ದೇವಸ್ಥಾನದ ಮುಂದೆ ಮಹಿಳೆಯರು ಭಗವದ್ಗೀತೆ ಕಥನ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದೆ ಪೊಲೀಸ್ ಅಧಿಕಾರಿ ಅಂಡರ್ ವೇರ್ ನಲ್ಲಿ ಕುಳಿತಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಸ್ಪಿ ಕ್ರಮ ಕೈಗೊಂಡಿದ್ದಾರೆ. ಉನ್ನಾವೋದ ಅಚಲಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲುಹಗಡ ಗ್ರಾಮದಲ್ಲಿ ಚಂದ್ರಿಕಾ ಮಾತೆಯ ದೇವಾಲಯದ ಆವರಣದಲ್ಲಿ ಪೊಲೀಸ್ ಠಾಣೆ ಇದೆ. ಈ ದೇವಸ್ಥಾನದಲ್ಲಿ ಭಗವದ್ಗೀತೆ ಕಥನ ನಡೆಯುತ್ತಿತ್ತು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಹೊರಠಾಣೆ ಪ್ರಭಾರಿ ರಾಮ್ನಿವಾಸ್ ಯಾದವ್, ಕೇವಲ ಒಳ ಉಡುಪು ಧರಿಸಿ, ತನ್ನ ಕೋಣೆಯ ಹೊರಗಿನ ವರಾಂಡಾದಲ್ಲಿ ಖುರ್ಚಿಯ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದರು.
ಈ ದೃಶ್ಯ ವೈರಲ್ ಆಗಿತ್ತು. ಅಲ್ಲಿದ್ದವರು ಕೂಡಲೇ ಪಂಚೆ ಸುತ್ತಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಆತ ಯಾರ ಮಾತೂ ಕೇಳಿಲ್ಲ. ಹೀಗಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಪಿ ಸಿದ್ಧಾರ್ಥ್ ಶಂಕರ್ ಮೀನಾ ಅವರು, ಕ್ರಮ ಕೈಗೊಂಡಿದ್ದಾರೆ.