ಯಾದಗಿರಿ : ಮಾ.27: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಇಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಬಟ್ಟೆ ವ್ಯಾಪಾರಿಗಳಾದ ರಾಘವೇಂದ್ರ, ಶಿಲ್ಪಾ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಘಟನೆಯ ವಿವರ..
ಬಟ್ಟೆ ಅಂಗಡಿಯ ಮೇಲೆ ಇದ್ದ ಇನ್ನೊಂದು ಮನೆಯಲ್ಲಿ ಇವರು ವಾಸವವಾಗಿದ್ದರು. ಅಂಗಡಿಗೆ ತಗುಲಿದ ಬೆಂಕಿ ಇವರಿದ್ದ ಮನೆಗೂ ವ್ಯಾಪಿಸಿದೆ ತಕ್ಷಣ ಎಚ್ಚರಗೊಂಡು ಜೀವ ರಕ್ಷಣೆಗಾಗಿ ಮನೆಯಲ್ಲಿದ್ದ ಬಾತ್ ರೂಂಗೆ ತೆರಳಿದ್ದಾರೆ. ಆದ್ರೆ ಬೆಂಕಿ ಮತ್ತು ಹೊಗೆ ಸುತ್ತಿಕೊಂಡು ಉಸಿರುಗಟ್ಟಿ ದಂಪತಿಗಳು ಮೃತಪಟ್ಟಿದ್ದಾರೆ. ಇಂದು ಬೆಳಗಿನ ಜಾವ ಅವಘಡ ನಡೆದಿದ್ದು, ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.