ಕಾಶ್ಮೀರದ ಪಹಲ್ಲಾಮ್ ನಲ್ಲಿ (Pahalgam) ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ (terror attak) ನಡೆಸಿ 26 ಅಮಾಯಕರನ್ನು ಕೊಂದ ನಂತರ ಭಾರತ ಪಾಕಿಸ್ತಾನದ ವಿರುದ್ಧ ಅಕ್ಷರಶಃ ಕೊತ ಕೊತ ಕುದಿಯುತ್ತಿದೆ. ಹೀಗಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾವುದೇ ಸಮಯದಲ್ಲಿ ಸೇನಾ ಕಾರ್ಯಾಚರಣೆಗೆ ಭಾರತ ಮುಂದಾಗಬಹುದು.

ಆದ್ರೆ ಈ ಮಧ್ಯೆ ಪಾಕಿಸ್ತಾನದ (Pakistan) ವಿರುದ್ಧ ಭಾರತ (India) ಹಲವು ಕಠಿಣ ಕ್ರಮಗಳಿಗೆ ಮುಂದಾಗಿದೆ. ಈಗಾಗಲೇ ಮಾಜಿ ಕ್ರಿಕೆಟಿಗ ಅಫ್ರಿದಿ (Shahid afridi) ಸೇರಿದಂತೆ ಹಲವರ ಯೂಟ್ಯೂಬ್ ಚಾನೆಲ್ ಗಳನ್ನು ಭಾರತದಲ್ಲಿ ಪ್ರಸಾರವಾಗದಂತೆ ನಿರ್ಬಂಧಿಸಲಾಗಿತ್ತು. ಈಗ ಆ ಸಾಲಿಗೆ ಪಾಕ್ ಒರದನಿ ಶಹಬಾಜ್ ಷರೀಫ್ ಸೇರ್ಪಡೆಯಾಗಿದ್ದಾರೆ.
ಹೌದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಯೂಟ್ಯೂಬ್ ಚಾನಲ್ ಸ್ಥಗಿತಗೊಳಿಸಿ ಭಾರತ ಸರ್ಕಾರ ಆದೇಶಿಸಿದೆ. ಭಾರತದ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ , ಸುಳ್ಳು ಸುದ್ದಿ ಬಿತ್ತರಿಸಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದ ಷರೀಫ್ ಯೂಟ್ಯೂಬ್ ಚಾನೆಲ್ ಪ್ರಸಾರವನ್ನು ಕೂಡ ಭಾರತದಲ್ಲಿ ನಿರ್ಭಂಧಿಸಲಾಗಿದೆ.











