ಕಾಂಬೋಡಿಯಾ ದೇಶಕ್ಕೆ ತೆರಳುತ್ತಿರುವ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ ಇಂದು ಉಬುಂಟು ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ರತ್ನಪ್ರಭಾ ಅವರ ನೇತೃತ್ವದಲ್ಲಿ ಬುಧವಾರ (ಆಗಸ್ಟ್ 23) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ದೆಹಲಿ, ಜೈಪುರ, ಕೊಲ್ಕತ್ತಾ, ವಿಶಾಖಪಟ್ಟಣಂ, ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ ಹೈದರಾಬಾದ್, ಕೋಚ್ಚಿನ್ ರಾಜ್ಯಗಳ ಮಹಿಳೆಯರು ನಿಯೋಗದಲ್ಲಿದ್ದು, ಇದೆ 26 – 29 ರವರೆಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಭಾರತ ಹಾಗೂ ಕಾಂಬೋಡಿಯಾ ಸಂಸ್ಥೆಗಳ ನಡುವೆ 5 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಕಾಂಬೋಡಿಯಾ ಮಹಿಳಾ ಉದ್ಯಮಿಗಳ ನಿಯೋಗ ಅಧ್ಯೆಕ್ಷೆ ರತ್ನಪ್ರಭಾ ಅವರು ವಿವರಿಸಿದರು.
ಉಬುಂಟು ಸಂಸ್ಥಾಪಕರಾದ ರತ್ನಪ್ರಭಾ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಛಾಯಾ ನಂಜಪ್ಪ, ಎಫ್.ಕೆ.ಸಿ.ಸಿ.ಐ. ಸೇರಿದಂತೆ ವಿವಿಧ ಸಂಸ್ಥೆಯ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.
ಕಾಂಬೋಡಿಯಾ ಪ್ರವಾಸ ಫಲಪ್ರದವಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.