• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ರಾಷ್ಟ್ರಪತಿ ಸ್ಥಾನವನ್ನು ಪ್ರಾತಿನಿಧಿಕವಾಗಿ ನೋಡಬೇಕಿಲ್ಲ

ನಾ ದಿವಾಕರ by ನಾ ದಿವಾಕರ
July 26, 2022
in ಅಭಿಮತ
0
ರಾಷ್ಟ್ರಪತಿ ಸ್ಥಾನವನ್ನು ಪ್ರಾತಿನಿಧಿಕವಾಗಿ ನೋಡಬೇಕಿಲ್ಲ
Share on WhatsAppShare on FacebookShare on Telegram

ಭಾರತ ತನ್ನ ಸ್ವಾತಂತ್ರ್ಯದ 75ನೆಯ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಪ್ರಥಮವಾಗಿ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ನೂತನ ರಾಷ್ಟ್ರಪತಿಯವರನ್ನು  ಯಾವುದೇ ರೀತಿಯ ಪ್ರಾತಿನಿಧಿಕ ಅಸ್ಮಿತೆಗಳಿಗೆ ಬಂಧಿಸದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ  ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವುದು ಮತ್ತು ಓರ್ವ ಮಹಿಳೆ ಆಯ್ಕೆಯಾಗಿರುವುದು ಎಲ್ಲರೂ ಸ್ವಾಗತಿಸಬೇಕಾದ ವಿಚಾರ. ಒಡಿಷಾ ವಿಧಾನಸಭೆಯಲ್ಲಿ ಎರಡು ಅವಧಿ ಶಾಸಕಿಯಾಗಿ, ಸಚಿವೆಯಾಗಿ ಮತ್ತು ಒಂದು ಅವಧಿಗೆ ಜಾರ್ಖಂಡ್‌ ರಾಜ್ಯದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿರುವ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವತಂತ್ರ ಭಾರತದ ಹೆಮ್ಮೆಯ ಪುತ್ರಿಯಾಗಿ ಸಂವಿಧಾನ ಮತ್ತು ಸಾಂವಿಧಾನಿಕ ಆಶಯಗಳ ರಕ್ಷಣೆಗೆ ಬದ್ಧರಾಗಿ ತಮ್ಮ ಹುದ್ದೆಯನ್ನು ನಿರ್ವಹಿಸುತ್ತಾರೆ ಎಂದು ಆಶಿಸೋಣ. ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ವ್ಯಕ್ತಿಗತ ನೆಲೆಯಲ್ಲಿ ಮತ್ತು ನಡೆದುಬಂದ ರಾಜಕೀಯ ಹಾದಿಯ ನೆಲೆಯಲ್ಲಿ ವ್ಯಕ್ತಿಗತ ಹೆಜ್ಜೆಗಳ ಪರಾಮರ್ಶೆಯಾಗಲೀ, ಪುನರಾವಲೋಕನವಾಗಲೀ ಅನಗತ್ಯವೇ ಎನಿಸುತ್ತದೆ.

