
ಅವರೆಲ್ಲ ಇನ್ನು ರಾಜಕೀಯದಲ್ಲಿ ಅಂಬೆಗಾಲು ಇಡಲು ಆರಂಭಿಸಿದ್ದ ಹುಡುಗರು.. ಜಿದ್ದಿಗೆ ಬಿದ್ದು ತಾವು ಅಂದುಕೊಂಡ ಕೆಲಸ ಮಾಡಿ ಮುಗಿಸುತ್ತಿದ್ದರು. ಹೀಗೆ ಜೊತೆಯಾಗಿದ್ದವರು ಸಣ್ಣ ರಾಜಕೀಯದಿಂದ ಬೇರೆ ಬೇರೆಯಾಗಿದ್ದರು.. ಬೇರೆಯಾದರೂ ಇವರ ನಡುವೆ ಇದ್ದ ಹಳೆ ವೈಷ್ಯಮದ್ಯದ ಜಿದ್ದಿಗೆ ಒರ್ವನ ಪ್ರಾಣ ಪಕ್ಷಿ ಹಾರಿಹೋಗಿದೆ. ದತ್ತ ಜಯಂತಿ ಮುಗಿಸಿ ತಣ್ಣಗಿದ ಚಿಕ್ಕಮಗಳೂರಿನ ಸಖರಾಯಪಟ್ಟಣ ಈ ಘಟನೆಯಿಂದ ಬೂದಿ ಮುಚ್ಚಿದ ಕೆಂಡವಾಗಿದೆ….
ಮೃತನ ಹೆಸರು ಗಣೇಶ್. ವಯಸ್ಸು 38. ತಾನಿದ್ದ ಊರಿನ ವ್ಯಾಪ್ತಿಯಲ್ಲಿ ಒಳ್ಳೆ ಹೆಸರು ಮಾಡಿದ್ದ. ಜಿದ್ದಿಗೆ ಬಿದ್ದು ಪೈಪೋಟಿ ನಡೆಸುವ ಕಾಂಗ್ರೆಸ್-ಬಿಜೆಪಿ ನಡುವೆ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದ. ಮಾತ್ರವಲ್ಲದೆ, ಪಂಚಾಯಿತಿ ಸದಸ್ಯ ಜೊತೆಗೆ ಒಕ್ಕಲಿಗರ ಸಂಘದ ನಿರ್ದೇಶಕ ಕೂಡ ಆಗಿದ್ದ. ಇನ್ನೇನು ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೂ ನಿಲ್ಬೇಕು ಅನ್ಕೊಂಡಿದ್ದ. ಆದರೆ ಗಣೇಶ್ ಗೌಡ ನಿರ್ಜನ ಪ್ರದೇಶದಲ್ಲಿ ಅನಾಥ ಹೆಣವಾಗಿ ಕಂಡ ಕನಸು ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಈತನನ್ನು ಬರ್ಬರವಾಗಿ ಹತ್ಯೆಗೈದ ಇಬ್ಬರು ಹಂತಕರು ಆಸ್ಪತ್ರೆಯಲ್ಲಿ ಅಡ್ಮೀಟ್ ಆಗಿ ಮೂವರು ಅಂದರ್ ಆಗಿದ್ದಾರೆ.

ಶುಕ್ರವಾರ ಗಣೇಶನನ್ನು ಸಂಜಯ್ ಗೌಡ ಅಂಡ್ ಟೀಂ ಸಖರಾಯಪಟ್ಟದ ಕೆಲವೇ ದೂರದಲ್ಲಿರುವ ಕಲ್ಮುರುಡೇಶ್ವರ ಮಠದ ಸಮಿಪ ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಹಂತಕ ಪಡೆಯ ಇಬ್ಬರು ಸ್ಪಾಟ್ ನಲ್ಲೆ ಖಾಕಿ ಕೈಯಲ್ಲಿ ಲಾಕ್ ಆಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಅಂತ ಸಖರಾಯಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ರಸ್ತೆ ನಡೆಸಿ ಆಕ್ರೋಶ ಹೊರ ಹಾಕಿದ್ರು. ಮಾತ್ರವಲ್ಲ ಕಾಂಗ್ರೇಸ್ಸಿನ ಹಿರಿಯ ನಾಯಕರು ಗಣೇಶ್ ಸಾವಿಗೆ ಸೂಕ್ತ ಕ್ರಮಕೈಗೊಳ್ಳಿ ಮುಂದೆ ಹೀಗೆ ಯಾರಿಗೂ ಆಗಬಾರದು ಅಂತ ಒತ್ತಾಯಿಸಿದ್ರು.
ಶುಕ್ರವಾರದಂದು ಸಂಜೆ 8.30ರ ಸುಮಾರಿಗೆ ಸಖರಾಯಪಟ್ಟಣದ ಬಾರ್ ವೊಂದರ ಬಳಿ ಫ್ಲೆಕ್ಸ್ ವಿಚಾರವಾಗಿ ಗಣೇಶ್ ಗೌಡ ಹಾಗು ಸಂಜಯ್ ಟೀಂ ನಡುವೆ ಕಿರಿಕ್ ಆಗಿದೆ. ಕೊಂಚದರಲ್ಲೆ ಕಿರಿಕ್ ತಣ್ಣಗಾಗಿ ಗಣೇಶ್ ಬಸ್ಸ್ ನಿಲ್ದಾಣಕ್ಕೆ ಬಂದಿದ್ದಾನೆ. ಇದಾದ ನಂತರ ಟ್ರ್ಯಾಕ್ಟರ್ ನಲ್ಲಿ ಪ್ಲೆಕ್ಸ್ ಏರಿಕೊಂಡು ಬಂದಿದ್ದ ಸಂಜಯ್ ಗೌಡ ಹಾಗು ಗಣೇಶ್ ನಡುವೆ ಬಸ್ಸ್ ನಿಲ್ದಾಣದಲ್ಲಿ ಕೈ ಕೈ ಮಿಲಾಯಿಸಿ ಬಟ್ಟೆ ಹರಿದುಕೊಳ್ಳುವ ಹಂತಕ್ಕೆ ಬಡಿದುಕೊಂಡಿದ್ದಾರೆ. ಇದನ್ನು ಗಮಿಸಿದ ಸ್ಥಳೀಯರು ಇಬ್ಬರನ್ನು ಬಿಡಿಸಿ ಕಳಿಸಿದ್ದಾರೆ. ಅಲ್ಲಿಂದ ತೆರಳಿದ ಗಣೇಶ್ ಗೆ ಸಂಜಯ್ ಗೌಡ ಪೋನ್ ಮಾಡಿ ತಾಕತ್ತ್ ಇದ್ರೆ ಬಾರೋ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಇನ್ನು ಸಂಜಯ್ ಪೋನ್ ಬರ್ತಾ ಇದ್ದಂತೆ ಕಲ್ಮುರಡೇಶ್ವರ ಮಠದ ಸಮೀಪ ಇದ್ದ ನಿರ್ಜನ ಪ್ರದೇಶಕ್ಕೆ ಗಣೇಶ್ ತೆರಳಿದ್ದ ಅಲ್ಲೇ ನೋಡಿ ಅದೇ ಮೂರನೇ ಬಾರಿ ಆದ ಕಿರಿಕ್ಕ್ ಕೊಲೆಯಲ್ಲಿ ಅಂತ್ಯಕಂಡಿದೆ.

ಕಲ್ಲು ಮತ್ತು ಮಾರಕಾಸ್ರ್ತಗಳಿಂದ ಗಣೇಶ್ ನನ್ನು ಹತ್ಯೆ ಮಾಡಿದ್ದಾರೆ. ಇನ್ನು ಇವರ ಕಿರಿಕ್ ಗಮನಿಸಿ ಸ್ಥಳೀಯರು ಪೊಲೀಸರಿಗೆ ಪೋನ್ ಮಾಡಿದ್ದಾರೆ. ಅವರ ಮಾಹಿತಿ ತಿಳಿದು ಪೊಲೀಸರು ಸ್ಪಾಟ್ ರೀಚ್ ಆಗುವಷ್ಟರಲ್ಲಿ ಗಣೇಶ್ ಗೌಡನ ಪ್ರಾಣ ಪಕ್ಷಿ ಹಾರಿಹೋಗಿದೆ. ಇನ್ನು ಪ್ರಕರಣ ಸಂಬಂಧ ಸಖರಾಯಪಟ್ಟಣ ಪೊಲೀಸರ ಜೊತೆಗೆ ವಿಶೇಷ ತಂಡ ರಚಿಸಿದ ಎಸ್ಪಿ ಒಟ್ಟು ಐವರು ಆರೋಪಿಗಳನ್ನ ಅಂದರ್ ಮಾಡಿ ಬಾಕಿ ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಇನ್ನು ಲಾಕ್ ಆದವರನ್ನು ಖಾಕಿ ತಮ್ಮ ಶೈಲಿಯಲ್ಲಿ ಬಾಯಿಬಿಡಿಸುತ್ತಿದ್ದು ಕೊಲೆಗೆ ನಿಖರ ಕಾರಣ ಹಚ್ಚಲು ಮುಂದಾಗಿದ್ದಾರೆ. ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದ ತರುಣ ಹಳೆ ವೈಷ್ಯಮಕ್ಕೆ ಬಲಿಯಾಗಿದ್ದು ಮನೆಗೆ ಆಧಾರವಾಗಿ ಯಜಮಾನನ್ನು ಕಳೆದುಕೊಂಡ ವೃದ್ದ ತಂದೆತಾಯಿ ಜೊತೆಗೆ ಪತ್ನಿ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ










