• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿಮ್ಮ ಆಧಾರ್ ಸುರಕ್ಷತೆಗೆ ಹೊಸ ಆ್ಯಪ್! ಒಂದೇ ಟ್ಯಾಪ್‌ನಲ್ಲಿ ಬಯೋಮೆಟ್ರಿಕ್ ಲಾಕ್

ಪ್ರತಿಧ್ವನಿ by ಪ್ರತಿಧ್ವನಿ
October 21, 2026
in Top Story, ಕರ್ನಾಟಕ
0
A new app for your Aadhaar security! Lock your biometrics with a single tap.
Share on WhatsAppShare on FacebookShare on Telegram
ADVERTISEMENT

ನವದೆಹಲಿ : ದೇಶದಲ್ಲಿ ದಿನೇದಿನೆ ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಗುರುತಿನ ಕಳ್ಳತನದಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)  ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ ನೂತನ ಆಧಾರ್ ಆ್ಯಪ್ (Aadhaar App) ಅನ್ನು ಸಾರ್ವಜನಿಕರ ಬಳಕೆಗೆ ತಂದಿದೆ.

ಈ ಹಿಂದೆ ಬಳಕೆಯಲ್ಲಿದ್ದ ‘ಎಂ-ಆಧಾರ್’ ಆ್ಯಪ್ ಬದಲಿಗೆ ಹೆಚ್ಚು ಸುರಕ್ಷಿತವಾದ ನೂತನ ಆವೃತ್ತಿಯನ್ನು ಪರಿಚಯಿಸಲಾಗಿದ್ದು, ನಾಗರಿಕರು ತಮ್ಮ ಬೆರಳ ತುದಿಯಲ್ಲೇ ಆಧಾರ್ ಕಾರ್ಡ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ. ಈ ಹಿಂದೆ ಆಧಾರ್ ಸೇವಾ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಡಿಸಬೇಕಾಗಿದ್ದ ಪ್ರಮುಖ ಕೆಲಸಗಳನ್ನು ಇನ್ಮುಂದೆ ಮನೆಯಲ್ಲೇ ಕುಳಿತು ಸುಲಭವಾಗಿ ಪೂರ್ಣಗೊಳಿಸಬಹುದು.

ಒಂದೇ ಟ್ಯಾಪ್‌ನಲ್ಲಿ ಬಯೋಮೆಟ್ರಿಕ್ ಲಾಕ್ ಹಾಗೂ ಅನ್‌ಲಾಕ್ ಸೌಲಭ್ಯ

ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಹೊಸ ಆ್ಯಪ್ ಇನ್‌ಸ್ಟಾಲ್ ಮಾಡಿ, ಆಧಾರ್ ಸಂಖ್ಯೆ ನಮೂದಿಸಿ ಲಾಗಿನ್ ಆಗಬೇಕು. ಆ್ಯಪ್‌ನ ಕೆಳಭಾಗದಲ್ಲಿ ಕಾಣುವ ‘ಸರ್ವಿಸಸ್’ ಆಯ್ಕೆಯನ್ನು ಒತ್ತಿದಾಗ ಬಯೋಮೆಟ್ರಿಕ್ ಲಾಕ್ ಮಾಡುವ ಸೌಲಭ್ಯ ದೊರೆಯುತ್ತದೆ. ಈ ಆಯ್ಕೆಯ ಮೇಲೆ ಒಮ್ಮೆ ಟ್ಯಾಪ್ ಮಾಡುವ ಮೂಲಕ ಬೆರಳಚ್ಚು ಹಾಗೂ ಕಣ್ಣಿನ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ತಕ್ಷಣವೇ ಲಾಕ್ ಮಾಡಬಹುದು. ಅಗತ್ಯ ಬಿದ್ದಾಗ ಇದೇ ವಿಧಾನದ ಮೂಲಕ ಅನ್‌ಲಾಕ್ ಮಾಡಿಕೊಳ್ಳುವ ಅವಕಾಶವೂ ಇದರಲ್ಲಿದೆ. ಇದರಿಂದಾಗಿ ನಿಮ್ಮ ಅನುಮತಿಯಿಲ್ಲದೆ ಯಾರೂ ಬಯೋಮೆಟ್ರಿಕ್ ದೃಢೀಕರಣವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.

ಸಿಮ್ ಬೈಂಡಿಂಗ್ ಭದ್ರತೆ ಮತ್ತು ಕುಟುಂಬದ ಸದಸ್ಯರ ಪ್ರೊಫೈಲ್ ಸೇರ್ಪಡೆ

ಹೊಸ ಆ್ಯಪ್‌ನಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ‘ಸಿಮ್ ಬೈಂಡಿಂಗ್’ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಂದರೆ, ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಸಿಮ್ ಕಾರ್ಡ್ ಚಾಲ್ತಿಯಲ್ಲಿರುವ ಫೋನ್‌ನಿಂದ ಮಾತ್ರ ಈ ಆ್ಯಪ್‌ಗೆ ಲಾಗಿನ್ ಆಗಲು ಸಾಧ್ಯವಾಗಲಿದ್ದು, ಬೇರೆಯವರು ಅಕ್ರಮವಾಗಿ ಪ್ರವೇಶಿಸುವುದನ್ನು ಇದು ಸಂಪೂರ್ಣವಾಗಿ ತಡೆಯುತ್ತದೆ. ಇದರ ಜತೆಗೆ, ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮುಖ್ಯ ಬಳಕೆದಾರರ ಜತೆಗೆ ಕುಟುಂಬದ ಇತರ ಐದು ಸದಸ್ಯರ ಆಧಾರ್ ಪ್ರೊಫೈಲ್‌ಗಳನ್ನು ಇದೇ ಆ್ಯಪ್‌ನಲ್ಲಿ ಸೇರಿಸಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಮನೆಯಲ್ಲೇ ಕುಳಿತು ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಅಪ್‌ಡೇಟ್