ADVERTISEMENT

ಸ್ವಾತಂತ್ರ್ಯ ಬಂದ ದಿನದಿಂದಲೂ, ಇಂದಿನವರೆಗೂ ಈ ಹುದ್ದೆಯ ಹಿಂದೆ ಆಡಳಿತಾರೂಢ ಪಕ್ಷದ ರಾಜಕೀಯ ಹಿತಾಸಕ್ತಿಗಳು ಇರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಏಕೆಂದರೆ ಮೂಲತಃ ಸಂವಿಧಾನ ಅನುಚ್ಛೇದ 74ರ ಅನ್ವಯ ರಾಷ್ಟ್ರಪತಿಯವರು ಕೇಂದ್ರ ಸಚಿವ ಸಂಪುಟದ ಸಲಹೆಯಂತೆಯೇ ತಮ್ಮ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಪತಿಯವರಿಗೆ ವಿಶೇಷ ಪರಮಾಧಿಕಾರವನ್ನೂ ನೀಡಲಾಗಿದೆ. ಸಂಸತ್ತಿನಲ್ಲಿ ಅನುಮೋದಿಸಲಾದ ಪ್ರತಿಯೊಂದು ಮಸೂದೆಗೂ ರಾಷ್ಟ್ರಪತಿಯವರ ಅಂಕಿತ ಅವಶ್ಯವಾಗಿರುತ್ತದೆ. ಇಲ್ಲವಾದಲ್ಲಿ ಅದು ಕಾನೂನಾಗಿ ಜಾರಿಗೊಳಿಸಲಾಗುವುದಿಲ್ಲ. ಇಲ್ಲಿಯೂ ಸಹ ಸಂವಿಧಾನದ ಅನುಚ್ಛೇದ 3ರಲ್ಲಿ ರಾಷ್ಟ್ರಪತಿಗೆ ಕೆಲವು ವಿಶೇಷ ನಿರಾಕಾರಣಾಧಿಕಾರಗಳನ್ನು ನೀಡಲಾಗಿದೆ. ತಮ್ಮ ಸಂಪೂರ್ಣ ನಿರಾಕರಣಾಧಿಕಾರವನ್ನು ಬಳಸಿ ರಾಷ್ಟ್ರಪತಿಯವರು ಯಾವುದೇ ಮಸೂದೆಗೆ ಅಂಕಿತ ಹಾಕಲು ಒಪ್ಪದೆ ಹೋದರೆ, ಅದನ್ನು ಕಾನೂನಾಗಿ ಜಾರಿಮಾಡಲಾಗುವುದಿಲ್ಲ. ಆದರೆ ಸಂಸತ್ತಿನಲ್ಲಿ ಖಾಸಗಿ ಸದಸ್ಯರ ಮೂಲಕ ಮಂಡಿಸಲಾಗುವ ಮಸೂದೆಗಳಿಗೆ ಇದು ಅನ್ವಯಿಸುವುದಿಲ್ಲ. ಹಾಗೆಯೇ ರಾಷ್ಟ್ರಪತಿಯವರ ಅಂಕಿತ ದೊರೆಯುವ ಮುನ್ನವೇ ಸಚಿವ ಸಂಪುಟ ರಾಜೀನಾಮೆ ನೀಡಿದರೂ ಅನ್ವಯಿಸುವುದಿಲ್ಲ.

ಕೆಲವು ಸಂದರ್ಭಗಳಲ್ಲಿ ರಾಷ್ಟ್ರಪತಿ ಕಚೇರಿಯು ಸಂಸತ್ತಿನಲ್ಲಿ ಅನುಮೋದಿಸಲಾದ ಮಸೂದೆಗಳನ್ನು ಪುನರ್‌ ಪರಿಷ್ಕರಣೆಗೆ ಅಥವಾ ಪುನರಾವಲೋಕನಕ್ಕಾಗಿ, ತಮ್ಮ ಆಕ್ಷೇಪಗಳೊಂದಿಗೆ, ಹಿಂದಿರುಗಿಸುವ ವಿಶೇಷಾಧಿಕಾರವನ್ನೂ ಹೊಂದಿರುತ್ತದೆ. ಆದರೆ ಹೀಗೆ ಹಿಂದಿರುಗಿಸಲಾದ ಮಸೂದೆಯನ್ನು ಸಂಸತ್ತು ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅನುಮೋದಿಸಿದರೆ ಆಗ ರಾಷ್ಟ್ರಪತಿಯವರು ಅಂಗೀಕರಿಸಬೇಕಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ಮಸೂದೆಗಳನ್ನು ಇತ್ಯರ್ಥಮಾಡದೆ, ಅಂಕಿತವನ್ನೂ ನೀಡದೆ ಉಳಿಸಿಕೊಳ್ಳುವ ಅಧಿಕಾರವೂ ರಾಷ್ಟ್ರಪತಿಯವರಿಗೆ ಇರುತ್ತದೆ. ಸಂವಿಧಾನದಲ್ಲಿ ಈ ಕುರಿತ ಸ್ಪಷ್ಟ ಉಲ್ಲೇಖ ಇಲ್ಲದಿದ್ದರೂ, ಇದು ಆಚರಣೆಯಲ್ಲಿ ನಡೆದುಬಂದಿದೆ. ಇಂತಹ ಸನ್ನಿವೇಶಗಳಲ್ಲಿ ಮಸೂದೆಗಳು ಕಾಲಕ್ರಮೇಣ ನೆನೆಗುದಿಗೆ ಬೀಳುತ್ತವೆ. ಸಂವಿಧಾನದ ಅನುಚ್ಚೇದ 123ರ ಅಡಿಯಲ್ಲಿ ಕೇಂದ್ರ ಸಚಿವ ಸಂಪುಟದ ಸಲಹೆಯನ್ನಾಧರಿಸಿ ರಾಷ್ಟ್ರಪತಿಯವರು ಸುಗ್ರೀವಾಜ್ಞೆಯನ್ನು ಹೊರಡಿಸುವ ಪರಮಾಧಿಕಾರವನ್ನೂ ಹೊಂದಿರುತ್ತಾರೆ. ಇದು ತುರ್ತು ಸಂದರ್ಭಗಳಲ್ಲಿ ಮಾತ್ರವೇ ಬಳಕೆಯಾಗುವ ಒಂದು ಸಾಂವಿಧಾನಿಕ ಮಾರ್ಗವೂ ಅಗಿದೆ.

