ಚಿಕ್ಕಮಗಳೂರು: ಅಯೋಧ್ಯೆಯ (Ayodhya) ರಾಮನಿಗೆ (Ram Lalla) ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ಭಕ್ತರೊಬ್ಬರು ಅರ್ಪಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಭಕ್ತರೊಬ್ಬರು ಈ ಬಿಲ್ಲು ಬಾಣವನ್ನು ಶೃಂಗೇರಿಗೆ ತಂದು ವಿಶೇಷ ಪೂಜೆ ಮಾಡಿಸಿದ್ದಾರೆ. ಮಠದ ಹಿರಿಯ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದ್ದಾರೆ. ಶೃಂಗೇರಿ ಮಠದ ಕಿರಿಯ ಗುರುಗಳಾದ ಮಿಧುಶೇಖರ ಶ್ರೀಗಳು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ಕೈಯಲ್ಲಿ ಹಿಡಿದು ಗಮನಿಸಿ, ಧನ್ಯತಾ ಭಾವ ಪ್ರದರ್ಶಿಸಿದ್ದಾರೆ.

ರಾಮನ ಭಕ್ತ ಚಲ್ಲಾ ಶ್ರೀನಿವಾಸ್ ಎಂಬ ಭಕ್ತರು ಅಯೋಧ್ಯೆಯ ರಾಮನಿಗೆ ಭಕ್ತಿ ಪೂರ್ವಕವಾಗಿ ನೀಡಿದ್ದಾರೆ. ಪೂಜೆ ಸಲ್ಲಿಸಿದ ನಂತರ ರಾಮನ ಈ ಬಿಲ್ಲು ಹಾಗೂ ಬಾಣವನ್ನು ಅರ್ಪಿಸಿದ್ದಾರೆ.