ಹೌಸಿಂಗ್ ಸೊಸೈಟಿಯೊಂದರಲ್ಲಿ ಫ್ಲಾಟ್ನಿಂದ ಚಿನ್ನಾಭರಣಗಳನ್ನು ಕದಿಯುತ್ತಿದ್ದಾಗ 16 ವರ್ಷದ ಹುಡುಗನೊಬ್ಬ 9 ವರ್ಷದ ನೆರೆಯ ಬಾಲಕಿ ನೋಡಿಬಿಟ್ಟಳೆಂಬ ಕಾರಣಕ್ಕೆ ಆಕೆಯ ಕತ್ತು ಹಿಸುಕಿ ಆಕೆಯ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಮತ್ತು ಆರೋಪಿ ಕುಟುಂಬಗಳು ಸಿಗ್ನೇಚರ್ ಗ್ಲೋಬಲ್ ಸೋಲೆರಾ (Signature Global Solera), ಸೆಕ್ಟರ್ 107(Sector 107), ಗುರುಗ್ರಾಮ್ನ(Gurgram) ಎರಡು ಪ್ರತ್ಯೇಕ ಟವರ್ಗಳಲ್ಲಿ ನೆಲೆಸಿದ್ದು ಅವರು ಪರಸ್ಪರ ಸ್ನೇಹಿತರೇ ಆಗಿದ್ದರು ಎಂದು ಅವರು ಹೇಳಿದರು.
4ನೇ ತರಗತಿ ವಿದ್ಯಾರ್ಥಿನಿಯಾಗಿರುವ (4th Standard Girl) ಬಾಲಕಿಯ ತಾಯಿ ಆರೋಪಿಯ ಮನೆಯಲ್ಲಿದ್ದಾಗ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ, 10 ನೇ ತರಗತಿ ವಿದ್ಯಾರ್ಥಿ(Accused 10th Standard), ಆಗಿದ್ದು ಪೊಲೀಸರು ಬಂಧಿಸಿದ್ದಾರೆ, ಆರಂಭದಲ್ಲಿ ಆತ ಇಬ್ಬರು ಕಳ್ಳರು ಮನೆಗೆ ನುಗ್ಗಿ ಬಾಲಕಿಯನ್ನು ಕೊಂದಿದ್ದಾರೆ ಎಂದು ಹೇಳಲು ಪ್ರಯತ್ನಿಸಿದ ಆದರೆ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನು 20 ಸಾವಿರ ಸಾಲ ತೀರಿಸಲು ಚಿನ್ನಾಭರಣ ಕದಿಯುತ್ತಿದ್ದ ಎಂದು ಹೇಳಿದ್ದಾನೆ.
ಆಕೆಯನ್ನು ಕೊಲ್ಲಲು ತನಗೆ ಇಷ್ಟವಿರಲಿಲ್ಲ ಆದರೆ ಬಾಲಕಿ ಸುಮ್ಮನಿರಲು ನಿರಾಕರಿಸಿದ್ದರಿಂದ ತಾನು ಸಿಕ್ಕಿಬೀಳುವ ಭಯದಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೋಮವಾರ ಬೆಳಿಗ್ಗೆ ಸಂತ್ರಸ್ತೆಯ ತಂದೆ ಕಚೇರಿಗೆ ಹೋಗಿದ್ದರೆ, ತಾಯಿ ಮತ್ತು ಸಹೋದರ ಅದೇ ಸೊಸೈಟಿಯ ಮತ್ತೊಂದು ಟವರ್ನಲ್ಲಿರುವ ಆರೋಪಿಯ ಮನೆಗೆ ಹೋಗಿದ್ದರು. ಬಾಲಕಿಯ ತಾಯಿ ತನ್ನ ಮನೆಯಲ್ಲಿ ಇರುವುದನ್ನು ನೋಡಿದ ಆರೋಪಿ ತಾನು ಟ್ಯೂಷನ್ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಸಂತ್ರಸ್ತೆಯ ಮನೆಗೆ ಬಂದಿದ್ದಾನೆ. ಕರೆಗಂಟೆ ಬಾರಿಸಿದಾಗ ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಬಾಗಿಲು ತೆರೆದಳು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಅವನು ಸೋಫಾ ಮೇಲೆ ಕುಳಿತು ನೀರು ಕೇಳಿದ್ದಲ್ಲದೆ ಆಕೆಯ ಹೋಂ ವರ್ಕ್ ಗೂ ಸಹಾಯ ಮಾಡಿದ ಎಂದು ಹಿರಿಯ ತನಿಖಾಧಿಕಾರಿ ಹೇಳಿದರು.
ಆಕೆ ಶೌಚಾಲಯಕ್ಕೆ ಹೋದಾಗ, ಅವನು ಹಾಸಿಗೆಯ ಡ್ರಾಯರ್ನಿಂದ ಲಾಕರ್ನ ಕೀಗಳನ್ನು ತೆಗೆದು ಕೆಲವು ಆಭರಣಗಳನ್ನು ಕದ್ದಿದ್ದಾನೆ ಎಂದು ಐಒ ಹೇಳಿದರು. ಈ ವೇಳೆ ಬಾಲಕಿ ಶೌಚಾಲಯದಿಂದ ಹೊರಬಂದು ಆಭರಣಗಳನ್ನು ನೋಡಿ ವಿರೋಧ ನಡೆಸಿದ್ದಾಳೆ. ಹುಡುಗನು ಆಭರಣಗಳನ್ನು ಬಾಲ್ಕನಿಯಿಂದ ಹೊರಗೆ ಎಸೆದನು ಆದರೆ ಹುಡುಗಿ ವಿರೋಧ ಮುಂದುವರೆಸಿದಳು, ಆಗ ಅವನು ಅವಳನ್ನು ಹೊಡೆಯಲು ಪ್ರಾರಂಭಿಸಿದನು ಎಂದು ಅಧಿಕಾರಿ ಹೇಳಿದರು. ಆಗ ಬಾಲಕ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದಾದ ಬಳಿಕ ಮನೆಯ ದೇವಸ್ಥಾನದಿಂದ ಕರ್ಪೂರ ಬಳಸಿ ಆಕೆಯ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಸ್ವಲ್ಪ ಸಮಯದ ನಂತರ, ಹುಡುಗಿಯ ತಾಯಿ ಮನೆಗೆ ಹಿಂತಿರುಗಿದಾಗ ಕರೆಗಂಟೆ ಬಾರಿಸಿದರು ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ಫ್ಲಾಟ್ನಿಂದ ಹೊಗೆ ಬರುತ್ತಿರುವುದನ್ನು ನೋಡಿ ಅಕ್ಕ ಪಕ್ಕದ ನಿವಾಸಿಗಳನ್ನು ನೆರವಿಗಾಗಿ ಕರೆದಾಗ ಘಟನೆ ಬೆಳಕಿಗೆ ಬಂದಿದೆ.