ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಇದೇ ಮಾರ್ಚ್ 21ರಂದು (march 21st) ಚೆನ್ನೈ ಗೆ (Chennai) ತೆರಳಲಿರುವ ಕುಮಾರಸ್ವಾಮಿ (Kumaraswamy) ಇಂದು ಸುದ್ದಿಘೋಷ್ಠಿಯಲ್ಲಿ ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಹಳ ಹಿಂದೆಯೇ ಮೈತ್ರಿ (Alliance) ಘೋಷಣೆಯಾದ್ರೂ ಇದುವರೆಗೂ ಕೂಡ ಬಿಜೆಪಿ ಕೇಂದ್ರ ನಾಯಕರು (BJP central) ಕ್ಷೇತ್ರ ಹಂಚಿಕೆಯ ಬಗ್ಗೆ ಸ್ಪಷ್ಟತೆ ನೀಡಿಲ್ಲ ಅನ್ನೋದು ಜೆಡಿಎಸ್ (Jds) ಅಸಮಾಧಾನಕ್ಕೆ ಕಾರಣವಾಗಿದೆ.

ಈಗಾಗಲೇ ಚುನಾವಣೆಯ ದಿನಾಂಕ ಕೂಡ ಘೋಷಣೆಯಾಗಿದ್ದು ರಾಜ್ಯದಲ್ಲಿ ಮಾತ್ರ ಇನ್ನು ಬಿಜೆಪಿ(bjp) ಮತ್ತು ಜೆಡಿಎಸ್ (jds) ನಡುವೆ ಕ್ಷೇತ್ರ ಹಂಚಿಕೆ ಗೊಂದಲ ಬಗೆಹರಿದಿಲ್ಲ. ತಾವು ಕೇವಲ 3 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದೇವೆ. ಆದ್ರೆ ಆ ಬಗ್ಗೆಯೂ ಕೂಡ ಬಿಜೆಪಿ (bjp) ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹಾಸನ ಮತ್ತು ಮಂಡ್ಯ (Hassan and Mandya) ಈಗಾಗಲೇ ಜೆಡಿಎಸ್ (jds) ಪಾಲಾಗಿದ್ದು , ಕೋಲಾರ(Kolar) ಕ್ಷೇತ್ರಕ್ಕೂ ಕೂಡ ಜೆಡಿಎಸ್ ಡಿಮ್ಯಾಂಡ್ (demand) ಮಾಡಿತ್ತು. ಆದ್ರೆ ಆ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಅನ್ನೋದು ಕುಮಾರಸ್ವಾಮಿ(Kumaraswamy) ಅಸಮಾಧಾನಕ್ಕೆ ಕಾರಣ.

ಕೇವಲ ಎರಡು ಕ್ಷೇತ್ರಗಳಾಗಿದ್ರೆ ನಮಗೆ ಮೈತ್ರಿಯ (alliance) ಅವಶ್ಯಕತೆಯೇ ಇರಲಿಲ್ಲ. ಹೇಗಿದ್ದರೂ ಹಾಸನ ಮತ್ತು ಮಂಡ್ಯದಲ್ಲಿ ನಾವೇ ಗೆಲ್ಲೋದು. ಹೀಗಾಗಿ ನಾವು ಹೆಚ್ಚಿಗೆ ಕ್ಷೇತ್ರವನ್ನು ಡಿಮ್ಯಾಂಡ್ ಮಾಡಿಲ್ಲ. ಕೇಳಿರುವ ೩ ಕ್ಷೇತ್ರವನ್ನು ಆದಷ್ಟು ಬೇಗ ಜೆಡಿಎಸ್ ಗೆ (Jds) ಘೋಷಿಸಬೇಕು ಎಂದು ಕುಮಾರಸ್ವಾಮಿ (Kumaraswamy) ಪರೋಕ್ಷವಾಗಿ ಆಗ್ರಹಿಸಿದ್ದಾರೆ. ಈ ಮೂಲಕ ಮೈತ್ರಿಯಿಂದ ನಮಗಿಂತ ಹೆಚ್ಚು ಬಿಜೆಪಿಗೆ (BJP) ಲಾಭವಿದ್ದು , ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮೈತ್ರಿ ಪಾಲನೆ ಮಾಡೋದು ಸೂಕ್ತ ಎಂಬ ಸಂದೇಶವನ್ನ ಹೆಚ್.ಡಿ.ಕೆ. (HDK) ರವಾನಿಸೋ ಪ್ರಯತ್ನ ಮಾಡಿದ್ದಾರೆ.