ಸಾಮಾನ್ಯವಾಗಿ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಿಸಲು ಅಥವಾ ಬದಲಾಯಿಸಲು ಜನಸಾಮಾನ್ಯರು ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಈ ಹೊಸ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಮೊಬೈಲ್ ಸಂಖ್ಯೆ ನವೀಕರಣ ಮತ್ತು ವಿಳಾಸ ಬದಲಾವಣೆಯನ್ನು ಅತ್ಯಂತ ಸರಳವಾಗಿ ಮಾಡಿಕೊಳ್ಳಬಹುದು. ಇದರೊಂದಿಗೆ ಕ್ಯೂಆರ್ ಕೋಡ್ ಆಧಾರಿತ ಪರಿಶೀಲನೆ, ಅಗತ್ಯ ವಿವರಗಳನ್ನು ಮಾತ್ರವೇ ಹಂಚಿಕೊಳ್ಳುವ ಆಯ್ಕೆ ಹಾಗೂ ಈವರೆಗೆ ನಡೆದಿರುವ ಆಧಾರ್ ದೃಢೀಕರಣದ ಇತಿಹಾಸವನ್ನು ಪರಿಶೀಲಿಸುವ ಹಲವು ಮಹತ್ವದ ಸೇವೆಗಳು ಇದರಲ್ಲಿ ಲಭ್ಯವಿವೆ.

ಸಾರ್ವಜನಿಕರ ಗಮನಕ್ಕೆ: ಗ್ರಾಮ ಪಂಚಾಯತಿ ‘ಬಾಪೂಜಿ ಸೇವಾ ಕೇಂದ್ರ’ಗಳಲ್ಲೇ ಸಿಗಲಿವೆ ಪ್ರಮುಖ ಪ್ರಮಾಣ ಪತ್ರಗಳು!

Tags: Aadhaar AppUIDAI. biometric
Previous Post

ಸಾರ್ವಜನಿಕರ ಗಮನಕ್ಕೆ: ಗ್ರಾಮ ಪಂಚಾಯತಿ ‘ಬಾಪೂಜಿ ಸೇವಾ ಕೇಂದ್ರ’ಗಳಲ್ಲೇ ಸಿಗಲಿವೆ ಪ್ರಮುಖ ಪ್ರಮಾಣ ಪತ್ರಗಳು!

Next Post

ಉದ್ಯೋಗಿಗಳಿಗೆ ಇಪಿಎಫ್‌ಒ ಸಿಹಿಸುದ್ದಿ: ಪಿಎಫ್, ಪಿಂಚಣಿ ಹಾಗೂ ₹7 ಲಕ್ಷ ವಿಮಾ ಸೌಲಭ್ಯ ಪಡೆಯಲು ಈ 4 ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

Related Posts

Good news for passengers: Vande Bharat sleeper train service between Bengaluru and Mumbai to begin soon
Top Story

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ

by ಪ್ರತಿಧ್ವನಿ
October 21, 2026
0

ಬೆಂಗಳೂರು : ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಸಂಚಾರಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ....

Read moreDetails

ಪರ್ಸನಲ್ ಲೋನ್ EMI ಮಿಸ್ ಮಾಡಿದ್ದೀರಾ..? ಒಂದೇ ಒಂದು ತಿಂಗಳು ತಪ್ಪಿದ್ರೂ ಬೀಳುತ್ತೆ ಭಾರಿ ದಂಡ!

October 21, 2026
Has money been deducted from your bank account without your knowledge? Follow these steps to get a full refund!

ನಿಮಗೇ ತಿಳಿಯದೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆಯೇ? ಈ ರೀತಿ ಮಾಡಿದರೆ ಸಿಗಲಿದೆ ಪೂರ್ಣ ರೀಫಂಡ್!

October 21, 2026
Mysuru Dasara: CM D.K. Shivakumar offers prayers to the Nandi Dhwaja

ಮೈಸೂರು ದಸರಾ : ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ ಶಿವಕುಮಾರ್

October 21, 2026
A New Look for Government Services: 'Sakala' Services to Become Even Faster and More Transparent!

ಸರ್ಕಾರಿ ಸೇವೆಗೆ ಹೊಸ ರೂಪ : ‘ಸಕಾಲ’ ಸೇವೆಗಳು ಇನ್ಮುಂದೆ ಮತ್ತಷ್ಟು ತ್ವರಿತ, ಪಾರದರ್ಶಕ!

October 21, 2026
Next Post
Good news from the EPFO ​​for employees: Complete these 4 tasks today to avail of PF, pension, and insurance benefits of ₹7 lakh

ಉದ್ಯೋಗಿಗಳಿಗೆ ಇಪಿಎಫ್‌ಒ ಸಿಹಿಸುದ್ದಿ: ಪಿಎಫ್, ಪಿಂಚಣಿ ಹಾಗೂ ₹7 ಲಕ್ಷ ವಿಮಾ ಸೌಲಭ್ಯ ಪಡೆಯಲು ಈ 4 ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada