ನಿರ್ದೇಶಕ ವಿಜಯ್ ಪ್ರಸಾದ್ ಕನ್ನಡ ಚಿತ್ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ವಯಸ್ಕ ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಅವರ ಚೊಚ್ಲ ನಿರ್ದೇಶನದ ಚಿತ್ರ ನೀರ್ ದೋಸೆ.
ಅದಕ್ಕೆ ಪೂರಕವೆಂಬಂತೆ ಪೆಟ್ರೋಮ್ಯಾಕ್ಸ್ ಚಿತ್ರವನ್ನ ಮಾಡಲಾಗಿದೆ. ಅನಾಥ ಎಂಬ ಪದಕ್ಕೆ ಚಿತ್ರದಲ್ಲಿ ಅರ್ಥ ನೀಡಲಾಗಿದೆ ಎಂದೇ ಹೇಳಬಹುದು. ಚಿತ್ರ ನೋಡುತ್ತಾ ಹೋದರೆ ಹೆಚ್ಚಿನ ಜನರು ಇದ್ದು ಇಲ್ಲದ ಹಾಗೇ ಬದುಕುತ್ತಿರುವುದು ಭಾಸವಾಗುತ್ತದೆ.
ಇಲ್ಲಿ ನಿರ್ದೇಶಕರು ಪ್ರಯೋಗಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಮೇಕಿಂಗ್ ವಿಚಾರವಾಗಿ ಹಾಗೂ ಪಾತ್ರಗಳು ನೇರವಾಗಿ ಪ್ರೇಕ್ಷಕನೊಂದಿಗೆ ಸಂವಹನ ನಡೆಸುತ್ತಾನೆ ಎಂಬುವಷ್ಟು ಕಥೆ ಜನರನ್ನು ಆಕರ್ಷಿಸುತ್ತದೆ.
ಕಥೆಯು ನಾಲ್ಕು ಜನ ಅನಾಥರ ಸುತ್ತ ಸಾಗುತ್ತದೆ. ಮೂವರು ಪುರುಷರು ಹಾಗೂ ಓರ್ವ ಮಹಿಳೆಯ ಸುತ್ತ. ಇವರೆಲ್ಲರು ಬಾಡಿಗೆಗೆ ಮನೆ ಹುಡುಕಾಟ ನಡೆಸುತ್ತಿರುತ್ತಾರೆ ಕೊನೆಗೆ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಅವರಿಗೆ ಮನೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾರೆ.
ಆದರೆ, ಮನೆ ಹುಡುಕಾಟದ ಸಮಯದಲ್ಲಿ ಪ್ರತಿ ಪಾತ್ರದ ವಿಭಿನ್ನ ವ್ಯಕ್ತಿತ್ವ, ಹಾಸ್ಯ, ಚೇಷ್ಠೆ ಹಾಗೂ ಹೃದಯ ಸ್ಪರ್ಶಿ ಸಂಭಾಷನೆಯೊಂದಿಗೆ ಸಾಂಪ್ರದಾಯಿಕ ವಿಚಾರಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ.
ಚಿತ್ರವು ಪಾತ್ರ, ಸಂಭಾಷಣೆ ಹಾಗೂ ನಟರ ಅಭಿನಯ ಇವೆಲ್ಲವು ಚಿತ್ರಕ್ಕೆ ಮೈಲೇಜ್ ನೀಡಿವೆ. ಸತೀಶ್ ನೀನಾಸಂ, ಹರಿಪ್ರಿಯಾ, ಕಾರುಣ್ಯ ರಾಮ್ ಹಾಗೂ ನಾಗಭೂಷಣ್ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಸುಧಾ ಬೆಳವಾಡಿ, ಪದ್ಮಜಾ ರಾವ್, ವಿಜಯಲಕ್ಷ್ಮೀ ಸಿಂಗ್, ಅಚ್ಯುತ್ ಕುಮಾರ್ ಹಾಗೂ ಸದಾತರುಣಿ ಸುಮನ್ ರಂಗನಾಥ್ ಇವರೆಲ್ಲರು ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ.
ಉಳಿದಂತೆ ತಾಂತ್ರಿಕ ಬಳಗದ ವಿಚಾರಕ್ಕೆ ಬರುವುದಾದರೆ ಸಂಕಲನಕಾರರು ತಮ್ಮ ಚಾತುರ್ಯದಿಂದಲ್ಲೇ ಗಮನ ಸೆಳೆಯುತ್ತಾರೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಎಂದಿನಂತೆ ಮೋಡಿ ಮಾಡಿದ್ದಾರೆ. ಚಿತ್ರವು ಜನರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾದಲ್ಲಿ ಸಿಕ್ಷೆಲ್ ತೆಗೆಯಲು ರೆಡಿ ಎಂದು ಚಿತ್ರತಂಡ ಹೇಳಿಕೊಂಡಿದೆ.