ಫಿರೋಜಾಬಾದ್ : ರಾಮ ಪ್ರಾಣ ಪ್ರತಿಷ್ಠಾಪನೆ ದಿನ ಹುಟ್ಟಿದ ಮಗುವಿಗೆ ಉತ್ತರ ಪ್ರದೇಶದ (Uttarapradesh) ಫಿರೋಜಾಬಾದ್ ನ ಮುಸ್ಲಿಂ ಮಹಿಳೆಯೊಬ್ಬರು ರಾಮ್ ರಹೀಂ (Ram Rahim) ಎಂದು ಹೆಸರಿಡುವ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಫರ್ಝಾನಾ ಎಂಬವರು ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಎಂದು ಫಿರೋಜಾಬಾದ್ ಜಿಲ್ಲಾ ಮಹಿಳಾ ಆಸ್ಪತ್ರೆಯ ಉಸ್ತುವಾರಿ ಡಾ. ನವೀನ್ ಜೈನ್ ತಿಳಿಸಿದ್ದಾರೆ.
ಮಗುವಿನ ಅಜ್ಜಿ ಹಸ್ನಾ ಬಾನು ಮಗುವಿಗೆ ರಾಮ್ ರಹೀಂ ಎಂದು ನಾಮಕರಣ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಮುಸ್ಲಿಂ (Hindu Muslim) ಏಕತೆಯ ಸಂದೇಶ ಸಾರಲು ರಾಮ್ ರಹೀಂ ಎಂದು ಹೆಸರಿಟ್ಟಿದ್ದೇವೆ ಎಂದು ಮಗುವಿನ ಅಜ್ಜಿ ತಿಳಿಸಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಒಂದು ಎನ್ನುವ ರೀತಿ ಸಂದೇಶ ಸಾರಿದ್ದಾರೆ