೆ ಅಲ್ಲ, ಸರ್ಕಾರದಲ್ಲಿ ಸಿಗುವ ಅಧಿಕಾರವನ್ನು ಬಳಸಿಕೊಂಡು ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎನ್ನುವುದು ಈ ಅಂಕಿ ಅಂಶವನ್ನು ನೋಡಿದಾಗ ಗೊತ್ತಾಗ್ತಿದೆ. Sri Jayaprakash Narayan National Youth Training Center Bangalore ಕಳೆದ 5 ವರ್ಷದ ಅವಧಿಯಲ್ಲಿ ನಮಗೆ ಸಿಕ್ಕಿರುವ ದಾಖಲೆಗಳಲ್ಲಿ 50 ರಿಂದ 60 ಕೋಟಿ ಹಣವನ್ನು ಬಿಡುಗಡೆ ಮಾಡಿಕೊಂಡು ಕೆಲಸವನ್ನೇ ಮಾಡದೆ ಬಿಲ್ ಬಿಡುಗಡೆ ಮಾಡಿರುವ ವಿಚಾರ ಬಯಲಾಗಿದೆ.

2019-20ನೇ ಸಾಲಿನಲ್ಲಿ ಜಯಪ್ರಕಾಶ್ ನಾರಾಯಣ ಯುವ ಕ್ರೀಡಾ ತರಬೇತಿ ಕೇಂದ್ರದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ₹15 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಮತ್ತೆ 10 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. 5 ವರ್ಷ ಕಳೆದು ಹೋಗಿದೆ. ಜಯಪ್ರಕಾಶ ನಾರಾಯಣ ಯುವ ತರಬೇತಿ ಕೇಂದ್ರದಲ್ಲಿ ಮ್ಯೂಸಿಯಂ ಬಗ್ಗೆ ವಿಚಾರಿಸಿದರೆ, ಇಲ್ಲಿ ಯಾವ ಮ್ಯೂಸಿಯಂ (museum) ಕೂಡ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
5 ವರ್ಷದಲ್ಲಿ ಈಗ ನಾವು ಕೇಳಿದ್ದು ಒಂದು ಅಣುವಿನಷ್ಟೂ ಇಲ್ಲ. ಇದು ಸ್ಯಾಂಪಲ್ ಮಾತ್ರ. ಇದೇ ರೀತಿ ಕ್ರೀಡಾ ಇಲಾಖೆಯಲ್ಲಿ ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಕಾಮಗಾರಿ ಪರಿಶೀಲನೆ ಮಾಡಿ ಬಿಲ್ ಬಿಡುಗಡೆಗೆ ಅಸ್ತು ಎಂದಿರುವುದು ಎಕ್ಸಿಕ್ಯೂಟಿವ್ ಎಂಜಿನಿಯರ್ ಹರೀಶ್ ಹಾಗು ಕ್ರೀಡಾ ಇಲಾಖೆ ಅಧಿಕಾರಿಗಳು. ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸವನ್ನೇ ಮಾಡದೆ ಬಿಲ್ ಬಿಡುಗಡೆ ಆಗ್ತಿದೆ ಎನ್ನುವುದನ್ನು ನೋಡಿದರೆ ಕ್ರೀಡಾ ಸಚಿವರು ಪಾಲುದಾರರಾಗಿರುವ ಶಂಕೆ ಕಾಡುತ್ತಿದೆ.Sri Jayaprakash Narayan National Youth Training Center Bengaluru

ಪ್ರತಿ ಬಾರಿಯೂ ಕುಮಾರ್ ಎಂಬುವರಿಗೆ ಗುತ್ತಿಗೆ ನೀಡಲಾಗ್ತಿದೆ. ಅದರಂತೆ ಮ್ಯುಸಿಯಂ ನಿರ್ಮಾಣದ ಗುತ್ತಿಗೆಯನ್ನೂ ಕುಮಾರ್ ಎಂಬಾತನಿಗೆ ಕೊಡಲಾಗಿದೆ. ಕಳೆದ 5 ವರ್ಷದಿಂದ ಕಾಮಗಾರಿ ಮಾಡಿಲ್ಲ. ಬಿಲ್ ಮಾತ್ರ ಬಿಡುಗಡೆ ಆಗ್ತಾನೆ ಇದೆ. ಬಹುತೇಕ ಎಲ್ಲಾ ಕಾಮಗಾರಿಗಳನ್ನೂ ಗುತ್ತಿಗೆದಾರ ಕುಮಾರ್ ಎಂಬುವರ ಹೆಸರಲ್ಲೇ ಬಿಲ್ ಬಿಡುಗಡೆ ಮಾಡುತ್ತಿರುವುದನ್ನು ನೋಡಿದಾಗ ಇದರ ಹಿಂದಿನ ರಹಸ್ಯ ಗೋಲ್ಮಾಲ್ ಅನ್ನೋದು ಬಹುತೇಕ ಖಚಿತ ಆಗ್ತಿದೆ. ಕುಮಾರ್ ಯಾರು, ಕಾಮಗಾರಿ ಯಾಕೆ ಮಾಡಿಲ್ಲ ಎನ್ನುವುದನ್ನು ಪರಿಶೀಲನೆ ಮಾಡಬೇಕು ಅಲ್ಲವೇ..?

2019ರಲ್ಲಿ ಎಂದು ಹೇಳಿದ್ದನ್ನು ನೋಡಿ ಇಂದಿನ ಕಾಂಗ್ರೆಸ್ ಸರ್ಕಾರ ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳುವಂತಿಲ್ಲ. ಕಾಂಗ್ರೆಸ್ ಸರ್ಕಾರ ಇಷ್ಟೆಲ್ಲಾ ಭ್ರಷ್ಟಾಚಾರ ಆಗಿರುವುದನ್ನೂ ನೋಡಿ ಸುಮ್ಮನಿದೆ ಎನ್ನುವುದಾದರೆ ಕಾಂಗ್ರೆಸ್ ಸರ್ಕಾರದ ಪಾಲೂ ಸೇರಿಕೊಳ್ಳುತ್ತದೆ.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಕೆ. ಗೋವಿಂದರಾಜು, ಕ್ರೀಡಾ ಕ್ರೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. FIBA (Federation International Basketball) ಏಷ್ಯಾದ ಅಧ್ಯಕ್ಷರಾಗಿರುವ ಮೊದಲ ಭಾರತೀಯ ಎನ್ನುವ ಹೆಗ್ಗಳಿಗೆ ಪಡೆದಿದ್ದಾರೆ. ಆದರೆ ರಾಜ್ಯದಲ್ಲಿ ಕ್ರೀಡಾಪಟುಗಳ ಉತ್ತೇಜನ ಮಾಡುತ್ತಿಲ್ಲ. ಸರ್ಕಾರದಿಂದ ಕೋಟಿ ಕೋಟಿ ಹಣ ಕ್ರೀಡೆ ಹೆಸರಲ್ಲಿ ದೋಖಾ ಆಗ್ತಿದ್ರು ಸರಿಮಾಡುವ ಕೆಲಸ ಮಾಡ್ತಿಲ್ಲ ಎನ್ನುವುದನ್ನು ಗಮನಿಸಬೇಕು. ರಾಜ್ಯದ ಕ್ರೀಡಾಪಟುಗಳಿಗೆ ಉತ್ತಮ ವ್ಯವಸ್ಥೆ ಆಗಬೇಕು ಎನ್ನುವುದು ಪ್ರತಿಧ್ವನಿ ಕಾಳಜಿ ಅಷ್ಟೆ.