ಭಾರತದ ವಸಾಹತುಶಾಹಿಯಿಂದ ವಿಮೋಚನೆ ಪಡೆದ ನಂತರದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣವೇ ಈ ದೇಶದ ಬಹುತ್ವ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಮುದಾಯಿಕ ಅಸ್ಮಿತೆಗಳು. ಪ್ರಾತಿನಿಧಿಕ ಸಂಸದೀಯ ವ್ಯವಸ್ಥೆಯಲ್ಲಿ ಎಲ್ಲ ಜನಸಮುದಾಯಗಳನ್ನೂ ಸಮಾನವಾಗಿ ಪ್ರತಿನಿಧಿಸುವಂತಹ ಒಂದು ಸಂಸದೀಯ ವ್ಯವಸ್ಥೆಯಲ್ಲಿ ಯಾವುದೇ ಕಾರಣಕ್ಕೂ ನಿರಂಕುಶಾಧಿಕಾರ ನುಸುಳಬಾರದು ಎನ್ನುವ ದೂರಾಲೋಚನೆಯಿಂದಲೇ, ಜನಪ್ರತಿನಿಧಿಗಳ ಕಾರ್ಯನಿರ್ವಹಣೆಯ ಬಗ್ಗೆಯೂ ನಿಗಾವಹಿಸಬೇಕಾದ ಒಂದು ಸಾಂವಿಧಾನಿಕ ಹುದ್ದೆಯ ರೂಪದಲ್ಲಿ ರಾಷ್ಟ್ರಪತಿಗಳ ಆಯ್ಕೆಯನ್ನು ಪರಿಗಣಿಸಲಾಗಿತ್ತು. ಪಕ್ಷ ಕೇಂದ್ರಿತ, ಭಾಷಿಕ, ಪ್ರಾದೇಶಿಕ ಅಥವಾ ಮತ್ತಾವುದೇ ಅಸ್ಮಿತೆಗಳ ಹಂಗಿಲ್ಲದೆ, ಅಧಿಕಾರ ರಾಜಕಾರಣದ ಸೋಂಕಿಲ್ಲದೆ, ಚುನಾಯಿತ ಜನಪ್ರತಿನಿಧಿಗಳ ನಿರ್ಬಂಧಗಳಿಲ್ಲದೆ, ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು, ಆಶಯಗಳನ್ನು ಕಾಪಾಡುವ ಒಂದು ಸದುದ್ದೇಶದೊಂದಿಗೆ ರಾಷ್ಟ್ರಪತಿ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಹಾಗಾಗಿ ಹಲವಾರು ಸಂದರ್ಭಗಳಲ್ಲಿ ಕೇಂದ್ರ ಸಚಿವ ಸಂಪುಟದ ಸಲಹೆಯನ್ನೂ ಮೀರಿ ರಾಷ್ಟ್ರಪತಿಯವರು ಮಸೂದೆಗಳಿಗೆ ಅಂಕಿತ ಹಾಕದೆ ಇರುವ ಸಾಧ್ಯತೆಗಳಿರುತ್ತವೆ. ಸಾಂವಿಧಾನಿಕ ನೈತಿಕತೆಯನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಆಡಳಿತಾರೂಢ ಪಕ್ಷಗಳು, ತಮಗಿರುವ ಸ್ಪಷ್ಟ ಬಹುಮತವನ್ನೇ ಬಳಸಿಕೊಂಡು ತಪ್ಪು ನಿರ್ಧಾರಗಳನ್ನು ಕೈಗೊಂಡಾಗ, ಇಂತಹ ನಿರ್ಧಾರಗಳನ್ನು ಪುನರ್‌ ಪರಿಷ್ಕರಿಸಲು ಹಿಂದಿರುಗಿಸುವುದರ ಮೂಲಕ ರಾಷ್ಟ್ರಪತಿಯಾದವರು, ಸಂಸತ್ತಿನಲ್ಲಿ ಮತ್ತೊಮ್ಮೆ ಚರ್ಚೆಗೆ ಅವಕಾಶ ಕಲ್ಪಿಸಬಹುದು. ತನ್ಮೂಲಕ ಸರ್ಕಾರದ ತಪ್ಪು ನೀತಿಗಳು ಸರಿಹೋಗಬಹುದಾದ ಸಾಧ್ಯತೆಗಳನ್ನು ಸೃಷ್ಟಿಸಬಹುದು.

