ಜಮ್ಶೆಡ್ಪುರದ ರಾಕೇಶ್ ಮಹಂತಿ ಎಂಬ 30 ವರ್ಷದ ಇಂಜಿನಿಯರಿಂಗ್ ಪದವೀಧರ ಸಮುದಾಯ ಕೃಷಿ ಆರಂಭಿಸಲು ತನ್ನ ಕೆಲಸವನ್ನು ತೊರೆದು 80 ಕ್ಕೂ ಹೆಚ್ಚು ರೈತರೊಂದಿಗೆ ಸೇರಿ ಕೃಷಿ ಆರಂಭಿಸಿ ಮೊದಲಿದ್ದ ತಮ್ಮ ಆದಾಯವನ್ನು ದ್ವಿಗುಣಗೊಳಿಸಿದ್ದಾರೆ.
ಸಮುದಾಯ ಕೃಷಿಯಲ್ಲಿ ನಂಬಿಕೆ ಇರಿಸಿರುವ ಮಹಂತಿಯ ಪ್ರಕಾರ ಯಾರೇ ಆಗಲಿ ಸಮಾಜದ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಬಯಸಿದರೆ ಮೊದಲು ಅವನು ಮಾದರಿ ವ್ಯಕ್ತಿಯಾಗಬೇಕು, ಒಂದು ಉದಾಹರಣೆಯನ್ನು ಸೃಷ್ಟಿಸಬೇಕು ನಂತರ ಜನರೇ ಅವನನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಮೊದಲಿಗೆ ಅವರು ಕೇವಲ ಐವರು ರೈತರ ಬೆಂಬಲದೊಂದಿಗೆ ಒಂದು ಮಾದರಿ-ಫಾರ್ಮ್ ಅನ್ನು ಸಿದ್ಧಪಡಿಸಿ ಕೆಲಸ ಪ್ರಾರಂಭಿಸಿದರು. ದಿನಗಳೆದಂತೆ ಜನರು ಈ ಪರಿಕಲ್ಪನೆಯನ್ನು ಸ್ವಯಂಚಾಲಿತವಾಗಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಈಗ 80 ಕ್ಕಿಂತಲೂ ಹೆಚ್ಚು ರೈತರು ಅವರೊಂದಿಗೆ ಕೃಷಿಯಲ್ಲಿ ಪಾಲ್ಗೊಳ್ಳುತ್ತಿದ್ದು ಅವರೂ ಸಹ ಅದರಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ.
2017 ರ ಆರಂಭದಲ್ಲಿ ಮಹಂತಿ ಅವರು ತನ್ನ ಸಾಮಾಜಿಕ ಉದ್ಯಮವಾದ ‘ಬ್ರೂಕ್ ಎನ್ ಬೀಸ್’ (Brook N Bees) ಅನ್ನು ಪ್ರಾರಂಭಿಸಿದ್ದರು. ಇದು ಪ್ರಾಥಮಿಕವಾಗಿ ಸಮುದಾಯ ಕೃಷಿಯ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತದೆ ಮತ್ತು ಸಾವಯವ ಬೆಳೆಗಳನ್ನು ಬೆಳೆಯಲು ಸ್ಥಳೀಯ ರೈತರಿಗೆ ಸಹಕಾರ ನೀಡುವ ಸಂಘಟನೆಯಾಗಿದೆ. ರಾಕೇಶ್ ಮತ್ತು ಇತರ ರೈತರು ಭೂಮಿ, ಸಂಪನ್ಮೂಲಗಳು, ಜ್ಞಾನ, ಸಲಕರಣೆಗಳು, ಕಾರ್ಮಿಕ ಮತ್ತು ಯಂತ್ರೋಪಕರಣಗಳನ್ನು ಪರಸ್ಪರ ಹಂಚಿಕೊಂಡು ಕೃಷಿ ಕಾರ್ಯ ಕೈಗೊಳ್ಳುತ್ತಾರೆ. ತಮ್ಮ ಸ್ವಂತ ಭೂಮಿಯನ್ನು ಹೊಂದಿರುವ ರೈತರು ಲಾಭವನ್ನು ಪಡೆದುಕೊಂಡರೆ ಭೂಮಿಲ್ಲದವರು ಪ್ರತಿ ತಿಂಗಳು 6000 ರೂಪಾಯಿ ಸಂಬಳ ಪಡೆಯುತ್ತಾರೆ. ಅದರ ಜೊತೆಗೆ ಈ ಪದ್ದತಿಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ ಅಥವಾ ಮಾರುಕಟ್ಟೆಗೆ ಸಾಗಿಸಲು ಹಣವನ್ನು ಖರ್ಚು ಮಾಡಬೇಕಿಲ್ಲ.
2012 ರಲ್ಲಿ ಬಿಐಟಿ ಬೆಂಗಳೂರಿನಿಂದ ಬಿ ಟೆಕ್ ಮುಗಿಸಿದ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನಲ್ಲಿ ಉದ್ಯೋಗ ಪಡೆದ ಮಹಂತಿ ಅವರಿಗೆ ಕಾಲಕ್ರಮೇಣ ಈ ಉದ್ಯೋಗ ತನಗೆ ತಕ್ಕುದಲ್ಲ ಮತ್ತು ತನ್ನ ಹಳ್ಳಿಯಲ್ಲಿ ತನ್ನ ಸ್ವಂತ ಜನರಿಗೆ ಗ್ರಾಮೀಣ ಅಭಿವೃದ್ಧಿಯ ಕ್ಷೇತ್ರದಲ್ಲಿ ಏನನ್ನಾದರೂ ಮಾಡಬೇಕು ಎಂದು ಅನಿಸಲು ಶುರುವಾಯಿತು.
ನಾಲ್ಕು ವರ್ಷಗಳ ನಂತರ ತಮ್ಮ ಕೆಲಸವನ್ನು ತೊರೆದ ಅವರು ಜಮ್ಶೆಡ್ಪುರದ ಎಕ್ಸ್ಎಲ್ಆರ್ಐನಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ಗೆ ಸೇರಿಕೊಂಡರು. ಕೃಷಿಯಲ್ಲಿ ಹೊಸತನಗಳನ್ನು ಪ್ರಯೋಗಿಸುವತ್ತ ಹೆಚ್ಚು ಒಲವು ಹೊಂದಿದ್ದರಿಂದ ಎಂಬಿಎ ಓದುತ್ತಿರುವಾಗ ಜಮ್ಶೆಡ್ಪುರದಲ್ಲಿನ ತಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಲೇ ಇದ್ದರು.
“ಎಂಬಿಎ ಓದುತ್ತಿರುವಾಗ, ನಾನು ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡೆ ಮತ್ತು ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಲು ಬಯಸಿದ್ದೆ. ಆದರೆ ಸಮಯ ಕಳೆದಂತೆ ನಿಭಾಯಿಸಲು ಕಷ್ಟಕರವಾದ ಹಲವಾರು ಸವಾಲುಗಳಿವೆ ಕೃಷಿಯಲ್ಲಿ ಎಂಬುದು ನನ್ನ ಗಮನಕ್ಕೆ ಬಂತು. ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನಾನು ಭಾರತದಾದ್ಯಂತ ಪ್ರಯಾಣಿಸಿದೆ ಮತ್ತು ರೈತರನ್ನು ಭೇಟಿಯಾಗಿ ಅವರ ಕೃಷಿ ವಿಧಾನ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ ” ಎಂದು ಮಹಂತಿ ಹೇಳುತ್ತಾರೆ. “ಅಂತಿಮವಾಗಿ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಬೇಕೆಂದು ನಾನು ತೀರ್ಮಾನಿಸಿದೆ ಮತ್ತು ‘ಪರಿಸರ ಸುಸ್ಥಿರ ಕೃಷಿ’ ಎಂಬ ಪರಿಕಲ್ಪನೆಯನ್ನು ಕಂಡುಕೊಂಡೆ. ಅದರ ಅಡಿಯಲ್ಲಿ ಸಮಸ್ಯೆಗಳನ್ನು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಎಂದು ಮೂರು ವಿಭಾಗಗಳಾಗಿ ವಿಭಜಿಸಿ ಪರಿಹಾರ ಕಂಡುಕೊಳ್ಳಲಾಯಿತು. ಈ ಪರಿಕಲ್ಪನೆಯ ಅಡಿಯಲ್ಲಿ, ಸ್ಥಳೀಯ ಸಮುದಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ವಿಷಯಗಳನ್ನು ಸಂದರ್ಭೋಚಿತವಾಗಿ ವಿನ್ಯಾಸಗೊಳಿಸಲಾಗಿದೆ ” ಎಂದು ಅವರು ಹೇಳುತ್ತಾರೆ.
ನಂತರ ತನ್ನ ಉತ್ಪನ್ನಗಳಿಗೆ ತನ್ನ ಸುತ್ತಮುತ್ತಲಿನಲ್ಲೇ ಮಾರುಕಟ್ಟೆಯ ಅಗತ್ಯವಿರುವುದನ್ನು ಅರಿತುಕೊಂಡ ಮಹಂತಿ ಅವರು ‘ಕೃಷಿ ಭಾಗವಹಿಸುವಿಕೆ ಯೋಜನೆ’ ಎಂಬ ಇನ್ನೊಂದು ಕಾರ್ಯಕ್ರಮ ಆರಂಭಿಸಿ ಇದರ ಅಡಿಯಲ್ಲಿ, ಸ್ಥಳೀಯ ಆಹಾರದ ಬಗ್ಗೆ ತಿಳಿದುಕೊಳ್ಳಲು ನಗರ ಪ್ರದೇಶದ ಜನರಿಗೆ ಕೃಷಿ ಕ್ಷೇತ್ರಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿದರು. “ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವಿನ ಅಂತರವನ್ನು ಕಡಿಮೆ ಮಾಡಿತು ಮತ್ತು ಇದರಿಂದ ಅವರು ಪರಸ್ಪರರ ಬಗ್ಗೆ ತಿಳಿದುಕೊಳುವಂತಾಯಿತು” ಎಂದು ಮಹಂತಿ ಹೇಳಿದ್ದಾರೆ.
ಈ ಮಧ್ಯೆ ‘ಫಾರ್ಮರ್ಸ್ ಹ್ಯಾಟ್’ ಅನ್ನು ಪ್ರಾರಂಭಿಸಿ, ಇದರ ಅಡಿಯಲ್ಲಿ ಹೋಸಿಂಗ್ ಸೊಸೈಟಿಗಳಲ್ಲಿ ಸ್ಟಾಲ್ಗಳನ್ನು ಸ್ಥಾಪಿಸಿ, ಅವರ ಸಾವಯವ ಉತ್ಪನ್ನಗಳನ್ನು ಗ್ರಾಹಕರಿಗೆ ಅವರ ಮನೆಬಾಗಿಲಿಗೆ ಲಭ್ಯವಾಗುವಂತೆ ಮಾಡಲಾಯಿತು.
ಕೃಷಿಯನ್ನು ಮಾಡುವುದರ ಜೊತೆಗೆ, ಹಣ್ಣಿನ ಸಸಿಗಳನ್ನು, ಮರ-ಅಲ್ಲದ ಅರಣ್ಯ ಉತ್ಪನ್ನಗಳನ್ನು, ಔಷಧೀಯ ಸಸ್ಯಗಳನ್ನು ದೀರ್ಘಕಾಲೀನ ಯೋಜನೆಯಾಗಿ ನೆಡುತ್ತಾರೆ, ಇದು ಭೂಮಿಯ ಪರಿಸರ ಪುನಃಸ್ಥಾಪನೆಗೆ ಸಹಾಯ ಮಾಡುತ್ತದೆ.
“ಇಲ್ಲಿಯವರೆಗೆ, ದೇಶಾದ್ಯಂತ ಸುಮಾರು 200 ರೈತರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಆದರೆ ಜೆಮ್ಶೆಡ್ಪುರದ ಪಟಮಡಾ ಬ್ಲಾಕ್ನಲ್ಲಿ ಸುಮಾರು 80 ರೈತರು ನನ್ನೊಂದಿಗೆ ಸೇರಿಕೊಂಡಿದ್ದಾರೆ. ಭಾರತದಾದ್ಯಂತ ರೈತರಿಗೆ ಅಗತ್ಯವಿದ್ದಾಗ ಸಲಹೆ ನೀಡುತ್ತೇನೆ” ಎಂದು ಮಹಂತಿ ಹೇಳುತ್ತಾರೆ. ನಾಲ್ಕು ವಿಧದ ಅಕ್ಕಿ, ಆಹಾರ ಬೆಳೆಗಳು, ತರಕಾರಿಗಳು, ರಾಗಿ ಮತ್ತು ಇತರ ಆಹಾರ ಧಾನ್ಯಗಳನ್ನು ಈ ರೈತರು ಬೆಳೆಯುತ್ತಾರೆ.
ಈ ಪ್ರದೇಶದಲ್ಲಿ ಅನೇಕರಿಗೆ ಸ್ಫೂರ್ತಿಯಾಗಿರುವ ಮಹಂತಿ ಅವರು ಸ್ಥಳೀಯ ರೈತರಿಗೆ ಒಂದು ರೀತಿಯಲ್ಲಿ ಮಾದರಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ. “ಒಬ್ಬ ವಿದ್ಯಾವಂತ ಕೃಷಿಕರಾಗಿ, ಅವರು ಇತರರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದಾರೆ ಏಕೆಂದರೆ ಅವರು ಈ ಪ್ರದೇಶದ ಇತರ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಅವರು ಹೈಟೆಕ್ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ ಮತ್ತು ತನ್ನ ಉತ್ಪನ್ನಗಳನ್ನು ತನ್ನದೇ ಆದ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ” ಎಂದು ಜಿಲ್ಲಾ ತೋಟಗಾರಿಕೆ ಅಧಿಕಾರಿ ಮಿಥಲೇಶ್ ಕುಮಾರ್ ಕಲಿಂದಿ ಹೇಳುತ್ತಾರೆ. “ಅವರನ್ನು ನೋಡುತ್ತಾ, ಜನರು ಹೆಚ್ಚಿನ ಮೌಲ್ಯದ ಬೆಳೆಗಳ ಕೃಷಿಯನ್ನು ಬೆಳೆಯಲು ಆರಂಭಿಸಿದ್ದಾರೆ ಮತ್ತು ಲಾಭವನ್ನು ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಮಹಂತಿ ಅವರು ಒಂದು ರೈತ ಶಾಲೆಯನ್ನು ನಡೆಸುತ್ತಿದ್ದಾರೆ, ಅಲ್ಲಿ ರೈತರಿಗೆ ಸಾವಯವ ಮತ್ತು ಆಧುನಿಕ ಕೃಷಿ ತಂತ್ರಗಳ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತದೆ. ಸಮಗ್ರ ಕೃಷಿಯಲ್ಲಿ ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ರೈತರನ್ನೂ ಅವರು ಅಲ್ಲಿಗೆ ಕಳುಹಿಸುತ್ತಾರೆ” ಎಂದು ಕಲಿಂದಿ ಹೇಳುತ್ತಾರೆ. ಈಗ ಸಮುದಾಯ ಕೃಷಿಯ ಭಾಗವಾಗಿರುವ ಈ ಹಿಂದೆ ಅರಣ್ಯ ಮೀಸಲನ್ನು ಅವಲಂಬಿಸಿದ್ದ ಸ್ಥಳೀಯ ರೈತ ಪವನ್ ಸಿಂಗ್ ಸರ್ದಾರ್, ಸ್ಥಿರ ಆದಾಯವು ಅವರ ಆರ್ಥಿಕ ಪರಿಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಿದೆ ಎಂದು ಹೇಳುತ್ತಾರೆ.