ರಾಯಚೂರಿನಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಭಾಷಣ ಮಾಡುವ ವೇಳೆ ವ್ಯಕ್ತಿಯೊಬ್ಬ ಮಾರಾಕಾಸ್ತ್ರ ಹಿಡಿದು ವೇದಿಕೆ ಮೇಲೆ ಪ್ರತ್ಯಕ್ಷನಾಗಿದ್ದಾನೆ.
ಈ ವೇಳೆ ಕೂಡಲೇ ಪೊಲೀಸರು ಆ ವ್ಯಕ್ತಿಯ ಬಂಧಿಸಿದ್ದಾರೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನ ಕೊಲೆ ಮಾಡುವುದಾಗಿ ಇತ್ತಿಚೀಗೆ ಆಡಿಯೋ ಮತ್ತು ವೀಡಿಯೋ ವೈರಲ್ ಆಗಿತ್ತು.ಈ ಹಿನ್ನಲೆ ಮಾರಾಕಾಸ್ತ್ರದೊಂದಿಗೆ ವ್ಯಕ್ತಿ ಪ್ರತ್ಯಕ್ಷವಾಗಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ವ್ಯಕ್ತಿಯನ್ನು ಶ್ರೀನಿವಾಸ ಪೂಜಾರಿ ಉಪ್ಪಾರ ( 47 ) ಎಂದು ಗುರುತಿಸಲಾಗಿದೆ.ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ, ಪ್ರಮೋದ್ ಮುತಲಿಕ್, ಸೇರಿದಂತೆ ಅನೇಕ ಹಿಂದೂ ಮುಖಂಡರು ಭಾಗಿಯಾಗಿದ್ದರು.

ಈತ ಕುಡಿದ ಹಮಲಿನಲ್ಲಿ ಮಚ್ಚು ಹಿಡಿದುಕೊಂಡು ವೇದಿಕೆ ಮೇಲೆ ಬಂದಿದ್ದಾಗಿ ಸದ್ಯ ಮಾಹಿತಿ ಲಭ್ಯವಾಗಿದೆ. ಸಾವಿರಾರು ಜನ, ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳಿದ್ದ ಸಭೆಯಲ್ಲಿ ಈತ ಮಾರಕಸ್ತ್ರ ತೆಗೆದುಕೊಂಡು ಬಂದಿದ್ದು ಏಕೆ ಎಂಬ ಚರ್ಚೆ ಕೂಡ ಜೋರಾಗಿದೆ.
ಸದ್ಯ ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವ್ಯಕ್ತಿಯನ್ನು ಕೂಡಲೇ ಬಂಧನ ಮಾಡಲಾಗಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.