ಈಗಾಗಲೇ ರಾಜ್ಯದಲ್ಲಿ 20 ಕ್ಷೇತ್ರಗಳ (20 Candidates) ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಬಿಜೆಪಿಗೆ (BJP) ಒಂದಷ್ಟು ಕ್ಷೇತ್ರಗಳಲ್ಲಿ ಅಸಮಾಧಾನದ ಬಿಸಿ ತಟ್ಟಿದ್ದರೂ ಕೂಡ , ಎಲ್ಲದರ ಪೈಕಿ ಅತಿಹೆಚ್ಚು ಬಂಡಾಯದ ಬೆಂಕಿ ದೊಡ್ಡಮಟ್ಟದಲ್ಲಿ ಸ್ಪೋಟಗೊಂಡಿರೋದು ಅಂದ್ರೆ ಅದು ದಾವಣಗೆರೆ (Davanagere) ಕ್ಷೇತ್ರದಲ್ಲಿ. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ (G.m.Siddeshwar) ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಗೆ (Gayatri siddeshwar)ಟಿಕೆಟ್ ನೀಡಿರೋದಕ್ಕೆ ಸ್ಥಳೀಯ ನಾಯಕರು ಮತ್ತು ಸ್ವತಃ ಮಾಜಿ ಸಚಿವರುಗಳೇ (X-ministers) ವಿರೋಧ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ (Davanagere) ಬಿಜೆಪಿ ಗೆಲ್ಲಬೇಕಾದರೆ ಅಭ್ಯರ್ಥಿಯನ್ನು ಬದಲಾಯಿಸಿ ಎಂದು ನಾಯಕರು ಹೈಕಮಾಂಡ್ ಗೆ (Highcommand) ಸಂದೇಶ ರವಾನಿಸಿದ್ದಾರೆ.

ದಾವಣಗೆರೆ ಕ್ಷೇತ್ರಕ್ಕೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಕೂಡ ಬಿಜೆಪಿಯ (BJP) ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಈ ಬಾರಿಯೂ ಟಿಕೆಟ್ ಜಿ.ಎಂ.ಸಿದೇಶ್ವರ್ (GM siddeshwar) ಕುಟುಂಬದ ಪಾಲಾಗಿದೆ. ಇದಕ್ಕೆ ರೇಣುಕಾಚಾರ್ಯ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ನಾಯಕರು ಬಹಿರಂಗವಾಗೆ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕೂ ಸಿದ್ದೇಶ್ವರ್ ಬಂದಿಲ್ಲ. ಸಾದಾ ಸ್ವಪಕ್ಷದವರನ್ನೇ ತುಳಿಯುವ ಕೆಲಸ ನಿರಂತರವಾಗಿ ಅವರಿಂದ ಆಗಿದೆ. ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ. ಇಂಥ ಅಭ್ಯರ್ಥಿಗಾಗಿ ಕೆಲ್ಸ ಮಾಡಲು ನಮಗೆ ಮನಸ್ಸಿಲ್ಲ.. ಗೆಲುವು ಬೇಕಿದ್ದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿ ಅಂತ ಉಳಿದ ನಾಯಕರು ಪಟ್ಟು ಹಿಡಿದಿದ್ದಾರೆ.

ಇದೇ ವಿಚಾರವಾಗಿ ಹೈಕಮಾಂಡ್ ಗೆ (Highcommand) ರೇಣುಕಾಚಾರ್ಯ ನೇತೃತ್ವದ ಬಿಜೆಪಿ ನಾಯಕರು ಡೆಡ್ ಲೈನ್ (Deadline) ವಿಧಿಸಿದ್ದು , 3 ದಿನದ ಒಳಗೆ ಅಭ್ಯರ್ಥಿ ಬದಲಾಯಿಸುವ ನಿರ್ಧಾರ ಘೋಷಿಸದಿದ್ದರೆ , ನಾವು ನಮ್ಮ ನಿರ್ಧಾರ ಪ್ರಕಟ ಮಾಡಲಿದ್ದೇವೆ ಎಂದು ಸಂದೇಶ ರವಾನಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಈ ನಾಯಕರ ಒತ್ತಡಕ್ಕೆ ಮಣಿದು ಅಭ್ಯರ್ಥಿಯನ್ನು ಬದಲಾಯಿಸೋ ಮನಸ್ಸು ಮಾಡುತ್ತೋ ಅಥವಾ ಈ ಅಸಮಾಧಾನವನ್ನ ಹೇಗೆ ತಣ್ಣಗಾಗಿಸುತ್ತೋ ಕಾದುನೋಡಬೇಕಿದೆ.