ಪ್ರಸ್ತುತ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆಗಳನ್ನೇ ನಡೆಸದೆ ಜನಸಾಮಾನ್ಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವಂತಹ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಗಳಲ್ಲಿ ರಾಷ್ಟ್ರಪತಿಯವರ ಅಧಿಕಾರ ವ್ಯಾಪ್ತಿಯೂ ಸೀಮಿತವಾಗಿಯೇ ಇರುತ್ತದೆ. ಈ ಪ್ರತಿಷ್ಠಿತ ಹುದ್ದೆಯ ಅಧಿಕಾರ ವ್ಯಾಪ್ತಿ ಮತ್ತು ಸಾಂವಿಧಾನಿಕ ಜವಾಬ್ದಾರಿಯನ್ನು ಅರಿತು, ಪ್ರಜಾಪ್ರಭುತ್ವವನ್ನು ಮುನ್ನಡೆಸುವ ನೈತಿಕತೆ ಮತ್ತು ಸಾಂವಿಧಾನಿಕ ಮೌಲ್ಯ ಆಡಳಿತಾರೂಡ ಪಕ್ಷಗಳಲ್ಲಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲೇ ರಾಷ್ಟ್ರಪತಿ ಹುದ್ದೆಗೆ ರಾಜಕೀಯೇತರ ವ್ಯಕ್ತಿಗಳ ಆಯ್ಕೆಯೇ ಸಮರ್ಪಕವಾದದ್ದು ಎಂದು ರಾಜಕೀಯ ವಿಶ್ಲೇಷಕರು, ತಜ್ಞರು ಅಭಿಪ್ರಾಯಪಡುತ್ತಾರೆ. ತಮ್ಮ ಸೀಮಿತಿ ಅಧಿಕಾರ ವ್ಯಾಪ್ತಿಯಲ್ಲೂ ಸಹ, ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ವಿವೇಚನಾಧಿಕಾರವನ್ನು ಬಳಸುವ ಸ್ವಾತಂತ್ರ್ಯವನ್ನು ಹೀಗೆ ಆಯ್ಕೆಯಾದವರು ಹೊಂದಿರಲು ಸಾಧ್ಯ. ಆದರೆ ಸ್ವತಂತ್ರ ಭಾರತ ಈ ಹಾದಿಯಲ್ಲಿ ನಡೆದು ಬಂದೇ ಇಲ್ಲ ಎನ್ನುವುದೂ ಗಮನಿಸಬೇಕಾದ ಸಂಗತಿ. ಹಾಗಾಗಿಯೇ ಸರ್ವಸಮ್ಮತಿಯಿಂದ, ಸರ್ವಾನುಮತದ ಮೂಲಕ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪರಂಪರೆಯೂ ನಮ್ಮಲ್ಲಿ ಬೆಳೆದುಬರಲು ಸಾಧ್ಯವಾಗಿಲ್ಲ.

ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಭಾರತದ ರಾಜಕೀಯ ವ್ಯವಸ್ಥೆ ಕೊಂಚ ಪ್ರಬುದ್ಧತೆಯನ್ನು ತೋರಬಹುದಿತ್ತು. ಆದರೆ ಅಧಿಕಾರ ರಾಜಕಾರಣದ ಲಾಲಸೆ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ವ್ಯವಸ್ಥೆಯ ವ್ಯಾವಹಾರಿಕತೆ ಇಡೀ ರಾಜಕೀಯ ವ್ಯವಸ್ಥೆಯನ್ನೇ ಆವರಿಸಿರುವಾಗ ಇದನ್ನು ನಿರೀಕ್ಷಿಸುವುದೂ ಕಷ್ಟವೇ. ಸ್ಪಷ್ಟ ಬಹುಮತ ಇರುವ ಕೆಂದ್ರ ಎನ್‌ಡಿಎ ಸರ್ಕಾರಕ್ಕೆ ತನ್ನ ಆಯ್ಕೆಯ ಅಭ್ಯರ್ಥಿ ರಾಷ್ಟ್ರಪತಿಯಾಗಿ ಚುನಾಯಿತವಾಗುವುದು ಖಚಿತವಾಗಿದ್ದ ಸಂದರ್ಭದಲ್ಲಿ, ಇತರ ಎಲ್ಲ ರಾಜಕೀಯ ಪಕ್ಷಗಳೊಡನೆ ಮುಕ್ತ ಸಂವಾದ ನಡೆಸುವ ಮೂಲಕ ರಾಜಕೀಯ ಛಾಯೆಯಿಂದ ಮುಕ್ತವಾದ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ, ಸರ್ವಾನುಮತದಿಂದ ಆಯ್ಕೆ ಮಾಡುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಅಥವಾ ಇತರ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಅಸ್ಮಿತೆಗಳನ್ನು ಬದಿಗಿಟ್ಟು, ಪ್ಪ್ರಪ್ರಥಮ ಬುಡಕಟ್ಟು ಸಮುದಾಯದ ಪ್ರತಿನಿಧಿಯಾಗಿ, ದ್ರೌಪದಿ ಮುರ್ಮು ಅವರನ್ನೇ ಸರ್ವಾನುಮತದಿಂದ ಆಯ್ಕೆ ಮಾಡುವ ಪ್ರಯತ್ನವನ್ನಾದರೂ ಮಾಡಬಹುದಿತ್ತು.

 

ಈ ಹಿಂದೆ ಇಷ್ಟೇ ಬಹುಮತ ಹೊಂದಿದ್ದ ಕಾಂಗ್ರೆಸ್‌ ಆಡಳಿತದಲ್ಲೂ ಇಂತಹ ಪ್ರಯತ್ನಗಳು ನಡೆದಿಲ್ಲ ಎನ್ನುವುದು ಕಟು ವಾಸ್ತವ. ಬಹುಶಃ ಭಾರತದ ಪ್ರಜಾತಂತ್ರ ವ್ಯವಸ್ಥೆ ಈ ಪ್ರಬುದ್ಧತೆಯನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ ಎನಿಸುತ್ತದೆ. ಈಗ ಚುನಾಯಿತರಾಗಿರುವ ದ್ರೌಪದಿ ಮುರ್ಮು ಅವರನ್ನು ಆದಿವಾಸಿಗಳ, ಬುಡಕಟ್ಟು ಸಮುದಾಯಗಳ ಪ್ರತಿನಿಧಿಯಾಗಿ ನೋಡಲು ಸಾಧ್ಯವೇ ಅಥವಾ ಆಡಳಿತಾರೂಢ ಸರ್ಕಾರದ ಪರವಾಗಿಯೇ ತಮ್ಮ ಕಾರ್ಯನಿರ್ವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ. ಕೆ ಆರ್‌ ನಾರಾಯಣನ್‌ ದೇಶದ ಪ್ರಥಮ ದಲಿತ ರಾಷ್ಟ್ರಪತಿಯಾಗಿ ಆಯ್ಕೆಯಾದಾಗಲೂ ಈ ಸಾಮುದಾಯಿಕ ಅಸ್ಮಿತೆಯ ಪ್ರಶ್ನೆ ಎದುರಾಗಿತ್ತು. ರಾಮನಾಥ್‌ ಕೋವಿಂದ್‌ ಎರಡನೆ ದಲಿತ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ವೇಳೆಗೆ ಸಾಮುದಾಯಿಕ ಭ್ರಮೆಯೆಲ್ಲವೂ ಕಳಚಿಬಿದ್ದಿತ್ತು. ಏಕೆಂದರೆ ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಹುದ್ದೆ, ಶಾಸಕಾಂಗದ ಮೇಲೆ ಸೀಮಿತ ಅಂಕುಶ ಸಾಧಿಸುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಬಹುಮತ ಇರುವ ಸರ್ಕಾರಗಳು ತಮ್ಮದೇ ಆದ ಆಡಳಿತ ನೀತಿಗಳನ್ನು ಜಾರಿಗೊಳಿಸಲು ಒಂದು ಸುಗಮ ಮಾರ್ಗವನ್ನು ತಮ್ಮದೇ ಆಯ್ಕೆಯ ರಾಷ್ಟ್ರಪತಿಗಳ ಕಚೇರಿಯ ಮೂಲಕ ಕಂಡುಕೊಳ್ಳುವ ಒಂದು ಪರಂಪರೆಯನ್ನು ಭಾರತದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಬಹುಪಾಲು ಒಪ್ಪಿಕೊಂಡೇ ನಡೆಯುತ್ತಿದೆ.

ಹಾಗಾಗಿಯೇ ಆಡಳಿತಾರೂಢ ಪಕ್ಷಗಳು ತಮ್ಮದೇ ಆದ ಅಭ್ಯರ್ಥಿಯನ್ನು, ಪಕ್ಷ ರಾಜಕಾರಣದ ಒಳಗಿನಿಂದಲೇ ರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಇಚ್ಚಿಸುತ್ತವೆ. ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್‌ ಕಲಾಂ ಮಾತ್ರವೇ ಇದಕ್ಕೆ ಅಪವಾದದಂತಿದ್ದರು. ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರು ಶಾಸಕಾಂಗದ ಆಡಳಿತ ನೀತಿಗಳ ಮೇಲೆ, ಕಾಯ್ದೆ ಕಾನೂನುಗಳ ಮೇಲೆ ಒತ್ತಡ ಹೇರಲೂ ಆಗುವುದಿಲ್ಲ ಅಥವಾ ನಿಯಂತ್ರಿಸಲೂ ಆಗುವುದಿಲ್ಲ. ಹೆಚ್ಚೆಂದರೆ ಕೆಲವು ಕಾನೂನುಗಳಿಗೆ ಅಂಕಿತ ಹಾಕಲೊಪ್ಪದೆ, ತಿದ್ದುಪಡಿ ಮಾಡಲು ಪ್ರೇರೇಪಿಸಬಹುದು. ಇಂತಹ ಸನ್ನಿವೇಶದಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಯ್ಕೆಯೊಂದಿಗೆ, ಆದಿವಾಸಿಗಳ ಬದುಕಿಗೇ ಮಾರಕವಾಗುತ್ತಿರುವ ಅನೇಕ ಕಾರ್ಪೋರೇಟ್‌ ಮಾರುಕಟ್ಟೆ ಆಡಳಿತ/ಆರ್ಥಿಕ ನೀತಿಗಳಿಗೆ ಅಂಕುಶ ಬೀಳುತ್ತದೆ ಎಂದು ನಿರೀಕ್ಷಿಸಲೂ ಆಗುವುದಿಲ್ಲ. ಭಾರತದ ಪ್ರಸ್ತುತ ರಾಜಕೀಯ ವ್ಯವಸ್ಥೆ ಇದನ್ನು ನಿರೀಕ್ಷಿಸುವುದೂ ಇಲ್ಲ.

