ತುಪ್ಪವನ್ನ ಹೆಚ್ಚು ಜನ ಇಷ್ಟಪಟ್ಟು ಸೇವಿಸುತ್ತಾರೆ. ತುಪ್ಪವನ್ನ ಬಳಸಿ ಮಾಡಿದ ಅಡುಗೆಯಲ್ಲಿ ರುಚಿ ಜಾಸ್ತಿ ಇರುತ್ತದೆ ಇನ್ನೂ ಕೆಲವರಂತೂ ಪ್ರತಿಯೊಂದು ಪದಾರ್ಥಕ್ಕೂ ಕೂಡ ತುಪ್ಪವನ್ನು ಬಳಸಿ ಸೇವಿಸ್ತಾರೆ.. ಆದ್ರೆ ಡಯೆಟ್ ಮಾಡುವರು ತುಪ್ಪವನ್ನು ಬೇಡ ಅಂತ ಹೇಳ್ತಾರೆ.ಯಾಕೆಂದರೆ ದಪ್ಪ ಆಗುತ್ತಿವೆ ಅನ್ನುವ ಒಂದು ಕಾರಣದಿಂದ.. ಅದರಲ್ಲೂ ಹಿರಿಯರು ಹೇಳುವ ಪ್ರಕಾರ ದಿನಕ್ಕೆ ಒಂದು ಚಮಚದಷ್ಟು ತುಪ್ಪವನ್ನ ಸೇವಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸಬಹುದು.

ತುಪ್ಪದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಆಂಟಿಆಕ್ಸಿಡೆಂಟ್ಸ್ ಹಾಗೂ ಹೆಲ್ದಿ ಫ್ಯಾಟ್ ಹೆಚ್ಚಿದೆ. ಹಾಗೂ ಪ್ರತಿದಿನ ತುಪ್ಪವನ್ನು ಸೇವಿಸುವುದರಿಂದ ದೇಹಕ್ಕೆ ಮಿನರಲ್ಸ್ ಹಾಗೂ ನ್ಯೂಟ್ರಿಷನ್ ಅಂಶ ಒದಗುತ್ತದೆ. ಹಾಗಿದ್ರೆ ಪ್ರತಿದಿನ ತುಪ್ಪ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಅನ್ನುವುದರ ಮಾಹಿತಿ ಇಲ್ಲಿದೆ.

ಹೃದಯದ ಆರೋಗ್ಯಕ್ಕೆ ಉತ್ತಮ
ಪ್ರತಿದಿನ ಒಂದು ಸ್ಪೂನ್ ಅಷ್ಟು ತುಪ್ಪವನ್ನು ಸೇವಿಸುವುದರಿಂದ ಇದರಲ್ಲಿ ಹೆಲ್ದಿ ಫ್ಯಾಟಿ ಆಸಿಡ್ ಇರುತ್ತದೆ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮುಖ್ಯವಾಗಿ ರಕ್ತನಾಳ ಗಳಿಕೆ ತುಂಬಾನೇ ಒಳ್ಳೆಯದು. ನಿಮ್ಮ ಬ್ಯಾಲೆನ್ಸ್ ಡಯಟ್ ನಲ್ಲಿ ತುಪ್ಪವನ್ನ ಸೇವಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ಶ್ರಮನ ಮಾಡುವುದಕ್ಕೆ ತುಂಬಾನೇ ಸಹಕಾರಿ.

ಚರ್ಮಕ್ಕೆ ಒಳ್ಳೆಯದು
ಪ್ರತಿದಿನ ತುಪ್ಪವನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ, ಹೊಳೆಯುವ ತ್ವಚೆ ನಿಮ್ಮದಾಗುತ್ತದೆ, ಹಾಗೂ ಮುಖ್ಯವಾಗಿ ಬಿದ್ದ ಗಾಯಗಳನ್ನ ಗುಣಪಡಿಸುವುದಕ್ಕೆ ತುಂಬಾನೇ ಸಹಾಯಕಾರಿ. ಹಾಗೂ ಏಜಿಂಗ್ ಪ್ರಾಬ್ಲಮ್ ಅನ್ನ ನಿವಾರಿಸುತ್ತದೆ.

ಜೀರ್ಣಾಂಗಕ್ಕೆ ಉತ್ತಮ
ಡೈರಿ ಉತ್ಪನ್ನಗಳಲ್ಲಿ ಬ್ಯೂಟರೇಟ್ ಅಂಶ ಹೆಚ್ಚಿರುತ್ತದೆ. ಇದು ನಮ್ಮ ದೇಹದ ಸೆಲ್ಸ್ ಹೆಚ್ಚಿಸುತ್ತದೆ ಹಾಗೂ ಮುಖ್ಯವಾಗಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ಮುಖ್ಯವಾಗಿ ತುಪ್ಪದಲ್ಲಿ 1%ಅಷ್ಟು ಬೂಟಿರೇಟ್ ಇರುತ್ತದೆ..ಹಾಗೂ ಹೊಟ್ಟೆಯಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಹಾಕುತ್ತದೆ..










