ಮೈಸೂರು : ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು ಮಾಜಿ ಸಿಎಂ ಯಡಿಯೂರಪ್ಪರ ಕನಸು. ಮೇ 13ರಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಆಘಾತ ಕಾದಿದೆ. ಇದನ್ನು ತಡೆಯೋಕೆ ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ ಅಂತಾ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಮೈಸೂರಿನ ಟಿ. ನರಸೀಪುರದ ವಿಜಯ ಭಗವಾನ್ ಚಿತ್ರಮಂದಿರ ವೃತ್ತದಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನನ್ನ ಉಸಿರು ಇರುವವರೆಗೂ ವರುಣ ಜನರ ಕೈ ಬಿಡುವ ಮಾತೇ ಇಲ್ಲ. ಟಿ, ನರಸೀಪುರದಲ್ಲಿಯೂ ಡಾ. ರೇವಣ್ಣನನ್ನು ನೀವೆಲ್ಲ ಗೆಲ್ಲಿಸಲೇಬೇಕು ಎಂದು ಹೇಳಿದರು.
ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯ. ಜೆಡಿಎಸ್ಗೆ ಯಾರಿಗೂ ಬಹುಮತ ಬಾರದಿರಲಿ ಎಂಬ ಕನಸಿದೆ. ಕಾಂಗ್ರೆಸ್ ಇಡೀ ದೇಶದಲ್ಲಿಯೇ ದಿವಾಳಿಯಾಗಿದೆ ಎಂದು ವ್ಯಂಗ್ಯವಾಡಿದರು.