ಅತಿಹೆಚ್ಚು ಜನರ ಮನೆಯಲ್ಲಿ ಶ್ವಾನಗಳನ್ನು ಸಾಕುತ್ತಾರೆ.. ಅಬ್ಬಬ್ಬ ಸಾಕುವುದು ಮಾತ್ರವಲ್ಲ ತಮ್ಮ ಮನೆಯ ಮಕ್ಕಳಂತೆ ಅವುಗನ್ನು ನೋಡಿಕೊಳ್ತಾರೆ.ಶ್ವಾನಕ್ಕೆ ಅಂತಾನೆ ವಿಷೇಶವಾದ ಅಡುಗೆಗಳನ್ನು ತಯಾರಿಸುವುದರ ಜೊತೆಗೆ ಮಕ್ಕಳ್ಳಿಗೆ ತಿನ್ನಿಸಿದಂತೆ ತಿನ್ನಿಸುತ್ತಾರೆ..ಸರಿಯಾದ ಸಮಯಕ್ಕೆ ಊಟ ಸ್ನಾನ ಎಲ್ಲವು ಕೂಡಾ ಮನುಷ್ಯಂತೆಯೆ ಮಾಡುತ್ತಾರೆ..

ಇಷ್ಟು ಮಾತ್ರವಲ್ಲದೆ ತಿಂಗಳಿಗೊಮ್ಮೆ ಸ್ಪಾ, ಹೇರ್ ಕಟ್ಟ ,ನೈಲ್ ಟ್ರಿಮ್ ಅಬ್ಬಬ್ಬ ಒಂದಾ ಎರಡ.ಇದೆಲ್ಲದೆ ಜೊತೆಗೆ ಶ್ವಾನಗಳಿಗಂತನೆ ವಿವಿಧವಾದ ಬಟ್ಟೆ, ಆಸ್ಕಸೆರಿಸ್ ಕೂಡಾ ಮಾರ್ಕೆಟ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿವೆ.. ಇವೆಲ್ಲದರ ಜೊತೆಗೆ ಹುಬ್ಬೆರಿರುವಂತೆ ಮಾಡಿದ್ದು ಶ್ವಾನಗಳಿಗೆ ಮಳೆಗಾಲಕ್ಕೆ ಅಂತ ಬಂದಿರುವ ರೈನ್‌ಕೋಟ್‌ಗಳು..

ಶ್ವಾನಗಳನ್ನು ಮೆನೆಯಲ್ಲಿರುವ ಮಕ್ಕಳಾಗಲಿ ಅಥವ ಹಿರಿಯರಾಗಲಿ ಬೆಳಗ್ಗೆ ಹಾಗೂ ಸಂಜೆವೇಳೆ ವಾಕ್ ಕರೆದುಕೊಂಡು ಹೋಗ್ತಾರೆ. ಹಾಗೂ ಕೆಲವು ಬಾರಿ ಬೈಕ್ ಹಾಗೂ ಕಾರ್‌ಗಳಲ್ಲಿಯು ಶ್ವಾನಗಳನ್ನು ನೋಡ್ತಿವಿ. ಮಳೆಗಾಲದಲ್ಲಿ ಮನುಷ್ಯರು ನೆನೆಯಬಾರದೆಂದು ಛತ್ರಿ ಅಥವ ರೈನ್ ಕೋಟ್ ಬಳಸುತ್ತಾರೆ..ಇದೀಗಾ ಶ್ವಾನಕ್ಕು ರೈನ್ ಕೋಟ್ ಬಂದಿರೋದು ಪೆಟ್ ಪ್ರಿಯರಿಗೆ ಸಂತಸದ ವಿಚಾರ.ಆಯಾ ಜಾಯಿಯ ಶ್ವಾನಗಳಿಗೆ ಬೇರೇ ಬೇರೇ ಸೈಜ್‌ನ ರೈಟ್‌ಕೋಟ್ ಮತ್ತು ಆಕ್ಸಿಸೆರಿಸ್ ಬಂದಿದೆ..ಇವುಗಳನ್ನು ಧರಿಸಿದಾಗ ಶ್ವಾನಗಳು ಮದ್ದಾಗಿ ಕಾಣುತ್ತವೆ..

ಬಣ್ಣಬಣದ ರೈನ್ ಕೋಟ್‌ಗಳ ಜೊತೆಗೆ ನೆಡೆಯುವಾಗ ಕಾಲಿನ ಪಾದಗಳಿಗೆ ಮಣ್ಣು ಹಾಗೂ ಕೆಸರು ತಾಕದಿರಲಿ ಎಂದು ರೈನ್ ಬೂಟ್ಸ್,ಟೈಯಿಂಗ್ ಸ್ಲಿಪರ್,ಹಾಗೂ ಪೆಟ್ ವೆಲ್ಲೈಸ್‌ಗಳಲ್ಲು ಲಗ್ಗೆ ಇಟ್ಟಿವೆ..

ಹಾಗೂ ಶ್ವಾನಗಳಿಗೆ ಹೆಚ್ಚು ಚಳಿ ಆಗದೆ ಇರಲು ವಾಟರ್‌ಪ್ರೂಫ್ ರೈನ್ ಕೋಟ್ ಜೊತೆಗೆ, ವಿವಿಧ ಮೆಟಿರಿಯಲ್‌ನ ಕೋಟ್‌ಗಳು ಟ್ರೆಂಡ್ ಕ್ರಿಯೇಟ್ ಮಾಡಿವೆ,ಅದರಲ್ಲು ಸಿಂಥಟಿಕ್,ಉಲ್ಲನ್,ಪಾಲಿಸ್ಟರ್ ಕೋಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ..

ಇದರ ಜೊತೆಗೆ ಶ್ವಾನಗಳಿಗೆ ಬೇಕಾದಂತಹ ಬೆಲ್ಟ್, ಟವೆಲ್ಸ್, ವೈಪ್ಸ್, ಮ್ಯಾಟ್, ಬೆಡ್ ಎಲ್ಲವು ಕೂಡಾ ಪೆಟ್ ಸ್ಟೋರ್‌ಗಳಲ್ಲು ಲಭ್ಯವಿದ್ದು ಶ್ವಾನ ಪ್ರಿಯರು ಮುಗಿಬಿದ್ದು ಕರಿದಿ ಮಾಡ್ತಯಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಮಾನ್ಸೂನ್‌ನಲ್ಲಿ ಮುದ್ದು ಮುದ್ದಾದ ನಾಯಿಮರಿಗಳ ಆರೋಗ್ಯಕ್ಕಾಗಿ ಜನರ ಸಿಕ್ಕಪಟ್ಟೆ ವೆಚ್ಚ ಮಾಡ್ತಾಯಿದ್ದಾರೆ..ಹಾಗೂ ಬೇಡಿಕೆ ಹೆಚ್ಚಾದಂತೆ ಮತ್ತಷ್ಟು ಹೊಸ ಫ್ಯಾಶನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ..