ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಮಾಲ್ದಾರೆ ವ್ಯಾಪ್ತಿಯಲ್ಲಿ ದಾಂದಲೆ ನಡೆಸುತ್ತಿದ್ದ ೩೨ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಚೆನ್ನಂಗಿ ಶಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿ ಮಾಲ್ದಾರೆ ಮಾಲ್ದಾರೆ ಅರಣ್ಯಕ್ಕೆ ಅಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ತಿತಿಮತಿ ವಲಯದ ಚೆನ್ನಾಂಗಿ ಶಾಖಾ ವ್ಯಾಪ್ತಿಯಲ್ಲಿನ ಕಾಫಿ ತೋಟದ ಒಳಗೆ ಬೀಡುಬಿಟ್ಟಿದ್ದ 32 ಕಾಡಾನೆಗಳ ಹಿಂಡನ್ನು ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಸುಮಾರು 8 ಕೀಲೋ ಮೀಟರ್ ದೂರದಲ್ಲಿರುವ ಮಾಲ್ದಾರೆ ಅರಣ್ಯಕ್ಕೆ ಓಡಿಸಾಲಾಯಿತು.
ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ ಮತ್ತು ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ ಇವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ ಟಿ ಚೆನ್ನಂಗಿ ಶಾಖೆ, ದೇವರಾಜ್ ಡಿ ಆರ್ ಎಫ್ ಓ ಇಟಿಎಫ್ ಗಸ್ತು ಅರಣ್ಯ ಪಾಲಕ ರಾಜೇಶ್ ಹಾಗೂ ಆರ್ ಆರ್ ಟಿ ಸಿಬ್ಬಂದಿಗಳಾದ ಸಚಿನ್ ಶಂಕರ್ ಮುತ್ತ, ಸುಂದರ , ಭರತ, ಪ್ರದೀಪ್, ರಂಜೀತ್ ದನು, ದಿನು, ರೋಶನ್ ಇಟಿಎಫ್ ಸಿಬ್ಬಂದಿಗಳಾದ ಪೊನ್ನಣ್ಣ ಮತ್ತು ತಂಡದವರು ಭಾಗವಹಿಸಿದ್ದರು.ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆಯಿಂದ ಕೂಲಿ ಕಾರ್ಮಿಕರು ಮತ್ತು ಕೃಷಿಕರು ನಿಟ್ಟುಸಿರು ಬಿಡುವಂತಾಗಿದೆ.