
ಬೆಂಗಳೂರು: ರಾಜಧಾನಿಯ ಐಷಾರಾಮಿ ಮಾಲ್ ಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ.. ಸದ್ಯ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನ ಮೂರನೇ ಪ್ಲೋರ್ ನಿಂದ ಹಾರಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳಗ್ಗೆ11 ಗಂಟೆ ಸುಮಾರಿಗೆ ನಡೆದಿದೆ.

ಬೆಳಗ್ಗೆ ಮಾಲ್ ಗೆ ಬಂದಿದ್ದ 34 ವರ್ಷದ ಸಾಗರ್ ಎಂಬಾತನೇ ಮಾಲ್‌ನಲ್ಲಿ ಬಿದ್ದು ಮೃತಪಟ್ಟಿರುವ ವ್ಯಕ್ತಿ. ಸದ್ಯ ಸ್ಥಳಕ್ಕೆ KP ಅಗ್ರಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಾಲ್ ನಿಂದ ವ್ಯಕ್ತಿ ಬಿದ್ದು ಸಾವನ್ನಪ್ಪಿದ್ದರಿಂದ ಮಾಲ್ ಗೆ ಬಂದಿದ್ದ ಜನ ಆತಂಕಕ್ಕೆ ಒಳಗಾದರು. ಪೊಲೀಸರು ಸ್ಥಳಕ್ಕೆ ಬಂದಾಗ ಕೆಲಕಾಲ ಮಾಲ್ ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಪರಿಶೀಲನೆ ನಡೆಸಿದ್ದರು. ಸ್ಥಳಕ್ಕೆ ಸೋಕೊ ಸಿಬ್ಬಂದಿ ಕೂಡ ಭೇಟಿ ನೀಡಿ ಸಾಕ್ಷ್ಯಗಳನ್ನ ಸಂಗ್ರಹಿಸಿದರು.

ಸದ್ಯ ಮೃತ ಸಾಗರ್ ಜೇಬಿನಲ್ಲಿ 300 ರೂಪಾಯಿ ಪತ್ತೆಯಾಗಿದೆ. ಘಟನೆ ಬಗ್ಗೆ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆ ಯಲ್ಲಿ ಅಸಹಜ ಸಾವು ಎಂದು ಕೇಸ್ ದಾಖಲಾಗಿದ್ದು, ಪೊಲೀಸರು ಮೃತನ ಸಂಬಂಧಿಕರ ಪತ್ತೆ ಮಾಡಿ ತನಿಖೆ ಮುಂದುವರಿಸಿದ್ದಾರೆ. ತನಿಖೆ ಬಳಿಕವಷ್ಟೇ ಸಾಗರ್ ನದ್ದು ಆತ್ಮಹತ್ಯೆಯೋ, ಆಯತಪ್ಪಿ ಬಿದ್ದು ಆಕಸ್ಮಿಕವಾಗಿ ನಡೆದ ಸಾವೋ ಎಂದು ಗೊತ್ತಾಗಲಿದೆ.













