ದೇವರನಾಡು ಕೇರಳದಲ್ಲಿ (Kerala) ಸಂಭವಿಸಿದ ಭೂಕುಸಿತ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಒಂದೇ ರಾತ್ರಿಯಲ್ಲಿ ಇಡೀ ಊರಿಗೇ ಊರೇ ಜಲಸಮಾಧಿಯಾಗಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದ್ದು, ದುರಂತದಲ್ಲಿ ಇದುವರೆಗೂ 165ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಘಟನೆಯಲ್ಲಿ 190ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ. ಇನ್ನೂ ಗಾಯಾಳುಗಳಿಗೆ ಮೆಪ್ಪಾಡಿ (Meppadi), ವಯನಾಡು (wayanadu), ಮಲಪ್ಪುರಂ (Mallapuram), ಕಾಸರಗೋಡು (Kasaragodu), ಕರ್ನಾಟಕದ ಹೆಚ್.ಡಿ.ಕೋಟೆ, ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ವಯನಾಡ್ ಭೂಕುಸಿತದಲ್ಲಿ ಸಿಲುಕಿರುವವ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ ಹಲವು ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಹಲವರನ್ನ ರಕ್ಷಣೆ ಮಾಡಲಾಗಿದೆ. ಸೇನೆಯು ಮೃತ್ಯುಕೂಪದಿಂದ ಜನರನ್ನ ಕಾಪಾಡುವ ಕಾರ್ಯ ಮುಂದುವರೆಸಿದೆ. ಹೆಲಿಕಾಪ್ಟರ್ (helicopter) ಮೂಲಕ ರಕ್ಷಣಾ ಕಾರ್ಯ ಮುಂದುವರೆದಿದೆ.
ಈ ಘಟನೆಯ ಕ್ಷಣ-ಕ್ಷಣದ ಮಾಹಿತಿಯನ್ನ ಕೇರಳದ ಸಿಎಂ ಪಿಣರಾಯಿ ವಿಜಯನ್ (Cm pinarayi vijayan) ತರಿಸಿಕೊಳ್ಳುತ್ತಿದ್ದಾರೆ. ಹೊರ ರಾಜ್ಯಗಳಿಂದ ರಕ್ಷಣಾ ಕಾರ್ಯಕ್ಕೆ ಸಕಲ ರೀತಿಯ ನೆರವು ನೀಡಲಾಗ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Tamil nadu cm M K Stalin), ರಕ್ಷಣಾ ಕಾರ್ಯಕ್ಕೆ 5 ಕೋಟಿ ರೂಪಾಯಿ ಪ್ರವಾಹ ನೆರವನ್ನ ಘೋಷಿಸಿದೆ.