ಸಾಕಷ್ಟು ಜನ ಯುವಕರು ಜಿಮ್‌ನಲ್ಲಿ ತಮ್ಮ ಶಕ್ತಿ ಮೀರಿ ವರ್ಕೌಟ್ ಮಾಡುತ್ತಾರೆ. ಹೀಗೆ ವರ್ಕೌಟ್ ಮಾಡುವುದರಿಂದ ಹಲವು ಮಂದಿ ವಿವಿಧ ರೀತಿಯಾದ ಆತ್ತುಗಳನ್ನ ತಮ್ಮ ಮೈಮೇಲೆ ಎಳೆದುಕೊಂಡಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಇಂತಹ ಘಟನೆಗಳಿಗೆ ಸಾಕ್ಷಿ ಎಂಬಂತೆ ಜಿಮ್ ಟ್ರೈನರ್ ಆಗಿದ್ದ ವ್ಯಕ್ತಿಯೊಬ್ಬರು ತಮ್ಮ ಶಕ್ತಿ ಮೀರಿ ಭಾರ ಎತ್ತಲು ಹೋಗಿದ್ದಾರೆ ಈ ವೇಳೆ ಕುತ್ತಿಗೆ ಮುರಿದು ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಈತನ ದುರಂತ ಅಂತ್ಯಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಹೌದು ಜಿಮ್‌ನಲ್ಲಿ 210 ಕೆ.ಜಿ ಭಾರದ ಬಾರ್ಬೆಲ್ ಎತ್ತಲು ಪ್ರಯತ್ನಿಸುತ್ತಿದ್ದ ವೇಳೆ ಕುತ್ತಿಗೆ ಮೇಲೆ ಬಿದ್ದು ಫಿಟ್‌ನೆಸ್ ಟ್ರೈನರ್ ಜಸ್ಟಿನ್ ವಿಕಿ (33) ಮೃತ ಪಟ್ಟಿದ್ದಾರೆ.
ಜಸ್ಟಿನ್, ಭಾರ ಎತ್ತಲು ಪ್ರಯತ್ನಿಸುತ್ತಿದ್ದಾಗ ಬಾರ್ಬೆಲ್ ಸಮತೋಲನ ತಪ್ಪಿ ಜಸ್ಟಿನ್ ಅವರ ಕುತ್ತಿಗೆ ಮೇಲೆ ಬಿದ್ದಿದೆ ಹೀಗಾಗಿ ಕುತ್ತಿಗೆ ಮುರಿದಿದ್ದು, ಅವರನ್ನ ತಕ್ಷಣವೇ ತಕ್ಷಣವೇ ವಿಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಮೆದುಳಿಗೆ ಸಂಪರ್ಕಿಸುವ ನರಗಳಿಗೂ ಹಾನಿಯಾಗಿದ್ದ ಕಾರಣ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇನ್ನು ಜಸ್ಟಿನ್ ಅವರ ಸಾವಿಗೆ ರಡೈಸ್ ಜಿಮ್ ಗೌರವ ನಮನ ಸಲ್ಲಿಸಿದೆ ಬಾಡಿ ಬಿಲ್ಡಿಂಗ್ ಕ್ಷೇತ್ರ ಕಂಬನಿ ಮಿಡಿದಿದೆ.