ಆದಾಗ್ಯೂ, ಸ್ವತಂತ್ರ ಭಾರತದ 75ನೆಯ ವರ್ಷದಲ್ಲಾದರೂ, ರಾಷ್ಟ್ರಪತಿ ಹುದ್ದೆಗೆ ರಾಜಕೀಯ ಸ್ಪರ್ಶ ಇಲ್ಲದ, ಪಕ್ಷ ರಾಜಕಾರಣದ ಹಂಗಿಲ್ಲದ, ತಟಸ್ಥ ನಿಲುವಿನ ರಾಜಕೀಯೇತರ ವ್ಯಕ್ತಿಯನ್ನು, ಸರ್ವಾನುಮತದಿಂದ  ಆಯ್ಕೆ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಬಹುದಿತ್ತು. ಒಂದು ಹೊಸ ಪರಂಪರೆಗೆ ನಾಂದಿ ಹಾಡಬಹುದಿತ್ತು. ಪ್ರಜಾಪ್ರಭುತ್ವವನ್ನು ಬಯಸುವ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ಕುರಿತ ಚಿಂತನ ಮಂಥನ ಇರಬೇಕಾಗುತ್ತದೆ. ನೂತನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ತಮ್ಮ ಸೇವಾವಧಿಯಲ್ಲಿ ನಿಷ್ಪಕ್ಷಪಾತತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಭಾರತದ ಜನಸಾಮಾನ್ಯರ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುತ್ತಾರೆ ಎಂಬ ಅಪೇಕ್ಷೆಯೊಂದಿಗೆ ಸ್ವಾಗತಿಸೋಣ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ದೇವನೂರ ಮಹಾದೇವ ಅವರ  ಆರ್‌ಎಸ್‌ಎಸ್ ಆಳ-ಅಗಲ ಪುಸ್ತಕ ಕುರಿತು ಯೋಗೇಂದ್ರ ಯಾದವ ಅವರ ಟಿಪ್ಪಣಿ

Next Post

KSRTC ಆಸ್ಪತ್ರೆಯನ್ನು ಖಾಸಗಿ ಕಂಪೆನಿಗೆ ಕೊಡಲು ಮುಂದಾದರೆ ಸಂಸದ ತೇಜಸ್ವಿ ಸೂರ್ಯ.!? : ಸಾರಿಗೆ ನೌಕರರ ಆರೋಪ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
KSRTC ಆಸ್ಪತ್ರೆಯನ್ನು ಖಾಸಗಿ ಕಂಪೆನಿಗೆ ಕೊಡಲು ಮುಂದಾದರೆ ಸಂಸದ ತೇಜಸ್ವಿ ಸೂರ್ಯ.!? : ಸಾರಿಗೆ ನೌಕರರ ಆರೋಪ

KSRTC ಆಸ್ಪತ್ರೆಯನ್ನು ಖಾಸಗಿ ಕಂಪೆನಿಗೆ ಕೊಡಲು ಮುಂದಾದರೆ ಸಂಸದ ತೇಜಸ್ವಿ ಸೂರ್ಯ.!? : ಸಾರಿಗೆ ನೌಕರರ ಆರೋಪ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada